ಹಾವೇರಿ: ಜಿಲ್ಲಾ ಕೇಂದ್ರದ ವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ನಗರಸಭೆಯು ಹರಸಾಹಸಪಡುತ್ತಿದೆ. ಇದರ ನಡುವೆಯೇ, ನಗರದ 3,453 ಮನೆಗಳ ಮಾಲೀಕರು ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ನಳದ ಸಂಪರ್ಕ ಪಡೆದಿರುವುದು ನಗರಸಭೆಯ ಸಮೀಕ್ಷೆಯಿಂದ ಗೊತ್ತಾಗಿದೆ.

ತುಂಗಭದ್ರಾ ನದಿ ಹರಿಯುತ್ತಿರುವ ಕಂಚಾರಗಟ್ಟಿ ಬಳಿಯಿಂದ ಹಾವೇರಿ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಅನಿವಾರ್ಯ ಸಂದರ್ಭದಲ್ಲಿ ಹೆಗ್ಗೇರಿ ಕೆರೆಯಿಂದಲೂ ನೀರು ಪೂರೈಸಲಾಗುತ್ತಿದೆ. ಸದ್ಯದ ಬೇಸಿಗೆಯಲ್ಲಿ ನೀರಿನ ಬವಣೆ ಉಂಟಾಗಿದೆ. ಹೀಗಾಗಿ, ನಾಲ್ಕು ದಿನಕ್ಕೊಮ್ಮೆ ಒಂದು ಗಂಟೆ ಮಾತ್ರ ನೀರು ಪೂರೈಸಲಾಗುತ್ತಿದೆ.

ನಗರದ ಜನರಿಗೆ ನಿರಂತರ ನೀರು ಒದಗಿಸುವ ಉದ್ದೇಶದಿಂದ ಆರಂಭಗೊಂಡಿದ್ದ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ. ಲಭ್ಯವಿರುವ ನಳಗಳ ವ್ಯವಸ್ಥೆಯನ್ನೇ ಸಮರ್ಪಕವಾಗಿ ಬಳಸಿಕೊಂಡು ನೀರು ಪೂರೈಸಲು ನಗರಸಭೆ ಮುಂದಾಗಿದೆ. ಅದಕ್ಕೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಬಲಪಡಿಸಿಕೊಳ್ಳುತ್ತಿದೆ. ಇದೇ ಕಾರಣಕ್ಕೆ, ನಗರದಲ್ಲಿರುವ ಅಕ್ರಮ ನಳಗಳ ಪತ್ತೆಗೆ ಸಮೀಕ್ಷೆ ಆರಂಭಿಸಿದೆ.

ನಗರಸಭೆ ಜಾರಿಯಾದ ದಿನದಿಂದಲೂ ಹಾವೇರಿಯಲ್ಲಿರುವ ನಳಗಳ ಸಮೀಕ್ಷೆ ಮಾಡಿರಲಿಲ್ಲ. ವರ್ಷ ಕಳೆದಂತೆ, ಅಕ್ರಮವಾಗಿ ನಳಗಳ ಸಂಪರ್ಕ ಪಡೆಯುವವರು ಹೆಚ್ಚಾಗುತ್ತಿದ್ದರು. ಅಕ್ರಮವಾಗಿ ನೆಲವನ್ನು ಅಗೆಯುತ್ತಿದ್ದ ಕೆಲವರು, ಖಾಸಗಿ ಕಾರ್ಮಿಕರ ಮೂಲಕ ನಳಗಳ ಸಂಪರ್ಕ ಪಡೆದುಕೊಳ್ಳುತ್ತಿದ್ದರು. ಇಂಥ ಕೆಲ ಪ್ರಕರಣಗಳನ್ನು ಪತ್ತೆ ಮಾಡಿದ್ದ ನಗರಸಭೆ, ಅಕ್ರಮ ನಳಗಳಿಗೆ ಲಗಾಮು ಹಾಕಲು ಮುಂದಾಗಿದೆ.

ನಗರದ ಎಲ್ಲ ಪ್ರದೇಶಗಳಲ್ಲಿರುವ ನಳಗಳ ಸಮೀಕ್ಷೆ ನಡೆಸಿರುವ ನಗರಸಭೆಯ ಅಧಿಕಾರಿಗಳು, ಮನೆ ಮಾಲೀಕರ ಹೆಸರಿನದ ಸಮೇತ 3,453 ಅಕ್ರಮ ನಳಗಳಿರುವ ಬಗ್ಗೆ ವರದಿ ಸಿದ್ಧಪಡಿಸಿದ್ದಾರೆ. ಜೊತೆಗೆ, ಮಾಲೀಕರಿಗೂ ನೋಟಿಸ್ ನೀಡಿದ್ದಾರೆ.

