ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದಲ್ಲಿರುವ ಶಾರದಾ ಜ್ಯುವೆಲರ್ಸ್ ಚಿನ್ನಾಭರಣ ಅಂಗಡಿಯಲ್ಲಿ ನಡೆದಿದ್ದ ಕಳವು ಪ್ರಕರಣ ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೆಹೊಸೂರು ಗ್ರಾಮದ ಶಿವರಾಜ ಹನುಮಂತಪ್ಪ ಮೋಡಕೇರ ಹಾಗೂ ಸಿಂಧನೂರಿನ ಅಂಬಾಮಠದ ಅಶೋಕ ಅಲಿಯಾಸ್ ರಮೇಶ ಶಿವಪ್ಪ ಕೊಂಚಿಕೊರವರ ಬಂಧಿತರು. ಇವರಿಂದ ₹ 1.15 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಚಿನ್ನ, ಬೆಳ್ಳಿ ಹಾಗೂ ಇತರೆ ಸಾಮಗ್ರಿಗಳಿವೆ’ ಎಂದು ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ತಿಳಿಸಿದ್ದಾರೆ.

‘ಆರೋಪಿಗಳು, ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದರು. ಹುಬ್ಬಳ್ಳಿ, ಗದಗ ಸೇರಿದಂತೆ ಹಲವು ಕಡೆಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗಿದ್ದರು. ಚಿಕ್ಕಾಂಶಿ ಹೊಸೂರಿನಲ್ಲಿ ಕಳವು ಮಾಡಿದ್ದ 6 ಜನರ ಪೈಕಿ, ಇಬ್ಬರು ಸಿಕ್ಕಿದ್ದಾರೆ. ಉಳಿದವರ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ವಾಹನ ಕಳವು: ‘ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ಬೀಚುಪಲ್ಲಿ ಗ್ರಾಮದಲ್ಲಿ ಮೇ 14ರಂದು ಬೊಲೆರೊ ವಾಹನ ಕಳ್ಳತನವಾಗಿತ್ತು. ಆ ಬಗ್ಗೆ ಇತ್ತಿಕ್ಯಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೇ ಆರೋಪಿಗಳು ವಾಹನ ಕಳವು ಮಾಡಿದ್ದರು. ಅದೇ ವಾಹನದಲ್ಲಿ ಚಿಕ್ಕಾಂಶಿ ಹೊಸೂರಿಗೆ ಬಂದು, ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಮೇ 16ರಂದು ರಾತ್ರಿ ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಹಲವು ಕಡೆಗಳಲ್ಲಿ ಓಡಾಡಿದ್ದರು. ಕಳ್ಳತನಕ್ಕಾಗಿ ಹಲವು ಮನೆ ಹಾಗೂ ಅಂಗಡಿಗಳನ್ನು ಶೋಧಿಸಿದ್ದರು. ಆದರೆ, ಯಾವುದೇ ಸ್ಥಳ ಸಿಕ್ಕಿರಲಿಲ್ಲ. ರಾತ್ರಿ ಚಿಕ್ಕಾಂಶಿ ಹೊಸೂರಿಗೆ ಬಂದಾಗ, ಶಾರದಾ ಜ್ಯುವೆಲರ್ಸ್ ಮಳಿಗೆ ನೋಡಿದ್ದರು. ಬಳಿ, ತಡರಾತ್ರಿ ಶಟರ್ ಮುರಿದು ಒಳಗೆ ನುಗ್ಗಿ ಲಾಕರ್ ಹಾಗೂ ಚಿನ್ನ–ಬೆಳ್ಳಿ ಕದ್ದೊಯ್ದಿದ್ದರು’ ಎಂದು ತಿಳಿಸಿದರು.

‘ಆರೋಪಿಗಳ ಕೃತ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದೇ ಸುಳಿವು ಆಧರಿಸಿ ತನಿಖೆ ಮುಂದುವರಿಸಲಾಗಿತ್ತು. ಆರೋಪಿಗಳು, ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರಿನಲ್ಲಿ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದರು. ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಕೈವಾಡವಿರುವುದು ಖಾತ್ರಿಯಾಗುತ್ತಿದ್ದಂತೆ, ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

ಮಹಜರು ವೇಳೆ ಮುಗಿಬಿದ್ದ ಜನ: ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮಹಜರು ಮಾಡಲು ಚಿಕ್ಕಾಂಶಿ ಹೊಸೂರು ಗ್ರಾಮಕ್ಕೆ ಕರೆದೊಯ್ದಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು, ಕಳ್ಳರನ್ನು ನೋಡಲು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹೈರಾಣಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-22-960794529

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.