ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳಕು ಜ್ಞಾನದ ಸಂಕೇತ’

Last Updated 6 ಏಪ್ರಿಲ್ 2020, 13:49 IST
ಅಕ್ಷರ ಗಾತ್ರ

ಹಾವೇರಿ:ಬೆಳಕು ಜ್ಞಾನದ ಸಂಕೇತ. ಕತ್ತಲೆ ಅಜ್ಞಾನದ ಕುರುಹು. ಈ ಜ್ಞಾನವೆಂಬ ಬೆಳಕಿನ ಬಲದಿಂದ ಅಜ್ಞಾನವೆಂಬ ಕತ್ತಲೆ ಹರಿಯುತ್ತದೆ. ಜ್ಞಾನದ ಬೆಳಕಿನಲ್ಲಿ ವಿವೇಕ ಅರಳುತ್ತದೆ ಎಂದು ನಗರದ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಗೂಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ, ಭಾನುವಾರ ಶ್ರೀಮಠದಲ್ಲಿ ಹಣತೆಗಳನ್ನು ಹಚ್ಚುವ ಮೂಲಕ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

‘ಸತ್ಯದ ಬಲದಿಂದ ಅಸತ್ಯ ಅಳಿಯುತ್ತದೆ. ಅಮೂಲ್ಯವಾದ ಸ್ಪರ್ಶ ಮಣಿಯ ಸೋಂಕಿನ ಬಲದಿಂದ ಕಬ್ಬಿಣ ಮುಂತಾದ ಅವರೋಹಗಳು ರೂಪಾಂತರ ಪಡೆಯುತ್ತವೆ. ನೀರಿನಲ್ಲಿ ತೊಯ್ದ ಕಬ್ಬಿಣವು ಬಲು ಬೇಗ ತುಕ್ಕು ಹಿಡಿದು ಪ್ರಯೋಜನಕ್ಕೆ ಬಾರದ ವಸ್ತುವಾಗಿರುತ್ತದೆ. ಅದಕ್ಕೆ ಪರುಷ ಮಣಿಯ ಸ್ಪರ್ಶದಿಂದ ಕಬ್ಬಿಣವು ಭಿನ್ನ ರೂಪ ತಾಳುತ್ತದೆ. ಅಂತೆಯೇ ಶರಣರ ಒಡನಾಟ ಮತ್ತು ಅವರ ಅನುಭವದ ನುಡಿಗ ಭವರೋಗ ನಿವಾರಣೆಯಾಗುವುದು ಎಂದರು.

ಶರಣರ ವಚನಗಳನ್ನು ಪಠಿಸುವ ಮೂಲಕ ದೇಶವು ಕೊರೊನಾ ಸೋಂಕಿನಿಂದ ಮುಕ್ತವಾಗಲಿ ಎಂದು ಪ್ರಾರ್ಥಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT