ಹಾವೇರಿ: ಇಲ್ಲಿಯ ಜಿಲ್ಲಾ ಪಂಚಾ ಯಿತಿಯ (ಜಿ.ಪಂ.) ವಿಡಿಯೋ ಕಾನ್ಫರೆನ್ಸ್ ಸಭಾಭವನದಲ್ಲಿ ನಡೆದ ‘ಪ್ರಗತಿ ಪರಿಶೀಲನಾ ಸಭೆ’ಗೆ ಗೈರು ಹಾಜರಾದ ಕಾರಣಕ್ಕಾಗಿ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿ.ಪಂ. ನೂತನ ಸಿಇಒ ದಲ್ಜಿತ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಗಳಿಗೆ ನೇಮಕವಾಗಿರುವ ಆಡಳಿತಾಧಿಕಾರಿಗಳೊಂದಿಗೆ ಇತ್ತೀಚೆಗೆ ಸಭೆ ನಿಗದಿಪಡಿಸಲಾಗಿತ್ತು. ಗ್ರಾಮ ಪಂಚಾಯಿತಿ ಮಟ್ಟದ ಯೋಜನೆಗಳ ಪ್ರಗತಿ ಪರಿಶೀಲನೆ ಪರಿಶೀಲಿಸಬೇಕಿತ್ತು.

ಇದೇ ಸಭೆಗೆ ಆಡಳಿತಾಧಿಕಾರಿ ಗಳು ಗೈರಾಗಿದ್ದಕ್ಕೆ ಸಿಇಒ ಅಸಮಾಧಾನ ಹೊರಹಾಕಿದರು.

‘ಸಭೆಯಲ್ಲಿ ಆಡಳಿತಾಧಿಕಾರಿ ಉಪಸ್ಥಿತಿ ಮುಖ್ಯವಾಗಿದೆ. ಆದರೆ, ಯಾರೆಲ್ಲ ಆಡಳಿತಾಧಿಕಾರಿಗಳು ಗೈರು ಹಾಜರಾಗಿದ್ದಾರೆಯೋ ಅವರೆಲ್ಲರಿಗೂ ತಕ್ಷಣ ನೋಟಿಸ್ ಜಾರಿ ಮಾಡಿ’ ಎಂದು ಸಿಇಒ ದಲ್ಜೀತ್ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಸರ್ಕಾರಿ ಕರ್ತವ್ಯಗಳ ನಿರ್ವಹಣೆಯಲ್ಲಿ ಶಿಸ್ತು ಮತ್ತು ಹೊಣೆಗಾರಿಕೆ ಅತ್ಯಂತ ಮುಖ್ಯವಾಗಿದೆ. ಗೈರು ಹಾಜರಾಗುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದರು.

‘ಬ್ಯಾಂಕ್ ಖಾತೆ ನಿರ್ವಹಣೆ, ತೆರಿಗೆ ಮತ್ತು ಶುಲ್ಕ ವಸೂಲಿ, ಆದಾಯ -ವೆಚ್ಚ, ಲೆಕ್ಕಪತ್ರ ಮತ್ತು ಬಜೆಟ್ ತಯಾರಿ, ಅನುದಾನ ಬಳಕೆ ಮತ್ತು ಲೆಕ್ಕ ಪರಿ ಶೋಧನೆ ಅನುಸರಣೆ, ರಸ್ತೆ, ನೀರು, ಚರಂಡಿ, ಬೀದಿ ದೀಪ ಕಾಮಗಾರಿಗಳ ಮೇಲ್ವಿಚಾರಣೆ, ಕಾಮಗಾರಿಗಳ ಗುಣಮಟ್ಟ ಪರಿಶೀಲನೆ, ಪ್ರಗತಿ ವರದಿ ಸಲ್ಲಿಕೆ, ನರೇಗಾ ಯೋಜನೆಯ ಜಾಬ್ ಕಾರ್ಡ್ ವಿತರಣೆ, ಕೆಲಸ ಒದಗಿಸುವುದು ಮತ್ತು ಮಸ್ಟರ್ ರೋಲ್ ನಿರ್ವಹಣೆ, ಕೂಲಿ ಪಾವತಿ ಮೇಲ್ವಿಚಾರಣೆ, ಸಾಮಾಜಿಕ ಲೆಕ್ಕ ಪರಿಶೋಧನೆಗೆ ದಾಖಲೆ ಒದಗಿಸುವುದು, ಗ್ರಾಮ ಸ್ವಚ್ಛತಾ ಕಾರ್ಯಕ್ರಮ ಜಾರಿ, ಕಸದ ವಿಲೇವಾರಿ ಮತ್ತು ಕುಡಿಯುವ ನೀರಿನ ಸ್ವಚ್ಛತೆ, ಆರೋಗ್ಯ ಇಲಾಖೆಯೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಸಾರ್ವಜನಿಕ ಶೌಚಾಲಯ ನಿರ್ವ ಹಣೆ ಮಾಡಬೇಕು. ವಸತಿ, ಪಿಂಚಣಿ, ಸ್ವಚ್ಛ ಭಾರತ್, ಜಲ ಜೀವನ್ ಮಿಷನ್ ಯೋಜನೆಗಳ ಜಾರಿ, ಮಹಿಳಾ, ಮಕ್ಕಳ ಮತ್ತು ರೈತರ ಕಲ್ಯಾಣ ಯೋಜನೆ ಅನು ಷ್ಠಾನ, ಚುನಾವಣೆ ಮತ್ತು ಸಮೀಕ್ಷೆಯಡಿ ಮತದಾರರ ಪಟ್ಟಿ ಪರಿಷ್ಕರಣೆ ಸಹಕಾರ, ಚುನಾವಣಾ ಕರ್ತವ್ಯ ನಿರ್ವಹಣೆ, ಜನಗಣತಿ ಮತ್ತು ಸಮೀಕ್ಷಾ ಕಾರ್ಯಗಳಲ್ಲಿ ಸಹಾಯ ಮಾಡಬೇಕು’ ಎಂದು ಆಡಳಿತಾಧಿಕಾರಿಗಳಿಗೆ ಸೂಚಿಸಿದರು.

