ಸಂತೋಷ ಜಿಗಳಿಕೊಪ್ಪ

ಹಾವೇರಿ: ‘ನೀವು ಆರ್ಥಿಕ ಕಷ್ಟದಲ್ಲಿ ಇದ್ದೀರಾ? ಯಾವುದೇ ದಾಖಲೆ ಇಲ್ಲದೇ, ಕಡಿಮೆ ಬಡ್ಡಿ ದರದಲ್ಲಿ ಸಾಲ ಬೇಕಾ? ಕೂಡಲೇ ಈ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ’... ಈ ರೀತಿಯ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದನ್ನು ನಂಬಿ ಹಲವು ಯುವಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಾಲ ಮರುಪಾವತಿ ಮಾಡಿದರೂ ಮೊಬೈಲ್ಗೆ ಬರುವ ತಮ್ಮ ಅಶ್ಲೀಲ ಫೋಟೊ (ಮಾರ್ಫಿಂಗ್) ನೋಡಿ ಠಾಣೆ ಮೆಟ್ಟಿಲೇರಿ ಕಣ್ಣೀರುಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಜೀವನಕ್ಕೆ ಮಾರು ಹೋಗುತ್ತಿರುವ ಹಲವು ಯುವಕರು, ಸಾಲದ ಶೂಲಕ್ಕೆ

ಸಿಲುಕಿಕೊಳ್ಳುತ್ತಿದ್ದಾರೆ. ದಿನದ ದುಡಿಮೆ ಹಾಗೂ ತಿಂಗಳ ಅಲ್ಪಸ್ವಲ್ಪ ಸಂಬಳದಲ್ಲಿ ಜೀವನ ನಡೆಸುತ್ತಿರುವವರು ಸಹ, ದುಬಾರಿ ವಸ್ತುಗಳ ಖರೀದಿ ಹಾಗೂ ಐಷಾರಾಮಿ ಜೀವನಕ್ಕೆ ಆಸೆಪಟ್ಟು ಆರ್ಥಿಕ ಹೊರೆ ಮಾಡಿಕೊಳ್ಳುತ್ತಿದ್ದಾರೆ.

‘ಕಡಿಮೆ ಸಮಯದಲ್ಲಿ ಹೆಚ್ಚು ಹಣ ಪಡೆಯಬೇಕು’ ಎಂಬ ಆಸೆಯಿಂದ ಹಲವರು, ತಮ್ಮ ಮೊಬೈಲ್ನಲ್ಲಿ ಬರುವ ಸಾಲದ ಜಾಹೀರಾತುಗಳನ್ನು ನಂಬುತ್ತಿದ್ದಾರೆ. ಸಾಲದ ಆ್ಯಪ್ಗಳು ಕೇಳುವ ಎಲ್ಲ ದಾಖಲೆ ಹಾಗೂ ಮೊಬೈಲ್ನಲ್ಲಿರುವ ಎಲ್ಲ ದತ್ತಾಂಶಗಳನ್ನು ನೀಡಿ, ಸಾಲ ಪಡೆದುಕೊಳ್ಳುತ್ತಿದ್ದಾರೆ.

ಅವಶ್ಯಕತೆ ಇರುವ ಸಂದರ್ಭದಲ್ಲಿ ಸಾಲ ನೀಡುತ್ತಿರುವ ಆ್ಯಪ್ ಕಂಪನಿಯವರು, ಸಾಲ ಮರುಪಾವತಿ ಸಂದರ್ಭದಲ್ಲಿ ನಾನಾ ಷರತ್ತುಗಳನ್ನು ವಿಧಿಸಿ ಹೆಚ್ಚುವರಿ ಹಣ ಪಡೆಯುತ್ತಿವೆ. ಹಣ ನೀಡದಿದ್ದರೆ, ಸಾಲಗಾರರ ಫೋಟೊಗಳನ್ನು ಅಶ್ಲೀಲ ರೀತಿಯಲ್ಲಿ ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವುದಾಗಿ ಹಾಗೂ ಕುಟುಂಬಸ್ಥರು–ಪರಿಚಯಸ್ಥರ ವಾಟ್ಸ್ಆ್ಯಪ್ ನಂಬರ್ಗೆ ಕಳುಹಿಸುವುದಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿಯೂ ನಿತ್ಯ ಇಬ್ಬರಿಂದ ಮೂರು ಜನ, ಬ್ಲ್ಯಾಕ್ಮೇಲ್ ಜಾಲಕ್ಕೆ ಸಿಲುಕಿ ನರಳಾಡುತ್ತಿದ್ದಾರೆ. ಇದರಲ್ಲಿ ಕೆಲವರು, ಪೊಲೀಸ್ ಠಾಣೆ ಹಾಗೂ ಸೆನ್ ಠಾಣೆಗೆ ದೂರು ನೀಡುತ್ತಿದ್ದಾರೆ. ಮಲೇಷ್ಯಾ, ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿರುವ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದು, ಅವರ ಪತ್ತೆಯೂ ಪೊಲೀಸರಿಗೆ ಸವಾಲಾಗಿದೆ.

ವ್ಯವಸ್ಥಿತ ಜಾಲ: ಇಂದಿನ ಅಂತರ್ಜಾಲ ಯುಗದಲ್ಲಿ ಮೊಬೈಲ್ ಮೂಲಕವೇ ಎಲ್ಲ ಆರ್ಥಿಕ ವ್ಯವಹಾರಗಳು ನಡೆಯುತ್ತಿವೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು, ಇನ್ನೊಂದು ಮೂಲೆಯಲ್ಲಿರುವ ವ್ಯಕ್ತಿಯನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಬಹುದಾಗಿದೆ. ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿರುವ ಸೈಬರ್ ವಂಚಕರು, ಸಾಲದ ಆ್ಯಪ್ಗಳ ಮೂಲಕ ಜನರನ್ನು ಸಂಪರ್ಕಿಸಿ ಬ್ಲ್ಯಾಕ್ಮೇಲ್ ತಂತ್ರದ ಮೂಲಕ ಹಣ ಗಳಿಸುತ್ತಿದ್ದಾರೆ.

‘ವಾಟ್ಸ್ಆ್ಯಪ್, ಫೇಸ್ಬುಕ್, ಎಕ್ಸ್, ಇನ್ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಸಾಲದ ಆ್ಯಪ್ಗಳ ಜಾಹೀರಾತು ನೀಡಲಾಗುತ್ತಿದೆ. ಹಣದ ಅಗತ್ಯ ಇರುವ ಜನರು, ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು ಅದರಲ್ಲಿ ಕೇಳುವ ಎಲ್ಲ ವೈಯಕ್ತಿಕ ವಿವರ ಹಂಚಿಕೊಳ್ಳುತ್ತಿದ್ದಾರೆ. ಇದೇ ಮಾಹಿತಿ ಆಧರಿಸಿ ಆರೋಪಿಗಳು, ಜನರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ’ ಎಂದು ಹಾವೇರಿ ಸೆನ್ ಠಾಣೆಯ ಪೊಲೀಸರು ಹೇಳಿದರು.

‘ಯಾವುದೇ ಅಪರಿಚಿತ ಆ್ಯಪ್ ಜೊತೆ ವ್ಯವಹಾರ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಮಹಿಳೆಯರು ತುಂಬಾ ಜಾಗೃತರಾಗಿರಬೇಕು. ಅಂದಾಗ ಮಾತ್ರ, ಇಂಥ ಕೃತ್ಯಗಳನ್ನು ತಡೆಯಬಹುದು’ ಎಂದು ತಿಳಿಸಿದರು.

ನಿಷೇಧವಿದ್ದರೂ ಆ್ಯಪ್ ಬಳಕೆ: ‘ಸಾಲದ ಸೋಗಿನಲ್ಲಿ ಜನರನ್ನು ವಂಚಿಸುವ ಹಲವು ಆ್ಯಪ್ಗಳನ್ನು ಗೂಗಲ್ ಪ್ಲೇಸ್ಟೋರ್ನಿಂದ ನಿಷೇಧ ಮಾಡಲಾಗಿದೆ. ಅಷ್ಟಾದರೂ ವಂಚಕರು, ತಮ್ಮದೇ ಜಾಲತಾಣದ ಮೂಲಕ ಆ್ಯಪ್ ಲಿಂಕ್ ಶೇರ್ ಮಾಡುತ್ತಿದ್ದಾರೆ. ಇದೇ ಲಿಂಕ್ ಬಳಸಿ ಜನರು ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು ವಂಚನೆಗೆ ಒಳಗಾಗುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ಸಾಲದಆ್ಯಪ್ಗಳ ಬಗ್ಗೆ ಜನರು ಹೆಚ್ಚು ಜಾಗೃತಿ ವಹಿಸಬೇಕು. ಯಾವುದೇ ಸಂದೇಹವಿದ್ದರೆ ಹಾಗೂ ಯಾರಾದರೂ ಬ್ಲ್ಯಾಕ್ಮೇಲ್ ಮಾಡಿದರೂ ಠಾಣೆಗೆ ಧೈರ್ಯವಾಗಿ ಬಂದು ದೂರು ನೀಡಬಹುದು

