ಹಾವೇರಿ: ಹವಾಮಾನ ವೈಪರೀತ್ಯ, ಮಳೆಯ ಏರುಪೇರಿನಿಂದ ಕಡಿಮೆಯಾದ ಇಳುವರಿ, ಬತ್ತುತ್ತಿರುವ ಕೊಳವೆ ಬಾವಿ, ಬ್ಯಾಂಕ್– ಕೈಗಡ ಸಾಲ... ಇಂಥ ಹಲವು ಕಾರಣಗಳಿಂದ ರಾಜ್ಯದ ರೈತರು ಆರ್ಥಿಕವಾಗಿ ಕುಗ್ಗುತ್ತಿದ್ದಾರೆ. ಸಾಲ ತೀರಿಸುವ ಚಿಂತೆಯಲ್ಲಿಯೇ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದು, ರಾಜ್ಯದಲ್ಲಿ ಮೂರು ವರ್ಷಗಳಲ್ಲಿ 3,122 ರೈತರು ನೇಣಿಗೆ ಶರಣಾಗಿದ್ದಾರೆ.

ಪಾರಂಪರಿಕ ಕೃಷಿ ಪದ್ಧತಿ ಹಾಗೂ ಆಧುನಿಕ ಉಪಕರಣಗಳ ವ್ಯವಸ್ಥೆಯಲ್ಲಿಯೂ ಕೃಷಿಯಿಂದ ಲಾಭ ಪಡೆಯುವವರ ಸಂಖ್ಯೆ ತೀರಾ ಕಡಿಮೆಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ಏಕ ಬೆಳೆ ನಂಬಿಕೊಂಡಿರುವ ಬಹುತೇಕರು, ಕೃಷಿಗೆ ಮಾಡಿದ ಖರ್ಚನ್ನು ವಾಪಸು ಪಡೆಯಲು ಆಗುತ್ತಿಲ್ಲ. ರೋಗ–ಕೀಟ ಭಾದೆಗಳಿಂದಲೂ ಬೆಳೆ ಕುಂಠಿತವಾಗುತ್ತಿದ್ದು, ಲಾಭವಿಲ್ಲದ ರೈತರ ಬದುಕು ಬೀದಿಗೆ ಬರುತ್ತಿದೆ. ಇದೇ ಕಾರಣಕ್ಕೆ, ಯುವಜನತೆ ಕೃಷಿ ಕ್ಷೇತ್ರಕ್ಕೆ ಕಾಲಿಡಲು ಹಿಂಜರಿಯುತ್ತಿದ್ದಾರೆ.

‘ಭಾರತದ ಕೃಷಿ, ಮಾನ್ಸೂನ್ ಜೊತೆಗಿನ ಜೂಜಾಟ’ ಎಂಬ ಮಾತಿನಂತೆ, ಕೃಷಿ ಚಟುವಟಿಕೆಗಾಗಿ ಮಾಡಿದ ಸಾಲ ತೀರಿಸಲಾಗದೇ ಹಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಂದಾಯ ಇಲಾಖೆ ಪರಿಶೀಲನೆಯಿಂದ ಗೊತ್ತಾಗಿದೆ. ಆತ್ಮಹತ್ಯೆ ಪ್ರಕರಣಗಳ ಪರಿಶೀಲನೆ ನಡೆಸುತ್ತಿರುವ ಸರ್ಕಾರ, ಅರ್ಹ ರೈತರ ಕುಟುಂಬಗಳಿಗೆ ಪರಿಹಾರ ನೀಡುತ್ತಿದೆ.

