ಹಾವೇರಿ: ತುಂಗಭದ್ರಾ ನದಿಯಿಂದ ಅಕ್ರಮವಾಗಿ ತೆಗೆದು ಸಂಗ್ರಹಿಸಿಟ್ಟಿದ್ದ 43 ಮೆಟ್ರಿಕ್ ಟನ್ ಮರಳನ್ನು ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಸೋಮ್ಲಾಪೂರ ಹಾಗೂ ಐರಣಿ ಗ್ರಾಮಗಳ ಸಮೀಪದಲ್ಲಿ ಮರಳು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪೊಲೀಸರು ದಾಳಿ ಮಾಡಿದ್ದರು. ಮರಳು ಸಂಗ್ರಹಿಸಿಟ್ಟಿದ್ದ ಆರೋಪದಡಿ ಸೋಮ್ಲಾಪೂರದ ಚೇತನ ಬಸವರಾಜಪ್ಪ ಕಾಯಕದ,ಐರಣಿ ಗ್ರಾಮದ ಸುಲ್ತಾನ್ಖಾನ್ ಅಕ್ಬರ್ಖಾನ್ ಕಂದಾಂ ವಿರುದ್ಧ ಎಫ್ಐಆರ್ ದಾಖಲಾಗಿದೆ.

‘ಸೋಮ್ಲಾಪೂರ ಬಳಿಯೇ ತುಂಗಭದ್ರಾ ನದಿ ಹರಿಯುತ್ತಿದೆ. ಇದೇ ನದಿ ದಡದಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಮೇ 30ರಂದು ಸಂಜೆ ಸ್ಥಳಕ್ಕೆ ಹೋಗಿ ತಪಾಸಣೆ ನಡೆಸಿದಾಗ, ₹ 18,400 ಮೌಲ್ಯದ 23 ಮೆಟ್ರಿಕ್ ಟನ್ ಮರಳು ಪತ್ತೆಯಾಯಿತು. ಚೇತನ್ ಕಾಯಕದ ಎಂಬಾತನೇ ಈ ಮರಳು ಸಂಗ್ರಹಿಸಿದ್ದ ಮಾಹಿತಿ ಆಧರಿಸಿ, ಆತನ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಐರಣಿ ಬಳಿಯ ತುಂಗಭದ್ರಾ ನದಿ ದಡದಲ್ಲಿಯೇ ಅಕ್ರಮ ಮರಳು ಇರುವ ಮಾಹಿತಿ ಸಿಕ್ಕಿತ್ತು. ಮೇ 30ರಂದು ಸಂಜೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಯಿತು. ₹16 ಸಾವಿರ ಮೌಲ್ಯದ 20 ಮೆಟ್ರಿಕ್ ಅಕ್ರಮ ಮರಳು ಜಪ್ತಿ ಮಾಡಲಾಯಿತು. ಇದು ಸುಲ್ತಾನ್ಖಾನ್ಗೆ ಸೇರಿದ್ದು ಎಂಬುದು ಪ್ರಾಥಮಿಕವಾಗಿ ಗೊತ್ತಾಗಿದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-23-1488180394

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.