ಹಾವೇರಿ: 2024–25ನೇ ಸಾಲಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ದಾಖಲೆಗಳ ವ್ಯತ್ಯಾಸದಿಂದಾಗಿ ಹಿರೇಕೆರೂರು ತಾಲ್ಲೂಕಿನ 398 ರೈತರಿಗೆ ಇದುವರೆಗೂ ಹಣ ಜಮೆಯಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸೂಕ್ತ ದಾಖಲೆ ನೀಡುವಂತೆ 398 ರೈತರನ್ನು ಕೋರಿದ್ದಾರೆ.

‘ಜಿಲ್ಲೆಯಲ್ಲಿ ಶುಂಠಿ ಬೆಳೆದಿದ್ದ 174 ಮತ್ತು ಹಸಿ ಮೆಣಸಿನಕಾಯಿ ಬೆಳೆದಿದ್ದ 224 ರೈತರಿಗೆ ಬೆಳೆ ಹೊಂದಾಣಿಕೆ ಆಗದಿದ್ದರಿಂದ ವಿಮೆ ಜಮೆ ಆಗಿಲ್ಲ’ ಎಂದು ಹಿರೇಕೆರೂರು ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕುಂದು ಕೊರತೆ ನಿರ್ವಹಣಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಬೆಳೆ ವಿಮೆ ಜಮಾ ಮಾಡಲು ಸರ್ಕಾರ ಹಾಗೂ ಸಂಂಧಿಸಿದ ವಿಮಾ ಕಂಪನಿಗಳು ಒಪ್ಪಿಕೊಂಡಿರುವುದಿಲ್ಲ. ಹೀಗಾಗಿ, ಅರ್ಹ ರೈತರು ದಾಖಲೆ ಸಲ್ಲಿಸಲು ಮುಂದಿನ 15 ದಿನ ಅವಕಾಶ ನೀಡಲಾಗಿದೆ’ ಎಂದಿದ್ದಾರೆ.

‘2024–25ರ ಪಹಣಿ ಪತ್ರಿಕೆಯಲ್ಲಿ ವಿಮೆಗೆ ನೊಂದಾಯಿಸಿದ ಬೆಳೆ ನಮೂದು ಆಗಿರಬೇಕು. ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ವಿಮೆ ನೊಂದಾಯಿತ ಉತ್ಪನ್ನವನ್ನು ಬೆಳೆ ಮಾರಾಟ ಮಾಡಿದ್ದಲ್ಲಿ ಸೂಕ್ತ ದಾಖಲೆ ಇರಬೇಕು. ವಿಮೆಗೆ ನೊಂದಾಯಿತ ಬೆಳೆಯ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಕಂಪ್ಯೂಟರ್ ರಶೀದಿ ಇರಬೇಕು. ವಿಮಾ ನೊಂದಾಯಿತ ಬೆಳೆಯನ್ನು ಬೆಳೆಯಲು ಸಾಲ ಪಡೆದಿದ್ದಲ್ಲಿ, ಬ್ಯಾಂಕ್ನ ದೃಢೀಕೃತ ಪ್ರತಿ ಇರಬೇಕು. ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು 15 ದಿನಗಳೊಳಗಾಗಿ ಹಿರೇಕೆರೂರು ತೋಟಗಾರಿಕೆ ಇಲಾಖೆ ಕಚೇರಿಗೆ ಸಲ್ಲಿಸಬೇಕು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-22-1982679059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.