‘2023ರ ಜನವರಿಯಿಂದ 2025ರ ಡಿಸೆಂಬರ್ವರೆಗೆ 3,122 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಪ್ರಕರಣಗಳಲ್ಲಿ, ಪ್ರತಿ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಮೂರು ವರ್ಷಗಳ ಅವಧಿಯಲ್ಲಿ 2,534 ರೈತರಿಗೆ ₹ 126.7 ಕೋಟಿ ಪರಿಹಾರ ನೀಡಲಾಗಿದೆ. ಉಳಿದ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

‘2023–24ನೇ ಸಾಲಿನಲ್ಲಿ 1,080 ರೈತರಿಗೆ ₹ 54.00 ಕೋಟಿ ಪರಿಹಾರ ನೀಡಲಾಗಿದೆ. 2024–25ನೇ ಸಾಲಿನಲ್ಲಿ 986 ರೈತರಿಗೆ ₹ 49.30 ಕೋಟಿ ಪರಿಹಾರ ವಿತರಿಸಲಾಗಿದೆ. 2026ರ ಡಿಸೆಂಬರ್ವರೆಗೆ 468 ರೈತರಿಗೆ ₹ 23.40 ಕೋಟಿ ಪರಿಹಾರ ನೀಡಲಾಗಿದೆ’ ಎಂದು ಹೇಳಿದ್ದಾರೆ.

116 ರೈತರಿಗೆ ಪರಿಹಾರ ಬಾಕಿ: ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪೊಲೀಸರ ವರದಿ ಆಧರಿಸಿ ಉಪವಿಭಾಗಾಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ಪರಿಹಾರ ವಿತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ಹೆಚ್ಚು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ, ಇದುವರೆಗೂ 116 ರೈತರಿಗೆ ಪರಿಹಾರ ಸಂದಾಯವಾಗಿಲ್ಲ.

‘ರೈತರ ಸಾವಿನ ಬಹುತೇಕ ಪ್ರಕರಣಗಳನ್ನು ಆತ್ಮಹತ್ಯೆ ಎಂಬುದಾಗಿ ಬಿಂಬಿಸಿದ ಉದಾಹರಣೆಗಳಿವೆ. ಹೀಗಾಗಿ, ನಿಯಮ ಬಿಗಿಗೊಳಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಹೆಸರಿನಲ್ಲಿ ಜಮೀನು ಇರಬೇಕು. ಬ್ಯಾಂಕ್ನಲ್ಲಿ ಸಾಲವಿರಬೇಕು. ಬೆಳೆ ನಷ್ಟ ಆಗಿರಬೇಕು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಪರಿಹಾರಕ್ಕೆ ಶಿಫಾರಸು ಮಾಡಲಾಗುತ್ತಿದೆ’ ಎಂದು ಉಪವಿಭಾಗಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು

ಮೂರು ವರ್ಷಗಳ ಅವಧಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ 280 ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿಯೇ ಹಾವೇರಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ 239 ರೈತರು ಹಾಗೂ ಕಲಬುರಗಿ ಜಿಲ್ಲೆಯಲ್ಲಿ 206 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

2023-24ನೇ ಸಾಲಿನಲ್ಲಿ 1,080 ರೈತರು, 2024-25ರಲ್ಲಿ 1031 ರೈತರು ಹಾಗೂ 2025ರ ಡಿಸೆಂಬರ್ ಅಂತ್ಯಕ್ಕೆ 539 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಸಮಾಧಾನದ ಸಂಗತಿಯಾಗಿದೆ.

ಆತ್ಮಹತ್ಯೆ ತಡೆಗೆ ಸಹಾಯವಾಣಿ

ಆರ್ಥಿಕ ಸಂಕಷ್ಟ ಎದುರಿಸುವ ಹಾಗೂ ಸಾಲಗಾರರ ಕಾಟದಿಂದ ತೊಂದರೆ ಅನುಭವಿಸುವ ರೈತರ ನೆರವಿಗಾಗಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ' ಸಹಾಯವಾಣಿ ಆರಂಭಿಸಿದೆ.

'ರಾಜ್ಯದ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಏನೇ ಸಮಸ್ಯೆಯಿದ್ದರೂ ಅದನ್ನು ಸಮರ್ಥವಾಗಿ ಎದುರಿಸಲು ನಾವಿದ್ದೇವೆ. ದಿನದ 24 ಗಂಟೆಯೂ ನಮ್ಮ ಸಹಾಯವಾಣಿಗೆ (9480124365, 9483124365) ಕರೆ ಮಾಡಬಹುದು' ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.