ಹಾವೇರಿ: ಬಡತನ ಹಾಗೂ ಹಲವು ಆರ್ಥಿಕ– ಸಾಮಾಜಿಕ ಕಾರಣಗಳಿಂದಾಗಿ ಸ್ವತಃ ವಸತಿ ಹಾಗೂ ನಿವೇಶನಗಳಿಂದ ವಂಚಿತವಾದ ಕುಟುಂಬಗಳ ಮಾಹಿತಿ ಸಂಗ್ರಹಿಸಲು ಸರ್ಕಾರ ಸಮೀಕ್ಷೆ ನಡೆಸುತ್ತಿದೆ. ಜಿಲ್ಲೆಯಲ್ಲಿರುವ 86,894 ಕುಟುಂಬಗಳಿಗೆ ವಸತಿ ಹಾಗೂ ನಿವೇಶನ ಇಲ್ಲವೆಂಬ ಮಾಹಿತಿಯು ಸಮೀಕ್ಷೆಯಿಂದ ಗೊತ್ತಾಗಿದೆ.

ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿದ್ದರೂ ಮಾಲೀಕತ್ವದಿಂದ ವಂಚಿತರಾಗಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಹಕ್ಕುಪತ್ರ ವಿತರಿಸಿದ್ದು, ಇದರ ಬೆನ್ನಲ್ಲೇ ರಾಜ್ಯದಲ್ಲಿರುವ ವಸತಿ ಹಾಗೂ ನಿವೇಶನ ವಂಚಿತರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶದ ಹಳ್ಳಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರು ಹೆಚ್ಚಾಗಿ ವಾಸವಿದ್ದಾರೆ. ಇವರ ಪೈಕಿ, ವಸತಿ ಹಾಗೂ ನಿವೇಶನರಹಿತರ ಮಾಹಿತಿ ದಾಖಲಿಸುವ ಕೆಲಸವನ್ನು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಡುತ್ತಿದ್ದಾರೆ.

ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಹಾನಗಲ್, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಸಮೀಕ್ಷೆ ನಡೆಯುತ್ತಿದೆ. ಸ್ವತಃ ವಸತಿ ಹಾಗೂ ನಿವೇಶನ ಇರದವರು, ಸಂಬಂಧಪಟ್ಟ ದಾಖಲೆಗಳ ಸಮೇತ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಸಮೀಕ್ಷೆ ಮಾಹಿತಿ ತಿಳಿದಿರುವ ಹಲವರು ಈಗಾಗಲೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಸಮೀಕ್ಷೆಯ ಪಟ್ಟಿಯನ್ನು ಅಂತಿಮಗೊಳಿಸಲು ಸಜ್ಜಾಗಿರುವ ಜಿಲ್ಲಾ ಪಂಚಾಯಿತಿ, ಹೆಸರು ನೋಂದಣಿ ಮಾಡಿಕೊಳ್ಳಲು ಮೇ 31 ಕೊನೆ ದಿನವೆಂದು ಘೋಷಿಸಿದೆ. ಹಾನಗಲ್ ಹಾಗೂ ಹಾವೇರಿ ತಾಲ್ಲೂಕಿನಲ್ಲಿಯೇ ಅತ್ಯಧಿಕ ವಸತಿ–ನಿವೇಶನರಹಿತರಿದ್ದಾರೆ.

2018ರ ಸಮೀಕ್ಷೆ ಪರಿಷ್ಕರಣೆ: ರಾಜ್ಯದಲ್ಲಿರುವ ವಸತಿ ಹಾಗೂ ನಿವೇಶನ ರಹಿತರ ಬಗ್ಗೆ 2018ರಲ್ಲಿ ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧಪಡಿಸಲಾಗಿತ್ತು. ಈಗ ಅದೇ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತಿದ್ದು, ಅದರ ಜೊತೆಯಲ್ಲಿ ಹೊಸದಾಗಿ ಅರ್ಹರ ಹೆಸರು ಸೇರಿಸಲಾಗುತ್ತಿದೆ.

