ಹಾವೇರಿ: ‘ಮನೆಯ ಪಾಯ ಅಗೆಯುವಾಗ 2 ಕೆ.ಜಿ. ಚಿನ್ನದ ನಿಧಿ ಸಿಕ್ಕಿದೆ. ಅದನ್ನು ₹ 5 ಲಕ್ಷಕ್ಕೆ ಕೊಡುತ್ತೇವೆ’ ಎಂದು ಹೇಳಿ ನಂಬಿಸಿ ₹ 5 ಲಕ್ಷ ನಗದು ಕಿತ್ತೊಯ್ಯಲಾಗಿದ್ದು, ಈ ಬಗ್ಗೆ ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೇ 6ರಂದು ನಡೆದ ಕೃತ್ಯದ ಬಗ್ಗೆ ಸಂತ್ರಸ್ತ ಶಶಿಕುಮಾರ ದೂರು ನೀಡಿದ್ದಾರೆ. ಆರೋಪಿ ಮಂಜಣ್ಣ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿಜಯಪುರ ಜಿಲ್ಲೆಯ ಶಶಿಕುಮಾರ ಅವರು ಹುಬ್ಬಳ್ಳಿಯಲ್ಲಿ ಪರೀಕ್ಷೆಯೊಂದಕ್ಕೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಆರೋಪಿ ಪರಿಚಯವಾಗಿತ್ತು. ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಶಶಿಕುಮಾರ ಅವರಿಗೆ ಕರೆ ಮಾಡಿದ್ದ ಆರೋಪಿ, ‘ನಮ್ಮ ಮನೆಯ ಪಾಯ ಅಗೆಯುವಾಗ, 2 ಕೆ.ಜಿ. ಚಿನ್ನದ ನಿಧಿ ಸಿಕ್ಕಿದೆ. ಅದನ್ನು ನಿಮಗೆ ₹5 ಲಕ್ಷಕ್ಕೆ ಕೊಡುತ್ತೇವೆ’ ಎಂದಿದ್ದ. ಆತನ ಮಾತು ನಂಬಿದ್ದ ದೂರುದಾರ, ತಮ್ಮೂರಿನಿಂದ ಹುಬ್ಬಳ್ಳಿಗೆ, ನಂತರ ರಟ್ಟೀಹಳ್ಳಿಗೆ ಬಂದಿದ್ದರು’ ಎಂದು ಪೊಲೀಸರು ತಿಳಿಸಿದರು.

ದೂರುದಾರ ಹಾಗೂ ಆತನ ಸಂಬಂಧಿ, ಸ್ಥಳಕ್ಕೆ ಹೋಗಿದ್ದರು. ಸ್ಥಳದಲ್ಲಿದ್ದ ಇಬ್ಬರು ಆರೋಪಿಗಳು, ದೂರುದಾರರನ್ನು ಸಮೀಪದ ಚಾನಲ್ ಬಳಿ ಕರೆದೊಯ್ದಿದ್ದರು’ ಎಂದರು.

‘ದೂರುದಾರರನ್ನು ಬೆದರಿಸಿದ್ದ ಆರೋಪಿಗಳು, ಅವರ ಬಳಿಯ ₹ 5 ಲಕ್ಷ ನಗದು ಹಾಗೂ 50 ಗ್ರಾಂ ತೂಕದ ಬೆಳ್ಳಿ ಬ್ರಾಸ್ಲೈಟ್ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-22-841292554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.