ಹಾವೇರಿ: ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಬುಧವಾರ ಜೋರು ಮಳೆಯಾಗಿದೆ. ಸವಣೂರು ತಾಲ್ಲೂಕಿನ ಗಡಿಭಾಗದಲ್ಲಿರುವ ನದಿ ನೀರಲಗಿ ಹಾಗೂ ಸುತ್ತಮುತ್ತ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು.

ಹಾವೇರಿ, ಸವಣೂರು, ರಾಣೆಬೆನ್ನೂರು, ಬ್ಯಾಡಗಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಳೆಯಾಯಿತು. ಹಲವು ಕಡೆಗಳಲ್ಲಿ ಗಾಳಿ ಹಾಗೂ ಗುಡುಗು– ಸಿಡಿಲಿನ ಅಬ್ಬರವೂ ಹೆಚ್ಚಿತ್ತು.ಬುಧವಾರ ಬೆಳಿಗ್ಗೆ ಯಿಂದಲೇ ಬಿಸಿಲು ಹೆಚ್ಚಿತ್ತು. ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದಿಂದಲೇ ಜಿಟಿ ಜಿಟಿಯಾಗಿ ಆರಂಭವಾದ ಮಳೆ, ಕ್ರಮೇಣ ಹೆಚ್ಚಾಗಿ ಅಬ್ಬರಿಸಿತು.

ಹಾವೇರಿ ನಗರದಲ್ಲಿ ಮಧ್ಯಾಹ್ನವೇ ಮೋಡ ಕವಿದ ವಾತಾವರಣ ಕಾಣಿಸಿತು. ಸಂಜೆ ವೇಳೆ ಜೋರು ಗಾಳಿ ಸಮೇತ ಶುರುವಾದ ಮಳೆ, ಕೆಲ ಗಂಟೆಗಳವರೆಗೂ ಸುರಿಯಿತು.

ನಿತ್ಯದ ಕೆಲಸಕ್ಕಾಗಿ ಮನೆಯಿಂದ ಸಂಜೆ ಹೊರಗೆ ಬಂದಿದ್ದ ಜನರು, ಮಳೆಯಲ್ಲಿ ಓಡಾಡಿದರು. ಕೆಲವರು, ರಸ್ತೆಯ ಅಕ್ಕ–ಪಕ್ಕದಲ್ಲಿರುವ ಮಳಿಗೆಗಳನ್ನು ಆಶ್ರಯ ಪಡೆದುಕೊಂಡಿದ್ದ ದೃಶ್ಯಗಳು ಕಂಡು ಬಂದವು. ಮಳೆಯ ಅಬ್ಬರ ಜೋರಾಗಿ ದ್ದರಿಂದ ಹಲವು ಕಡೆಗಳಲ್ಲಿ ರಸ್ತೆ ಮೇಲೆ ನೀರು ಹರಿಯಿತು.

ಹಳೇ ಪಿ.ಬಿ. ರಸ್ತೆ, ಹಾನಗಲ್ ರಸ್ತೆ, ಬಸವೇಶ್ವರನಗರದ, ಎಂ.ಜಿ. ರಸ್ತೆ, ಅಶ್ವಿನಿನಗರ, ದಾನೇಶ್ವರಿನಗರ, ಮಂಜುನಾಥ ನಗರ, ಇಜಾರಿ ಲಕಮಾಪುರ, ಗುತ್ತಲ ರಸ್ತೆ, ಮೈಲಾರ ಮಹದೇವಪ್ಪ ವೃತ್ತ, ವಿದ್ಯಾನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಸುರಿಯಿತು.

ನದಿ ನೀರಲಗಿ ಗ್ರಾಮದಲ್ಲಿ ಅವ್ಯವಸ್ಥೆ: ಸವಣೂರು ತಾಲ್ಲೂಕಿನ ಗಡಿ ಗ್ರಾಮವಾದ ನದಿ ನೀರಲಗಿ ಗ್ರಾಮದಲ್ಲಿ, ಬುಧವಾರ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಯಿತು. ಚರಂಡಿ ಸ್ವಚ್ಛತೆ ಮಾಡದಿದ್ದರಿಮದ, ಚರಂಡಿ ನೀರು ಮನೆಗಳಿಗೆ ನುಗ್ಗಿತ್ತು. ದುರ್ವಾತವೂ ಹೆಚ್ಚಾಗಿ ಸ್ಥಳೀಯರು ಯಾತನೆ ಅನುಭವಿಸಿದರು.

‘ನದಿ ನೀರಲಗಿ ಗ್ರಾಮವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಭಿವೃದ್ಧಿಯೂ ಅಷ್ಟಕ್ಕಷ್ಟೇ. ಬಡವರು ವಾಸವಿರುವ ಗ್ರಾಮದಲ್ಲಿ, ಮೂಲ ಸೌಕರ್ಯವಿಲ್ಲ. ಮಳೆ ಬಂದಾಗಲೆಲ್ಲ ಸಮಸ್ಯೆಯಾಗುತ್ತಿದೆ’ ಎಂದು ನಿವಾಸಿಗಳು ದೂರಿದರು.

ಶಿಗ್ಗಾವಿ ಪಟ್ಟಣ, ತಾಲ್ಲೂಕಿನ ಬಂಕಾಪುರ ಹಾಗೂ ಹಲವು ಕಡೆಗಳಲ್ಲಿಯೂ ಉತ್ತಮ ಮಳೆಯಾಯಿತು.

ಗುತ್ತಲ–ಅಗಡಿ ರಸ್ತೆಯಲ್ಲಿ ಸಂಚಾರ ಬಂದ್: ಹಾವೇರಿ ತಾಲ್ಲೂಕಿನ ಅಗಡಿಯಿಂದ ಗುತ್ತಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರವೊಂದು ಬುಧವಾರ ಉರುಳಿಬಿದ್ದಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರ ತಾತ್ಕಾಲಿಕವಾಗಿ ಬಂದ್ ಆಯಿತು. ಮರ ತೆರವು ಮಾಡಲು ಸ್ಥಳೀಯರು ಹರಸಾಹಸಪಟ್ಟರು.

ರಸ್ತೆ ಹಾಳು: ತಾಲ್ಲೂಕಿನ ಮೇಲ್ಮುರಿ ಹಾಗೂ ಹಂದಿಗನೂರು ಗ್ರಾಮಗಳ ನಡುವಿನ ರಸ್ತೆಯು ಮಳೆಯಿಂದಾಗಿ ಹಾಳಾಗಿದೆ. ನೀರು ನಿಂತುಕೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-23-552165548

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.