ಹಾವೇರಿ: ‘ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಪುಣ್ಯಕ್ಷೇತ್ರ ತಿರುಪತಿಯಲ್ಲಿ ಇತ್ತೀಚೆಗೆ ಭಕ್ತಶ್ರೇಷ್ಠ ಕನಕದಾಸರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅದೇ ಮಾದರಿಯಲ್ಲಿ ಹಾವೇರಿಯ ಕಾಗಿನೆಲೆ ವೃತ್ತದಲ್ಲಿಯೂ ಕನಕದಾಸ ಮೂರ್ತಿ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿದೆ’ ಎಂದು ಕುರುಬ ಸಮುದಾಯದ ಮುಖಂಡರೂ ಆಗಿರುವ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ‘ಕುರುಬ ಸಮುದಾಯದ ಸಭೆ’ಯಲ್ಲಿ ಮಾತನಾಡಿದ ಅವರು, ‘ತಿರುಪತಿಯಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿಯ ಕಲಾವಿದರೇ, ಹಾವೇರಿಯ ಮೂರ್ತಿಯನ್ನೂ ಸಿದ್ಧಪಡಿಸಲಿದ್ದಾರೆ. ತಿಂಗಳ ಒಳಗಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಉದ್ದೇಶವಿದೆ’ ಎಂದರು.

‘ಭಕ್ತಿಯ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದ ಕನಕದಾಸರನ್ನು, ಇಡೀ ದೇಶವೇ ಕೊಂಡಾಡುತ್ತದೆ. ಕನಕದಾಸರು ಹುಟ್ಟಿ–ಬೆಳೆದ ಹಾವೇರಿ ಜಿಲ್ಲೆಯಲ್ಲಿಯೂ ಅವರ ಹೆಸರನ್ನು ಮತ್ತಷ್ಟು ಅಜರಾಮರವಾಗಿಸಬೇಕಿದೆ. ಹಲವು ಕಡೆಗಳಲ್ಲಿ ಈಗಾಗಲೇ ಅವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿಯೂ ಮೂರ್ತಿ ಬೇಕೆಂಬ ಕೂಗು ಈಗ ನನಸಾಗುತ್ತಿದೆ’ ಎಂದರು.

‘ಕಾಗಿನೆಲೆ ವೃತ್ತದಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು, ಅಪಘಾತಗಳು ಆಗುತ್ತಿವೆ. ಮಧ್ಯದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಕಷ್ಟವಾಗುತ್ತದೆ. ಹೀಗಾಗಿ, ಕನಕ ಕುರಿ ಮತ್ತು ಉಣ್ಣೆ ನೇಕಾರರ ಸಹಕಾರಿ ಸಂಘಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಮೂರ್ತಿ ಇರಿಸಲಾಗುವುದು. ಮೂರ್ತಿ ಸಿದ್ಧಪಡಿಸಲು ₹ 10 ಲಕ್ಷ ಖರ್ಚಾಗಲಿದೆ. ವೃತ್ತದ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರವು ₹ 25 ಲಕ್ಷ ನೀಡಿದೆ. ಉಳಿದ ಕೆಲಸಗಳಿಗೆ ₹10 ಲಕ್ಷದಿಂದ ₹15 ಲಕ್ಷ ಬೇಕಾಗಬಹುದು. ನಾನೂ ₹1 ಲಕ್ಷ ಕೊಡುತ್ತೇನೆ. ಎಲ್ಲರೂ ಕೈಲಾದಷ್ಟು ದೇಣಿಗೆ ನೀಡಿ, ಮೂರ್ತಿ ಪ್ರತಿಷ್ಠಾಪಿಸೋಣ’ ಎಂದರು.

ಕುರುಬ ಸಮುದಾಯದ ಮುಖಂಡರೂ ಆಗಿರುವ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಮಾತನಾಡಿ, ‘ಮೂರ್ತಿ ಪ್ರತಿಷ್ಠಾಪಿಸುವ ಅವಕಾಶ ಬಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಕಾಗಿನೆಲೆ ಗುರುಪೀಠದಲ್ಲಿ ಈ ಬಾರಿ ಕನಕ ಜಯಂತಿ ಆಚರಿಸುವ ಜವಾಬ್ದಾರಿಯನ್ನು ಹಾವೇರಿ ತಾಲ್ಲೂಕಿಗೆ ನೀಡಲಾಗಿದೆ. ಕಳೆದ ಬಾರಿ ರಾಣೆಬೆನ್ನೂರಿನವರು ಅದ್ಧೂರಿ ಆಚರಣೆ ಮಾಡಿದ್ದರು. ಈ ಬಾರಿ ನಾವೆಲ್ಲರೂ ದೇಣಿಗೆ ಸಂಗ್ರಹಿಸಿ ಅಭೂತಪೂರ್ವ ಆಚರಣೆ ಮಾಡೋಣ’ ಎಂದರು.

ಸಮುದಾಯದ ಮುಖಂಡರಾದ ಮಹಾದೇವಗೌಡ್ರ ಗಾಜೀಗೌಡ್ರ, ನಾಗರಾಜ ಆನ್ವೇರಿ, ಅಶೋಕ ಬಣಕಾರ, ಹನುಮಂತಗೌಡ್ರ ಗಾಜೀಗೌಡ್ರ, ಬಸಣ್ಣ ಕಂಬಳಿ, ಅಶೋಕ ಮುದಕಣ್ಣನವರ, ವಿರುಪಾಕ್ಷ ಹುಲ್ಲೂರ, ನಿಂಗಪ್ಪ ತುಕಣ್ಣನವರ, ವಿಜಯಕುಮಾರ ಮುದಕಣ್ಣನವರ, ಬಸವರಾಜ ಕೋಟಿ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-22-1463454328

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.