ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಯಳವಟ್ಟಿ ಗ್ರಾಮದ ಬಳಿ ತೋಟಗಾರಿಕಾ ಬೆಳೆಗಳ ಸಂಸ್ಕರಣಾ ಘಟಕ (ಆಹಾರ ಉದ್ಯಾನ) ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ರಾಜ್ಯ ಸರ್ಕಾರ, ಯೋಜನೆಯ ಅನುಷ್ಠಾನಕ್ಕೆ ತಗುಲುವ ₹ 35 ಕೋಟಿ ಹಣವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸಂಗ್ರಹಿಸಲು ಮುಂದಾಗಿದೆ.

ಯಳವಟ್ಟಿ ಗ್ರಾಮದ ಬಳಿ ಇರುವ 28 ಎಕರೆ 3 ಗುಂಟೆ ಜಾಗ ಗುರುತಿಸಿದ್ದ ತೋಟಗಾರಿಕೆ ಇಲಾಖೆ, ಘಟಕ ನಿರ್ಮಾಣಕ್ಕೆ ಎಲ್ಲ ಸೌಕರ್ಯ ಇರುವುದಾಗಿ ಪ್ರಸ್ತಾವ ಸಲ್ಲಿಸಿತ್ತು. ಅದೇ ಪ್ರಸ್ತಾವಕ್ಕೆ ಈಗ ಒಪ್ಪಿಗೆ ಸಿಕ್ಕಿದೆ.

ಘಟಕ ನಿರ್ಮಾಣಕ್ಕೆ ನೇರವಾಗಿ ಹಣ ನೀಡದ ರಾಜ್ಯ ಸರ್ಕಾರ, ಪಿಪಿಪಿ ಮಾದರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲು ಅನುಮತಿ ನೀಡಿದೆ. ಯಾರಾದರೂ ಖಾಸಗಿ ಹೂಡಿಕೆದಾರರು ₹ 35 ಕೋಟಿ ಹೂಡಿಕೆ ಮಾಡಲು ಮುಂದೆ ಬಂದರಷ್ಟೇ ಈ ಘಟಕ ನಿರ್ಮಾಣವಾಗಲಿದೆ. ಇಲ್ಲದಿದ್ದರೆ, ಈ ಭಾಗದ ಜನರ ಕನಸು ಕನಸಾಗಿಯೇ ಉಳಿಯಲಿದೆ.

ಘಟಕ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದಕ್ಕೆ ಜನರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಹಣಕ್ಕಾಗಿ ಖಾಸಗಿ ಹೂಡಿಕೆದಾರರ ಬಳಿ ಕೈಯೊಡ್ಡುತ್ತಿರುವುದಕ್ಕೆ ಅಸಮಾಧಾನ ಹೊರಹಾಕುತ್ತಿದ್ದಾರೆ.

‘ಸರ್ಕಾರವೇ ನೇರವಾಗಿ ಘಟಕ ನಿರ್ಮಿಸಬೇಕಿತ್ತು. ಬೇಡಿಕೆಗೆ ತಕ್ಕಂತೆ ಉದ್ಯಮಿಗಳಿಗೆ ಜಾಗವನ್ನು ಬಾಡಿಗೆ ನೀಡಬಹುದಿತ್ತು. ಘಟಕವನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ನೀಡುತ್ತಿರುವುದು ಸರಿಯಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

‘ತುಮಕೂರು ಬಳಿ ಈಗಾಗಲೇ ಪಿಪಿಪಿ ಮಾದರಿಯಲ್ಲಿ ಫುಡ್ ಪಾರ್ಕ್ ಇದೆ. ರಾಜಧಾನಿಗೆ ಹತ್ತಿರವಿರುವ ಅಲ್ಲಿಯೇ ತಕ್ಕಮಟ್ಟಿಗೆ ಯಶಸ್ವಿಯಾಗಿಲ್ಲ. ವಿಜಯಪುರದಲ್ಲೂ ವೈನ್ ಘಟಕ ಆರಂಭವಾಗಿಲ್ಲ. ಯಳವಟ್ಟಿಯಲ್ಲಿ ಘಟಕ ನಿರ್ಮಿಸಲು ಯಾವ ಹೂಡಿಕೆದಾರರು ಬರಲು ಸಾಧ್ಯ?. ಸರ್ಕಾರವೇ ಘಟಕ ನಿರ್ಮಿಸಿ, ಖಾಸಗಿಯವರಿಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಮೂಲ ಸೌಕರ್ಯ ಚಿಂತೆ: ಜಿಲ್ಲಾ ಕೇಂದ್ರದಿಂದ 56 ಕಿ.ಮೀ. ಹಾಗೂ ತಾಲ್ಲೂಕು ಕೇಂದ್ರದಿಂದ 24 ಕಿ.ಮೀ. ದೂರದಲ್ಲಿರುವ ಯಳವಟ್ಟಿ ಬಳಿ ಒಳ್ಳೆಯ ಜಾಗವಿದೆ. ಆದರೆ, ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳ ಕೊರತೆ ಉಂಟಾಗುವ ಲಕ್ಷಣಗಳಿವೆ.

