ಹಾವೇರಿ ತಾಲ್ಲೂಕಿನ ಕರ್ಜಗಿಯ ರೈತ ಸಂಪರ್ಕ ಕೇಂದ್ರದ ಎದುರು ಬೀಜ ಖರೀದಿಗಾಗಿ ಗುರುವಾರ ಸೇರಿದ್ದ ರೈತರು – ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ

ಉತ್ತಮ ಮಳೆಯಾಗಿದ್ದು, ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದೇವೆ. ಬೀಜಕ್ಕೆ ಹೆಚ್ಚು ರೈತರು ಬರುತ್ತಾರೆ ಎಂಬ ಮಾಹಿತಿ ಇದ್ದರೂ ಹೆಚ್ಚುವರಿ ಕೌಂಟರ್ ತೆರೆದಿಲ್ಲ. ಬೀಜಕ್ಕಾಗಿ ದಿನಗಟ್ಟಲೇ ಕಾಯುವಂತಾಗಿದೆ
ಮಹೇಶ ಹಿರೇಮಠ, ರೈತ, ಕೋಣನತಂಬಿಗಿ ಹಾವೇರಿ ತಾಲ್ಲೂಕಿನ ಕರ್ಜಗಿಯ ರೈತ ಸಂಪರ್ಕ ಕೇಂದ್ರದ ಎದುರು ಬುಧವಾರ ಮಲಗಿದ್ದ ರೈತರು ಗುರುವಾರ ಚಾದರ ಸಮೇತ ಸರದಿಯಲ್ಲಿ ನಿಂತಿದ್ದರು
– ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ
ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಎದುರು ಮಲಗಲು ತಂದಿದ್ದ ಚಾದರಗಳ ಜೊತೆಯಲ್ಲಿರುವ ರೈತರು

ಎಂಟು ದಿನದಿಂದ ಬೀಜಕ್ಕಾಗಿ ಅಲೆದಾಡುತ್ತಿದ್ದೇವೆ. ಗುರುವಾರದಿಂದ ಬೀಜ ನೀಡುತ್ತಿದ್ದರೂ ಅದು ಸಮರ್ಪಕವಾಗಿಲ್ಲ. ಬೀಜ ಸಿಗುವುದು ತಡವಾದರೆ, ನಾವು ಬಿತ್ತನೆ ಮಾಡುವುದು ಯಾವಾಗ?
ಬೀರಪ್ಪ, ರೈತ, ಕರ್ಜಗಿ ಹಾವೇರಿ ನಗರದ ರೈತ ಸಂಪರ್ಕ ಕೇಂದ್ರದ ಎದುರು ಬೀಜ ಖರೀದಿಗಾಗಿ ಗುರುವಾರ ಜಮಾಯಿಸಿದ್ದ ರೈತರು
ರಟ್ಟೀಹಳ್ಳಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಎದುರು ರೈತರ ಸರದಿ
ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ಸೇರಿದ್ದ ರೈತರು

ಜಿಲ್ಲೆಯಲ್ಲಿ ಅಗತ್ಯವಿದ್ದಷ್ಟು ಬೀಜಗಳ ದಾಸ್ತಾನಿದೆ. ಆತಂಕ ಪಡಬೇಕಿಲ್ಲ. ರೈತರು ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಕಾರಣ ಆನ್‌ಲೈನ್ ನೋಂದಣಿ ತಡವಾಗುತ್ತಿದೆ. ಎಲ್ಲರಿಗೂ ಬೀಜಗಳು ಸಿಗಲಿವೆ
ಮಲ್ಲಿಕಾರ್ಜುನ, ಜಂಟಿ ನಿರ್ದೇಶಕ, ಕೃಷಿ ಇಲಾಖೆಕೇಂದ್ರಗಳಲ್ಲಿ ಮೂಲಸೌಲಭ್ಯ ಕೊರತೆ
ಜಿಲ್ಲೆಯ ಬಹುತೇಕ ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಮಾರಲಾಗುತ್ತಿದೆ. ಆದರೆ, ಖರೀದಿಗೆ ಬರುವ ರೈತರಿಗೆ ನೆರಳು, ಕುಡಿಯುವ ನೀರು, ಕೂರಲು ಆಸನ ವ್ಯವಸ್ಥೆಯಿಲ್ಲ.
‘ರಾತ್ರಿಯೇ ಚಾದರ (ಬೆಡ್‌ಶಿಟ್) ಸಮೇತ ಕೇಂದ್ರಕ್ಕೆ ಬಂದು ಮಲಗುತ್ತೇವೆ. ನಿತ್ಯದ ಕರ್ಮಗಳನ್ನು ಬಯಲಿನಲ್ಲೇ ಮುಗಿಸಿ, ಕೇಂದ್ರದ ಎದುರು ಬಿಸಿಲು, ಮಳೆಯೆನ್ನದೇ ನಿಲ್ಲುತ್ತೇವೆ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಸರದಿ ತಪ್ಪುವ ಭಯದಲ್ಲಿ, ನೀರು ಕುಡಿಯಲು ಸಹ ಹೋಗುತ್ತಿಲ್ಲ. ರೈತರ ಹಿತದೃಷ್ಟಿಯಿಂದ ಮೂಲಸೌಲಭ್ಯ ಕಲ್ಪಿಸಿ’ ಎಂದು ರೈತರು ಆಗ್ರಹಿಸಿದರು.