ರಟ್ಟೀಹಳ್ಳಿ: ಕೆರೆಗಳು ಮನುಷ್ಯ, ಪ್ರಾಣಿ, ಪಕ್ಷಿಗಳ ಜೀವನಾಡಿಯಾಗಿದ್ದು, ಕುಡಿಯುವ ನೀರು, ಕೃಷಿ, ನೀರಾವರಿ, ಅಂತರ್ಜಲ ಮತ್ತು ಪರಿಸರ ಸಮ ತೋಲನಕ್ಕೆ ಅತ್ಯಗತ್ಯ. ಕೆರೆಗಳ ಸಂರಕ್ಷಣೆ, ಹೂಳು ತೆಗೆಯುವುದು ಮತ್ತು ಕಲುಪಿತವಾಗದಂತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಇಂತಹ ಮಹತ್ವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪಟ್ಟಣದ ಪುರಾತನ ಕೆಂಗಟ್ಟಿ ಕೆರೆಯ ಪುನಶ್ಚೇತನಗೊಳ್ಳುತ್ತಿರುವುದು ಈ ಭಾಗದ ರೈತರ, ಪಟ್ಟಣದ ಜನತೆಯ ಸಂತೋಷಕ್ಕೆ ಕಾರಣವಾಗಿದೆ.

ಪಟ್ಟಣದ ಹೃದಯಭಾಗದಲ್ಲಿ ಸುಮಾರು 13.54 ಎಕರೆ ವಿಸ್ತೀರ್ಣ ಹೊಂದಿರುವ ಅತ್ಯಂತ ಹಳೆಯದಾದ ಕೆರೆ ಹಲವಾರು ವರ್ಷಗಳಿಂದ ಕಲುಪಿತಗೊಂಡಿತ್ತು. ಬಯಲು ಶೌಚಾಲಯಕ್ಕೆಂದೇ ಸೀಮಿತಗೊಂಡಿತ್ತು.

ಕೆರೆಯ ಸುತ್ತಮುತ್ತಲಿನ ಪ್ರದೇಶ ಮಲೀನವಾಗಿದ್ದು, ಕೆರೆಯ ನೀರು ಕಲುಪಿತಗೊಂಡು ದನಕರುಗಳ ಮೈತೊಳೆಯಲು ಯೋಗ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣ ಗೊಂಡಿದೆ.

ಹಲವಾರು ವರ್ಷಗಳಿಂದ ಗಿಡಗಂಟೆ ಬೆಳೆದು, ಕೆರೆಯ ಹೂಳು ತುಂಬಿ ಕೇವಲ ಮಲ-ಮೂತ್ರ ವಿಸರ್ಜನೆಗೆಂದೇ ಸೀಮಿತಗೊಂಡಂತಿತ್ತು. ಅಲ್ಲದೇ ಸುತ್ತಮುತ್ತಲಿನ ಕೆರೆಯ ಜಾಗೆಯನ್ನು ಅತಿಕ್ರಮಣ ಮಾಡಲಾಗಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ನಮ್ಮ ಕೆರೆ ಪುನಶ್ಚೇತನ ಮಾಡುವ ಕಾರ್ಯವನ್ನು ಮುಂದಿಟ್ಟುಗೊಂಡು ಪಟ್ಟಣದ ಜನಪ್ರತಿನಿಧಿಗಳು, ಸಾರ್ವಜನಿಕರು ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿಗಳ ಗಮನಕ್ಕೆ ತಂದು ಇದೀಗ ಪಟ್ಟಣದ ಹಾಳುಕೊಂಪೆಯಾಗಿದ್ದ ಕೆಂಗಟ್ಟಿ ಕೆರೆ ಹೊಸ ಆಯಾಮಪಡೆಯುತ್ತಿರುವುದು ಎಲ್ಲರಲ್ಲೂ ಸಂತೋಷವನ್ನುಂಟುಮಾಡಿದೆ.

ಈ ಯೋಜನೆಗೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಉಸ್ತುವಾರಿಯಲ್ಲಿ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು, ಸಿಬ್ಬಂದಿ ಕಾರ್ಯೋನ್ಮುಖರಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯೊಂದಿಗೆ ನಿರಂತರ ಸಹಕರಾರ ನೀಡುತ್ತಿದ್ದಾರೆ.

ಇಷ್ಟೇ ಅಲ್ಲದೇ ಕೆರೆ ಅಭಿವೃದ್ಧಿ ಸಮಿತಿ ರಚಿಸಲಾಗಿದ್ದು, ಎಲ್ಲ ಸದಸ್ಯರು ಇದಕ್ಕೆ ಪೂರಕವಾಗಿ ಕೆಲಸದಲ್ಲಿ ತೊಡಗಿದ್ದಾರೆ. ಹಿಟಾಚಿ ಯಂತ್ರದ ಮೂಲಕ ಹೂಳೆತ್ತಿ ಏರಿ ನಿರ್ಮಾಣ ಮಾಡಲಾಗುತ್ತಿದೆ.

ರಾಜಕಾಲುವೆ ದುರಸ್ತಿ, ಮತ್ತು ಕೆರೆ ತುಂಬಿದ ನಂತರ ಕೆರೆ ನೀರು ಹೊರಗಡೆ ಹೋಗುವಂತೆ ಕೆರೆ ಕಾಲುವೆ ಮಾಡುವುದು ರೈತರು ಸ್ವಪ್ರೇರಣೆಯಿಂದ ಕೃಷಿ ಭೂಮಿಗೆ, ದೇವಸ್ಥಾನದ ಸುತ್ತಮುತ್ತ ಈ ಮಣ್ಣನ್ನು ಸಾಗಾಟದ ಮೂಲಕ ವಿಲೇವಾರಿ ಮಾಡಿಕೊಳ್ಳುತ್ತಿದ್ದಾರೆ. ಕೆರೆ ಅಭಿವೃದ್ಧಿ ಕಾಮಗಾರಿ ಮುಗಿದ ನಂತರ ಕೆರೆಯ ನಿರ್ವಹಣೆ ಹಾಗೂ ನೀರು ಹಂಚಿಕೆಯನ್ನು ಸಮಿತಿಯಿಂದಲೇ ಕೈಗೊಳ್ಳುವ ಯೋಜನೆ ರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.