ಶಿವಮೊಗ್ಗ– ತಡಸ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಾಗದಲ್ಲಿ ಘಟಕ ನಿರ್ಮಾಣಕ್ಕೆ ಯೋಜಿಸಲಾಗಿದೆ. ರಸ್ತೆ ಸಂಪರ್ಕ ಉತ್ತಮವಾಗಿದೆ. ಘಟಕಕ್ಕೆ ಮುಖ್ಯವಾಗಿ ನೀರಿನ ಅವಶ್ಯಕತೆಯಿದೆ. ಜಾಗದ ಬಳಿಯೇ ನೀರಾವರಿ ಯೋಜನೆಯೊಂದರ ಪೈಪ್ ಹಾದು ಹೋಗಿದ್ದು, ಅದೇ ನೀರನ್ನು ಘಟಕಕ್ಕೆ ನೀಡಲು ಪ್ರಸ್ತಾವದಲ್ಲಿ ತಿಳಿಸಲಾಗಿದೆ. ಆದರೆ, ನೀರಾವರಿ ಯೋಜನೆ ನೀರನ್ನು ಘಟಕಕ್ಕೆ ನೀಡಿದರೆ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಯಾವ ನೀರು ಬಳಸುತ್ತಾರೆಂದು ಜನರು ಪ್ರಶ್ನಿಸುತ್ತಿದ್ದಾರೆ.

ಟೆಂಡರ್ ಪ್ರಕ್ರಿಯೆ ಶೀಘ್ರ: ‘ಘಟಕ ನಿರ್ಮಾಣಕ್ಕೆ ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ. ಯಾವುದಾದರೂ ಖಾಸಗಿ ಕಂಪನಿಯವರು ಆಸಕ್ತಿ ತೋರಿದರೆ, ಅವರಿಗೆ ಘಟಕದ ನಿರ್ಮಾಣ ಜವಾಬ್ದಾರಿ ವಹಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹು ಹಣ್ಣು (ಮಾವು, ಬಾಳೆ, ಫೈನಾಫಲ್, ಕಲ್ಲಂಗಡಿ, ಪಪ್ಪಾಯಿ), ತರಕಾರಿ (ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ, ಕ್ಯಾಬೇಜ್, ಆಲೂಗಡ್ಡೆ) ಹಾಗೂ ಸಾಂಬಾರು (ಶುಂಠಿ, ಮೆಣಸಿನ ಕಾಳು, ವೀಳ್ಯದೆಲೆ, ಬೆಳ್ಳುಳ್ಳಿ) ಬೆಳೆಗಳ ಸಂಸ್ಕರಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಐಚ್ಛಿಕವಾಗಿ ಮೆಕ್ಕೆಜೋಳ, ಬಹುಧಾನ್ಯ, ಜೈವಿಕ ಎಥೆನಾಲ್ ಘಟಕಗಳ ನಿರ್ಮಾಣಕ್ಕೆ ಅವಕಾಶವಿದೆ’ ಎಂದರು.

28 ಎಕರೆ 3 ಗುಂಟೆ ಜಾಗ ಟೆಂಡರ್ ಪ್ರಕ್ರಿಯೆ ಶೀಘ್ರ ಮೂಲ ಸೌಕರ್ಯ ಚಿಂತೆ

‘700 ಜನರಿಗೆ ಉದ್ಯೋಗ ನಿರೀಕ್ಷೆ’ ‘ಜಿಲ್ಲೆಯು ಕೃಷಿ ಮತ್ತು ತೋಟಗಾರಿಕೆ ಉತ್ಪಾದನೆಯ ಕೇಂದ್ರವಾಗಿದ್ದರೂ ಪ್ರಾಥಮಿಕ–ಮಾಧ್ಯಮಿಕ ಸಂಸ್ಕರಣೆಗೆ ಈ ಪ್ರದೇಶದಲ್ಲಿ ಸೌಕರ್ಯಗಳ ಕೊರತೆಯಿದೆ. ಇದೇ ಕಾರಣಕ್ಕೆ ಸರ್ಕಾರ ಘಟಕ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಇದರಿಂದ ರೈತರ ಬೆಳೆಗೆ ಉತ್ತಮ ಬೆಲೆ ಸಿಗಲಿದ್ದು ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ. ಸುಮಾರು 700 ಜನರಿಗೆ ಉದ್ಯೋಗ ಲಭ್ಯವಾಗಲಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ತಿಳಿಸಿದರು. ‘ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಅಡಿಯಲ್ಲಿ ಈ ಘಟಕ ಕಾರ್ಯನಿರ್ವಹಿಸಲಿದೆ. ಹಾವೇರಿ ಮಾತ್ರವಲ್ಲದೇ ಧಾರವಾಡ ಉತ್ತರ ಕನ್ನಡ ಶಿವಮೊಗ್ಗ ಹಾಗೂ ಗದಗ ಜಿಲ್ಲೆಗಳ ರೈತರಿಗೆ ಘಟಕದಿಂದ ಅನುಕೂಲವಾಗಲಿದೆ’ ಎಂದರು.

‘30 ವರ್ಷ ಬಾಡಿಗೆ’ ‘ಘಟಕ ನಿರ್ಮಾಣಕ್ಕೆ ಇಚ್ಛಿಸುವ ಖಾಸಗಿಯವರಿಗೆ ಯಳವಟ್ಟಿ ಬಳಿಯ ಜಾಗವನ್ನು 30 ವರ್ಷಗಳ ಅವಧಿಗೆ ಬಾಡಿಗೆ ನೀಡಲು ತೀರ್ಮಾನಿಸಲಾಗಿದೆ. ಹಣ ಹೂಡಿಕೆ ಮಾಡುವ ಕಂಪನಿಯವರು 30 ವರ್ಷದಲ್ಲಿ ಹಣವನ್ನು ಲಾಭದ ಸಮೇತ ವಾಪಸು ಪಡೆಯಬೇಕು. ಈ ನಿಯಮದಿಂದಾಗಿ ಖಾಸಗಿಯವರು ಘಟಕ ನಿರ್ಮಾಣಕ್ಕೆ ಆಸಕ್ತಿ ತೋರಿಸುವುದಿಲ್ಲ’ ಎಂದು ಸ್ಥಳೀಯರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.