‘ಪಂಚಾಯತ್ ರಾಜ್ ಕಾಯ್ದೆಯ ಜಾರಿ, ಆರ್ಟಿಐ ಕಾಯ್ದೆ, ಅಕ್ರಮ ನಿರ್ಮಾಣಗಳ ವಿರುದ್ಧ ಕ್ರಮ, ತನಿಖೆ ಮತ್ತು ಪರಿಶೀಲನೆಗೆ ದಾಖಲೆ ಸಲ್ಲಿಕೆ, ವಿಪತ್ತು ನಿರ್ವಹಣೆಯಡಿ ನೆರೆ, ಬರ, ಸಾಂಕ್ರಾಮಿಕ ಸಂದರ್ಭಗಳಲ್ಲಿ ತುರ್ತು ಕಾರ್ಯಾಚರಣೆ, ಪರಿಹಾರ ಕಾರ್ಯ ಗಳ ಸಮನ್ವಯ ಹಾಗೂ ಹಾನಿ ವರದಿ ಸಲ್ಲಿಕೆಯನ್ನು ಅತ್ಯಂತ ಜವಾಬ್ದಾರಿಯಿಂದ ಮಾಡಬೇಕು’ ಎಂದು ಹೇಳಿದರು.

‘ಇ–ಸ್ವತ್ತು, ಪಂಚತಂತ್ರ, ಸೇವಾ ಸಿಂಧು ಬಳಕೆ, ಆನ್ಲೈನ್ ದಾಖಲೆ ನಿರ್ವಹಣೆ, ನೇರ ನಗದು ವರ್ಗಾವಣೆ ಮತ್ತು ಎಫ್ಎಫ್ಎಂಎಸ್ ಅನುಸರಣೆ ಜೊತೆಗೆ ಗ್ರಾಮ ಪಂಚಾಯಿತಿಯನ್ನು ಪಾರದರ್ಶಕ, ಜನಪರವಾಗಿ ಮಾಡಬೇಕು’ ಎಂದರು.

ವಾರಕ್ಕೆ ಎರಡು ದಿನ ಭೇಟಿ ಕಡ್ಡಾಯ: ‘ಗ್ರಾ.ಪಂ.ವಾರು ನಿಯೋಜಿಸಿರುವ ಪ್ರತಿ ಆಡಳಿತಾಧಿಕಾರಿಯು ತಮಗೆ ವಹಿಸಲಾದ ಪಂಚಾಯಿತಿಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ವಿಶೇಷವಾಗಿ ಪ್ರತಿ ಮಂಗಳ ವಾರ ಹಾಗೂ ಗುರುವಾರ ಕಡ್ಡಾಯವಾಗಿ ಭೇಟಿ ನೀಡಿ, ಕುಂದು ಕೊರತೆ ಸಭೆ ನಡೆಸಬೇಕು. ಸಭೆಯ ಕುರಿತು ಗ್ರಾಮಸ್ಥರಿಗೆ ಮುಂಚಿತವಾಗಿ ಢಂಗು ರದ ಮೂಲಕ ತಿಳಿಸಬೇಕು’ ಎಂದು ಸಿಇಒ ತಿಳಿಸಿದರು.

‘ಗ್ರಾಮ ಪಂಚಾಯಿತಿಗಳ ಕಾರ್ಯ ವೈಖರಿ ಕುರಿತು ನಿಯಮಿತವಾಗಿ ಜಿಲ್ಲಾ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ಗಳನ್ನು ನಡೆಸಲಾಗುವುದು. ಸರ್ಕಾರದ ಯೋಜನೆ ಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಗ್ರಾಮೀಣ ಜನರಿಗೆ ಉತ್ತಮ ಸೇವೆ ಒದಗಿಸುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ’ ಎಂದರು.

ಜಿ.ಪಂ. ಉಪ ಕಾರ್ಯದರ್ಶಿ ಪುನಿತ್ ಸಭೆಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-22-156162299

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.