ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಂತ್ರ್ಯೋತ್ಸವ: ಹರ್ ಘರ್ ತಿರಂಗಾ ಅಭಿಯಾನ

Published : 12 ಆಗಸ್ಟ್ 2024, 16:20 IST
Last Updated : 12 ಆಗಸ್ಟ್ 2024, 16:20 IST
ಫಾಲೋ ಮಾಡಿ
Comments

ಹಾವೇರಿ: ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂಭ್ರಮದಲ್ಲಿ ದೇಶಾಭಿಮಾನದ ಜಾಗೃತಿ ಮೂಡಿಸಲು ಆಗಸ್ಟ್‌ 13ರಿಂದ 15ರವರೆಗೆ ‘ಹರ್ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಕೋರಿದ್ದಾರೆ.

ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸೋಮವಾರ ಸಭೆ ನಡೆಸಿದ ವಿಜಯ ಮಹಾಂತೇಶ, ‘ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ. ಭಾರತ ಧ್ವಜ ಸಂಹಿತೆ ಪ್ರಕಾರ ಧ್ವಜಾರೋಹಣ ನಿಯಮಗಳನ್ನು ಪಾಲಿಸಬೇಕು. ಸೂರ್ಯಾಸ್ತದವರೆಗೆ ಮಾತ್ರ ಧ್ವಜ ಹಾರಿಸಬೇಕು. ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು’ ಎಂದರು.

‘ರಾಷ್ಟ್ರಧ್ವಜ ಆಯತವಾಗಿರಬೇಕು. ಮನೆಯ ಅತೀ ಎತ್ತರದ ಸ್ಥಳದಲ್ಲಿ ಹಾರಿಸಬೇಕು, ಧ್ವಜ ಸ್ತಂಭ, ಯಾವ ಕಡೆಗೂ ವಾಲಿರಬಾರದು. ಧ್ಚಜಕ್ಕಿಂತ ಎತ್ತರವಾಗಿ, ಸಮಾನವಾಗಿ ಹಾಗೂ ಬಲಗಡೆ ಯಾವುದೇ ಧ್ವಜ ಇರಬಾರದು. ಹರಿದ ಧ್ವಜಗಳನ್ನು ಬಳಸಬಾರದು. ಕೇಸರಿ ಬಣ್ಣ ಮೇಲೆ ಇರುವಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಹರ್ ಘರ್ ತಿರಂಗಾ ಅಭಿಯಾನದಡಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆ. 13ರಿಂದ 15ರವರೆಗೆ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ. 15ರಂದು ಸಂಜೆ 5.30ಕ್ಕೆ ಜಿಲ್ಲಾ ಗುರುಭವನದಲ್ಲಿ ರಾಷ್ಟ್ರಪ್ರೇಮದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT