ಬ್ಯಾಡಗಿ: ಪಟ್ಟಣದ ಮಲ್ಲೂರು ರಸ್ತೆ ಬದಿ 10 ಎಕರೆ ಗುರುತಿಸಿರುವ ಜಾಗದಲ್ಲಿ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಭಾನುವಾರ ರಾಣೆಬೆನ್ನೂರು ನಗರಕ್ಕೆ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಡಿಎಸ್ಎಸ್ (ಪರಿವರ್ತನವಾದ) ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಗದಗಕರ ಮಾತನಾಡಿ, ‘ಹಲವಾರು ವರ್ಷಗಳಿಂದ ನಿವೇಶನ ರಹಿತ ಬಡವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಸಾಲ ಮಾಡಿ ರಾಜೀವಗಾಂಧಿ ಹೌಸಿಂಗ್ ನಿಗಮಕ್ಕೆ ತಲಾ ₹30 ಸಾವಿರ ಹಣ ಸಂದಾಯ ಮಾಡಿ 3 ವರ್ಷ ಕಳೆದಿವೆ. ನಿವೇಶನ ನೀಡದೆ ಸತಾಯಿಸಲಾಗುತ್ತಿದೆ. ಸಾಲ ಮಾಡಿದ ಹಣಕ್ಕೆ ಬಡ್ಡಿ ಕಟ್ಟುವುದು ತಪ್ಪಿಲ್ಲ’ ಎಂದು ಅಳಲು ತೋಡಿಕೊಂಡರು.

ಈಚೆಗೆ ಪಟ್ಟಣಕ್ಕೆ ಆಗಮಿಸಿದ ವಸತಿ ಸಚಿವ ಜಮೀರ್ ಅಹಮ್ಮದ್ಖಾನ್ ಕೆಲವರಿಗೆ ಹಕ್ಕುಪತ್ರ ವಿತರಿಸಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಇನ್ನೂ ನಿವೇಶನಗಳ ಹಂಚಿಕೆಯಾಗಿಲ್ಲ. ಆಶ್ರಯ ಸಮಿತಿ ಹಣ ಪಡೆದು ಮೃತಪಟ್ಟವರ ಹೆಸರುಗಳನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಕಾರಣ ಆಶ್ರಯ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿ ರಚಿಸಿ ಕೂಡಲೇ ನಿವೇಶನ ಹಂಚಿಕೆಯ ಹಕ್ಕು ಪತ್ರಗಳ ವಿತರಣೆ ಮಾಡುವಂತೆ ಆಡಳಿತಾಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿಕೊಂಡರು.

ಸುಮಂಗಲಾ ಹಾವನೂರ ಮಾತನಾಡಿ, ‘ನಗರ ವಸತಿ ಸಮಿತಿ ಮೃತಪಟ್ಟವರ ಹೆಸರನ್ನು ಆಯ್ಕೆಪಟ್ಟಿಯಲ್ಲಿ ಸೇರಿಸಿದ್ದು ಬಡವರಿಗೆ ಅನ್ಯಾಯವಾಗಿದೆ. ಶಾಸಕ ಶಿವಣ್ಣನವರ ಕೂಲಂಕುಷವಾಗಿ ಪರಿಶೀಲಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಸೂಚಸುವಂತೆ ಮನವಿ ಮಾಡಿಕೊಂಡರು. ಶ್ರೀಲಕ್ಷ್ಮಿ, ಪ್ರಜ್ವಲ್, ಕೆ.ಎಂ.ದೂಳಿಕೊಪ್ಪ, ಪುಷ್ಪಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-22-1973667675

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.