–‘ಸೆನ್‘ ಠಾಣೆ ಪೊಲೀಸರು, ಹಾವೇರಿ

‘ಮೊದಲಿಗೆ ₹2,000 ಸಾಲ’

‘ಬ್ಯಾಂಕ್ವೊಂದರಲ್ಲಿ ಡಿ ಗ್ರೂಪ್ ಕೆಲಸ ಮಾಡುವ ನನಗೆ, ತಿಂಗಳ ಅಂತ್ಯದಲ್ಲಿ ಹಣದ ಅಗತ್ಯವಿತ್ತು. ಫೇಸ್ಬುಕ್ನಲ್ಲಿ ಬಂದಿದ್ದ ಜಾಹೀರಾತು ನಂಬಿ, ಆ್ಯಪ್ವೊಂದನ್ನು ಇನ್ಸ್ಟಾಲ್ ಮಾಡಿಕೊಂಡಿದ್ದೆ. ಮೊದಲಿಗೆ ₹ 2 ಸಾವಿರ ಮಾತ್ರ ಸಾಲ ನೀಡುವುದಾಗಿ ತೋರಿಸಿತ್ತು. ಅದಕ್ಕೆ ಒಪ್ಪಿ, ಎಲ್ಲ ಮಾಹಿತಿ ನೀಡಿದ್ದೆ. ಬಡ್ಡಿ ಕಡಿತವಾಗಿ ಕೈಗೆ ₹ 1,700 ಮಾತ್ರ ನೀಡಿದ್ದರು’ ಎಂದು ಹಾನಗಲ್ ನಿವಾಸಿಯಾದ ಸಂತ್ರಸ್ತರೊಬ್ಬರು ಹೇಳಿದರು.

‘ಸಾಲ ವಾಪಸು ಮಾಡುವಂತೆ ಆರೋಪಿಗಳು ಸಂದೇಶ ಕಳುಹಿಸಿದ್ದರು. ಆ್ಯಪ್ನಲ್ಲಿದ್ದ ಖಾತೆ ಸಂಖ್ಯೆಗೆ ₹ 2,000 ಜಮೆ ಮಾಡಿದ್ದೆ. ಇದಾದ ನಂತರವೂ ಸಂದೇಶ ಕಳುಹಿಸಿದ್ದ ಆರೋಪಿ, ಮತ್ತಷ್ಟು ಹಣ ಕೇಳಿದ್ದ. ಜೊತೆಗೆ, ಯುವತಿಯೊಬ್ಬರ ಜೊತೆಗೆ ನನ್ನ ಫೊಟೊ ಜೋಡಿಸಿ ಅಶ್ಲೀಲ ರೀತಿಯ ಫೋಟೊ ಕಳುಹಿಸಿದ್ದ. ‘ಕೇಳಿದಷ್ಟು ಹಣ ನೀಡಬೇಕು. ಇಲ್ಲದಿದ್ದರೆ, ಫೋಟೊವನ್ನು ನಿನ್ನ ಪತ್ನಿ ಹಾಗೂ ಸಂಬಂಧಿಕರು–ಸ್ನೇಹಿತರಿಗೆ ಕಳುಹಿಸುತ್ತೇನೆ’ ಎಂದು ಬೆದರಿಸಿದ್ದ. ಇದರಿಂದ ತುಂಬಾ ಹೆದರಿದ್ದೆ. ಮರುದಿನ ಹಾವೇರಿ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದೆ’ ಎಂದು ತಿಳಿಸಿದರು.

ಬ್ಯಾಡಗಿ ನಿವಾಸಿಯೊಬ್ಬರು, ‘ಆ್ಯಪ್ ಮೂಲಕ ಸಾಲ ಪಡೆದು, ವಾಪಸು ಕಟ್ಟಿದ್ದೆ. ಅಷ್ಟಾದರೂ ಅಶ್ಲೀಲ ಫೋಟೊ ತೋರಿಸಿ, ಬ್ಲ್ಯಾಕ್ಮೇಲ್ ಮಾಡುತ್ತಿದ್ದರು. ಅದಕ್ಕೆ ಹೆದರಿ ₹ 28 ಸಾವಿರ ಕಟ್ಟಿದ್ದೆ. ಸ್ನೇಹಿತರಿಗೆ ವಿಷಯ ತಿಳಿಸಿದಾಗ, ಹಣ ನೀಡದಂತೆ ಹೇಳಿದರು. ಅಂದಿನಿಂದ ಕೆಲ ದಿನ ಮೊಬೈಲ್ ಸ್ವಿಚ್ ಆಫ್ ಮಾಡಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.