ಹಾವೇರಿ: ಇಲ್ಲಿಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಗೋದಾಮಿನಲ್ಲಿ ಉಚಿತವಾಗಿ ಸೋಯಾಬಿನ್ ಬೀಜಗಳ ವಿತರಣೆ ಆರಂಭಗೊಂಡಿದ್ದು, ಬೀಜಗಳನ್ನು ಪಡೆಯಲು ಮಂಗಳವಾರ ರೈತರು ಮುಗಿಬಿದ್ದರು.

ಕರ್ನಾಟಕ ಬೀಜ ನಿಗಮದಿಂದ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತ ಜಿಲ್ಲಾ ಕಚೇರಿ ಮೂಲಕ ಸೋಮವಾರದಿಂದ ಉಚಿತವಾಗಿ ಬೀಜ ವಿತರಣೆ ಆರಂಭಿಸಲಾಗಿದೆ. ಉಚಿತ ಬೀಜ ಸಿಗುವ ಮಾಹಿತಿ ತಿಳಿದ ಹಾವೇರಿ, ಹಾನಗಲ್, ಶಿಗ್ಗಾವಿ, ಬ್ಯಾಡಗಿ ತಾಲ್ಲೂಕಿನಿಂದಲೂ ರೈತರು ತಂಡೋಪತಂಡವಾಗಿ ಗೋದಾಮಿಗೆ ಬಂದಿದ್ದರು.

ಸೋಮವಾರ ಬೀಜ ವಿತರಣೆ ಆರಂಭಿಸಿದ್ದ ಅಧಿಕಾರಿಗಳು, ಪಹಣಿ ಆಧರಿಸಿ ಒಬ್ಬ ರೈತರಿಗೆ ಎರಡು ಚೀಲ ಸೋಯಾಬಿನ್ ಬೀಜ ನೀಡಿದ್ದರು. ಸಂಜೆಯವರೆಗೂ ಸರದಿಯಲ್ಲಿ ನಿಂತಿದ್ದ ರೈತರು, ಸರದಿ ಪ್ರಕಾರ ಬೀಜದ ಚೀಲ ಪಡೆದುಕೊಂಡಿದ್ದರು. ಬೀಜ ಪಡೆದ ರೈತರು, ಮತ್ತಷ್ಟು ರೈತರಿಗೆ ವಿಷಯ ತಲುಪಿಸಿದ್ದರು.

ಮಂಗಳವಾರ ನಸುಕಿನಲ್ಲಿಯೇ ಗೋದಾಮು ಎದುರು ಬಂದಿದ್ದ ರೈತರು ಸರದಿ ಪ್ರಕಾರ ಕಾಯುತ್ತಿದ್ದರು. ರೈತರ ಸಂಖ್ಯೆ ಹೆಚ್ಚಿದ್ದರಿಂದ, ಒಬ್ಬರಿಗೆ ಒಂದೇ ಚೀಲ ಬೀಜ ನೀಡುವುದಾಗಿ ಅಧಿಕಾರಿಗಳು ಘೋಷಿಸಿದರು. ಇದರಿಂದಾಗಿ ಆಕ್ರೋಶಗೊಂಡ ರೈತರು, ಎರಡು ಪೊಟ್ಟಣ ಬೇಕು ಎಂದು ಪಟ್ಟು ಹಿಡಿದರು. ಇದೇ ವಿಚಾರವಾಗಿ ರೈತರು ಹಾಗೂ ಅಧಿಕಾರಿಗಳ ನಡುವೆ ಜಟಾಪಟಿ ಶುರುವಾಯಿತು.

‘ಬೀಜ ನಿಗಮದಿಂದ ಪ್ರತಿ ವರ್ಷದಂತೆ ಈ ವರ್ಷವೂ ಬೀಜ ನೀಡುತ್ತಿದ್ದಾರೆ. ಆದರೆ, ಈ ಬಾರಿ ಸಮರ್ಪಕವಾಗಿ ಬೀಜ ನೀಡುತ್ತಿಲ್ಲ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ’ ಎಂದು ರೈತರು ದೂರಿದರು. ಪ್ರತಿಭಟನೆಗೂ ಮುಂದಾದರು. ಗೊಂದಲ ಉಂಟಾಗಿದ್ದರಿಂದ, ಕೆಲ ಹೊತ್ತು ಬೀಜ ವಿತರಣೆ ಬಂದ್ ಮಾಡಲಾಗಿತ್ತು.

ಸ್ಥಳಕ್ಕೆ ಬಂದ ಪೊಲೀಸರು, ರೈತರನ್ನು ಸಮಾಧಾನಪಡಿಸಿದರು. ನಂತರ, ರೈತರನ್ನು ಸರದಿ ಪ್ರಕಾರ ನಿಲ್ಲಿಸಿದರು. ಬೀಜಗಳ ಕೊರತೆ ಇದ್ದಿದ್ದರಿಂದ, ಒಬ್ಬ ರೈತರಿಗೆ ಒಂದೇ ಚೀಲ ಲಭ್ಯವಾಯಿತು. ಸಂಜೆಯವರೆಗೂ 300 ಕ್ವಿಂಟಲ್ ಬೀಜ ವಿತರಣೆ ನಡೆಯಿತು.

ಪರೀಕ್ಷಾರ್ಥ ಬೀಜ ವಿತರಣೆ: ‘ಕರ್ನಾಟಕ ಬೀಜ ನಿಗಮ ಹಾಗೂ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟವು ಪರೀಕ್ಷಾರ್ಥವಾಗಿ ಸೋಯಾಬಿನ್ ಬೀಜಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳನ್ನು ರೈತರಿಗೆ ಉಚಿತವಾಗಿ ನೀಡುತ್ತದೆ. ರೈತರು ಬೆಳೆ ಬೆಳೆದ ನಂತರ, ಬೆಳೆಯನ್ನೂ ವಾಪಸು ಖರೀದಿ ಮಾಡುತ್ತದೆ’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

‘ಕೆಲ ಆಯ್ದ ಗ್ರಾಮಗಳಿಗೆ ಸೋಯಾಬಿನ್ ಬೀಜ ವಿತರಿಸುವ ಉದ್ದೇಶವಿತ್ತು. ಆದರೆ, ಜಿಲ್ಲೆಯ ಹಲವು ಕಡೆಯಿಂದ ರೈತರು ಬಂದಿದ್ದರು. ಪಹಣಿ ಪರಿಶೀಲಿಸಿ ಹಲವರಿಗೆ ಬೀಜ ವಿತರಿಸಲಾಯಿತು. ಮಂಗಳವಾರ ಬೀಜಕ್ಕಾಗಿ ಹೆಚ್ಚಿನ ರೈತರು ಬಂದಿದ್ದರಿಂದ, ಗೊಂದಲ ಉಂಟಾಯಿತು. ದಟ್ಟಣೆ ನಿಯಂತ್ರಿಸಲು ಆಗಲಿಲ್ಲ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-22-1414739308

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.