‘ಹಾವೇರಿಯ ನಳದ ವ್ಯವಸ್ಥೆಯನ್ನು ಸಮೀಕ್ಷೆ ಮಾಡಲಾಗಿದೆ. ಕಾನೂನುಬದ್ಧವಾಗಿ ನಗರದಲ್ಲಿ 10,540 ನಳಗಳಿವೆ. ಅದರ ಜೊತೆಯಲ್ಲಿಯೇ, 3,453 ಅಕ್ರಮ ನಳಗಳು ಪತ್ತೆಯಾಗಿವೆ. ಅವುಗಳ ಮಾಲೀಕರಿಗೂ ನೋಟಿಸ್ ನೀಡಲಾಗಿದೆ’ ಎಂದು ನಗರಸಭೆಯ ಪೌರಾಯುಕ್ತ ಎಚ್. ಕಾಂತರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ನಳ ಅಳವಡಿಕೊಂಡು, ನೀರು ಪಡೆದುಕೊಂಡಿದ್ದಾರೆ. ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಒಂದೊಂದು ನಳಕ್ಕೆ ₹ 10,640 ದಂಡ ಪಾವತಿಸುವಂತೆ ಸೂಚಿಸಲಾಗಿದೆ. ಈಗಾಗಲೇ, 42 ಮಂದಿ ದಂಡ ಪಾವತಿ ಮಾಡಿದ್ದಾರೆ. ಇನ್ನೂ ಕೆಲವರು ದಂಡ ಕಟ್ಟುವುದಾಗಿ ಹೇಳಿದ್ದಾರೆ. ನೋಟಿಸ್ಗೆ ಪ್ರತಿಕ್ರಿಯೆ ನೀಡದ 6 ನಳಗಳ ಸಂಪರ್ಕವನ್ನು ಈಗಾಗಲೇ ಕಡಿತ ಮಾಡಲಾಗಿದೆ’ ಎಂದು ಹೇಳಿದರು.

ಕೆಲ ಜನಪ್ರತಿನಿಧಿ, ಸಿಬ್ಬಂದಿ ಸಹಕಾರ: ನಗರದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ನಳದ ಸಂಪರ್ಕ ಪಡೆಯುವ ಕೆಲಸ ನಡೆಯುತ್ತಿದೆ. ಇದರಿಂದ ನಗರಸಭೆಗೆ ಲಕ್ಷಾಂತರ ರೂಪಾಯಿ ತೆರಿಗೆ ನಷ್ಟವಾಗುತ್ತಿದೆ. ಕೆಲ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರಸಭೆಯ ಕೆಲ ಸಿಬ್ಬಂದಿ, ಅಕ್ರಮ ನಳದ ಸಂಪರ್ಕಕ್ಕೆ ಸಹಕಾರ ನೀಡಿರುವ ಆರೋಪವಿದೆ.

‘ನಗರದ ಹಲವು ಕಡೆಗಳಲ್ಲಿ ನೆಲದಡಿ ನೀರಿನ ಪೈಪ್ ಹಾಕಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದಿರುವ ಕೆಲ ಕಾರ್ಮಿಕರು, ಮನೆ ಮಾಲೀಕರ ಸೂಚನೆಯಂತೆ ನೆಲ ಅಗೆದು ನಳದ ಸಂಪರ್ಕ ಕೊಟ್ಟಿದ್ದಾರೆ. ನೆಲ ಅಗೆದಿದ್ದನ್ನು ಸ್ಥಳೀಯರು ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ, ಅಕ್ರಮ ನಳಗಳ ಬಳಕೆ ಮುಂದುವರಿದಿತ್ತು’ ಎಂದು ನಗರಸಭೆ ಮೂಲಗಳು ಹೇಳಿವೆ.

‘ಅಕ್ರಮ ನಳಗಳಿಂದ ನಗರಸಭೆಗೆ ಯಾವುದೇ ತೆರಿಗೆ ಬಂದಿಲ್ಲ. ನಳದ ಬಿಲ್ ಸಹ ಪಾವತಿಯಾಗಿಲ್ಲ. ಇದೊಂದು ವ್ಯವಸ್ಥಿತ ಜಾಲವಿರುವಂತೆ ಕಾಣುತ್ತಿದೆ. 3,453 ಅಕ್ರಮ ನಳಗಳ ಬಗ್ಗೆ ವಿಳಾಸ ಸಮೇತ ಪಟ್ಟಿ ಸಿದ್ಧಪಡಿಸಲಾಗಿದೆ. ನಗರಸಭೆಯ ಸಿಬ್ಬಂದಿ ಏನಾದರೂ ಸಹಕಾರ ನೀಡಿದ್ದು ಸಾಬೀತಾದರೆ, ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

‘ಅಕ್ರಮವಾಗಿ ನಳ ಪಡೆದವರಿಗೆ ಸದ್ಯ ಒಂದು ಅವಕಾಶ ನೀಡಲಾಗಿದೆ. ಅವರು ದಂಡ ಪಾವತಿಸಿ, ನಳವನ್ನು ಸಕ್ರಮ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ನಳದ ಸಂಪರ್ಕ ಕಡಿತಗೊಳಿಸಲಾಗುವುದು. ಜೊತೆಗೆ, ಅವರ ವಿರುದ್ಧ ಪ್ರಕರಣ ದಾಖಲಿಸಲು ಸಹ ಅವಕಾಶವಿದೆ’ ಎಂದು ಮೂಲಗಳು ಹೇಳಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-22-624258086

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.