ಪಟ್ಟಿ ಸಿದ್ಧತೆ ಕೆಲಸ ಪ್ರಗತಿಯಲ್ಲಿದ್ದು, ಅಂತಿಮ ಹೆಸರುಗಳ ಸೇರ್ಪಡೆ ಮಾತ್ರ ಬಾಕಿಯಿದೆ. ಸರ್ಕಾರವೇ ಮೇ 31ರವರೆಗೆ ಹೆಸರು ಸೇರ್ಪಡೆಗೆ ಅವಕಾಶ ನೀಡಿದೆ. ಅದಾದ ನಂತರ, ಪಟ್ಟಿಯನ್ನು ಅಂತಿಮಗೊಳಿಸಿ ಸಲ್ಲಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

‘ವಸತಿ ಅಥವಾ ನಿವೇಶನ ರಹಿತರು ಸಂಬಂಧಪಟ್ಟ ದಾಖಲೆಗಳೊಂದಿಗೆ ಗ್ರಾ.ಪಂ. ಕಚೇರಿಗೆ ಸಂಪರ್ಕಿಸಬೇಕು. ತಮ್ಮ ಹೆಸರು ಪಟ್ಟಿಯಲ್ಲಿದೆಯಾ ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಹ ಫಲಾನುಭವಿಗಳನ್ನು ಕೈ ಬಿಟ್ಟಿದ್ದರೆ, ಅದಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನೇ ಹೊಣೆಯನ್ನಾಗಿ ಮಾಡಲಾಗುವುದು’ ಎಂದು ಸರ್ಕಾರ ಎಚ್ಚರಿಕೆ ಸಹ ನೀಡಿದೆ.

ಹೊಸ ಯೋಜನೆಗೆ ಅರ್ಹತೆ: ಜಿಲ್ಲೆಯಲ್ಲಿ ವಸತಿ ಹಾಗೂ ನಿವೇಶನ ರಹಿತರು ಎಷ್ಟಿದ್ದಾರೆ? ಎಂಬುದನ್ನು ತಿಳಿದುಕೊಂಡು ಯೋಜನೆ ರೂಪಿಸಲು ಸಮೀಕ್ಷೆ ಸಹಾಯವಾಗಲಿದೆ. ಜೊತೆಗೆ, ಸರ್ಕಾರ ಯೋಜನೆ ಜಾರಿಗೆ ತಂದ ಸಂದರ್ಭದಲ್ಲಿ ಸಮೀಕ್ಷೆಯಲ್ಲಿರುವ ಹೆಸರುಗಳನ್ನೇ ಫಲಾನುಭವಿಗಳಾಗಿ ಆಯ್ಕೆ ಮಾಡಲಿದೆ. ಹೀಗಾಗಿ, ವಸತಿ–ನಿವೇಶನ ರಹಿತ ಕುಟುಂಬಗಳು ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕಾಗಿದೆ.

‘ಜಿಲ್ಲೆಯಲ್ಲಿರುವ ಪ್ರತಿಯೊಬ್ಬ ವಸತಿ–ನಿವೇಶನರಹಿತ ಕುಟುಂಬಗಳನ್ನು ಗುರುತಿಸಿ, 2018ರಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ. ಈಗ ಅದೇ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಹೊಸದಾಗಿಯೂ ಹೆಸರು ನೋಂದಾಯಿಸಲು ಅವಕಾಶವಿದೆ. ಹೀಗಾಗಿ, ಅರ್ಹರು ದಾಖಲೆ ಸಮೇತ ಹೆಸರು ನೋಂದಣಿ ಮಾಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಲ್ಜಿತ್ಕುಮಾರ ತಿಳಿಸಿದರು.

ವಸತಿ ಹಾಗೂ ನಿವೇಶನ ರಹಿತರ ಪಟ್ಟಿಯಲ್ಲಿ ಹೆಸರು ಸೇರಿಸಲು ಮೇ 31 ಕೊನೆ ದಿನವಾಗಿದೆ. ಅರ್ಹರು ಗ್ರಾಮ ಪಂಚಾಯಿತಿ ಸಂಪರ್ಕಿಸಿ, ಹೆಸರು ನೋಂದಾಯಿಸಿಕೊಳ್ಳಬೇಕು

-ದಲ್ಜಿತ್ಕುಮಾರ್, ಜಿ.ಪಂ. ಸಿಇಒ

ತಾಲ್ಲೂಕುವಾರು ವಸತಿ–ನಿವೇಶನ ರಹಿತರ ವಿವರ

ತಾಲ್ಲೂಕು; ವಸತಿ ರಹಿತ ಕುಟುಂಬಗಳು; ನಿವೇಶನರಹಿತ ಕುಟುಂಬಗಳು

ಬ್ಯಾಡಗಿ; 5443; 1722

ಹಾನಗಲ್; 17399; 1888

ಹಾವೇರಿ; 11345; 4937

ಹಿರೇಕೆರೂರು; 5810; 882

ರಾಣೆಬೆನ್ನೂರು; 7962; 2287

ರಟ್ಟೀಹಳ್ಳಿ; 5503; 1790

ಸವಣೂರು; 8463; 1135

ಶಿಗ್ಗಾವಿ; 9116; 1212

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.