ಹಾವೇರಿ: ರಾಜ್ಯದಾದ್ಯಂತ ಮೆಕ್ಕೆಜೋಳದ ಬೆಲೆ ಕುಸಿತಗೊಂಡಿದ್ದ ಸಂದರ್ಭದಲ್ಲಿ ನೆರವಿಗೆ ಬಂದಿದ್ದ ರಾಜ್ಯ ಸರ್ಕಾರ, ಜಿಲ್ಲೆಯ ಹಲವು ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ವ್ಯವಸ್ಥೆ ಮಾಡಿತ್ತು. ಬ್ಯಾಡಗಿಯ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸೊಸೈಟಿ (ಟಿ.ಎ.ಪಿ.ಸಿ.ಎಂ.ಎಸ್.) ಮೂಲಕ ಮೆಕ್ಕೆಜೋಳ ಮಾರಿದ್ದ ರೈತರು, ಬಾಕಿ ಬಿಲ್ಗಾಗಿ ಜಾತಕ ಪಕ್ಷಿಯಂತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ರೈತರ ಮೆಕ್ಕೆಜೋಳವನ್ನು ₹ 2,400 ಬೆಲೆಯಲ್ಲಿ ಖರೀದಿ ಮಾಡಲು ಬ್ಯಾಡಗಿ ಸೇರಿದಂತೆ 12 ಕಡೆಗಳಲ್ಲಿ ಕೇಂದ್ರ ತೆರೆಯಲಾಗಿತ್ತು. ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಸಹ ಮೆಕ್ಕೆಜೋಳ ಖರೀದಿಸಿತ್ತು. ಕೆಎಂಎಫ್ ಮೂಲಕ ಮೆಕ್ಕೆಜೋಳ ಮಾರಿದ್ದ ಬಹುತೇಕ ರೈತರಿಗೆ ಈಗಾಗಲೇ ಹಣ ಸಂದಾಯವಾಗಿದೆ.

ಆದರೆ, ಬ್ಯಾಡಗಿ ಟಿಎಪಿಸಿಎಂಎಸ್ ಮೂಲಕ ಮೆಕ್ಕೆಜೋಳ ಮಾರಿದ್ದ ರೈತರಿಗೆ ಮಾತ್ರ ಇದುವರೆಗೂ ಹಣ ಸಂದಾಯವಾಗಿಲ್ಲ. ಇದರ ವಿರುದ್ಧ ಆಕ್ರೋಶಗೊಂಡಿರುವ ರೈತರು, ತಮ್ಮ ಬಾಕಿ ಬಿಲ್ ಕೊಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ₹ 2,400 ಬೆಲೆಯಲ್ಲಿ ರೈತರಿಂದ ಮೆಕ್ಕೆಜೋಳ ಖರೀದಿಸಲಾಗಿತ್ತು. ರೈತರು ನೋಂದಣಿ ಮಾಡಿಕೊಂಡು ಮೆಕ್ಕೆಜೋಳ ಮಾರಿದ್ದಾರೆ. ಆದರೆ, ಕುಕ್ಕುಟೋದ್ಯಮದ ಆಹಾರಕ್ಕಾಗಿ ಬ್ಯಾಡಗಿ ಟಿಎಪಿಸಿಎಂಎಸ್ ಮೂಲಕ ಮೆಕ್ಕೆಜೋಳ ಖರೀದಿಸಿದ್ದ ಉದ್ಯಮಿ ನಾಪತ್ತೆಯಾಗಿದ್ದಾರೆ. ಇದುವರೆಗೂ ನಮ್ಮ ಖಾತೆಗೆ ಹಣ ಜಮೆ ಮಾಡಿಲ್ಲ’ ಎಂದು ರೈತರು ದೂರಿದರು.

300 ರೈತರು ಕಂಗಾಲು: ‘ಬ್ಯಾಡಗಿ ಹಾಗೂ ಸುತ್ತಮುತ್ತಲಿನ ತಾಲ್ಲೂಕಿನ 300ಕ್ಕೂ ಹೆಚ್ಚು ರೈತರು, ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಕೊಂಡಿದ್ದರು. ಉದ್ಯಮಿ ನೀಡಿದ್ದ ದಿನದಂದು ಬ್ಯಾಡಗಿ ಟಿಎಪಿಸಿಎಂಎಸ್ಗೆ ಮೆಕ್ಕೆಜೋಳ ಕೊಂಡೊಯ್ದು, ಮಾರಿದ್ದಾರೆ. ಆದರೆ, ಸ್ಥಳದಲ್ಲೇ ಹಣ ಸಂದಾಯ ಮಾಡಿರಲಿಲ್ಲ’ ಎಂದು ರೈತರು ಹೇಳಿದರು.

‘ಕೆಲ ದಿನ ಬಿಟ್ಟು ಹಣ ನೀಡುವುದಾಗಿ ಉದ್ಯಮಿ ಹೇಳಿದ್ದರು. ಆದರೆ, ಇದುವರೆಗೂ ಹಣ ನೀಡಿಲ್ಲ. 300 ರೈತರಿಗೆ ಸುಮಾರು ₹ 30 ಲಕ್ಷದಷ್ಟು ಬಾಕಿ ಹಣ ಸಂದಾಯ ಆಗಬೇಕಿದೆ’ ಎಂದು ತಿಳಿಸಿದರು.

‘ದಾವಣಗೆರೆಯ ಉದ್ಯಮಿಯು ಕುಕ್ಕುಟೋದ್ಯಮ (ಕೋಳಿ ಸಾಕಾಣಿಕೆ) ಆಹಾರಕ್ಕಾಗಿ ಮೆಕ್ಕೆಜೋಳ ಖರೀದಿಸಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತ ಸಹ ಅವರಿಗೆ ಸಹಾಯ ಮಾಡಿತ್ತು. ಆದರೆ, ಈಗ ಉದ್ಯಮಿಯು ರೈತರಿಗೆ ಹಣ ನೀಡಿಲ್ಲ. ಹೀಗಾಗಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ರೈತರು ಹೇಳಿದರು.

‘ಬ್ಯಾಡಗಿ ಟಿಎಪಿಸಿಎಂಎಸ್ ಮೂಲಕ ಮೆಕ್ಕೆಜೋಳ ಮಾರಿರುವ ಎಲ್ಲ ರೈತರಿಗೆ ಮಾರ್ಚ್ ಅಂತ್ಯದೊಳಗೆ ಬಾಕಿ ಹಣ ಕೊಡಿಸಬೇಕು. ಇಲ್ಲದಿದ್ದರೆ, ಬಡ್ಡಿ ಸಮೇತ ಬಾಕಿ ಹಣ ವಸೂಲಿಗಾಗಿ ಪ್ರತಿಭಟನೆ ಆರಂಭಿಸಲಾಗುವುದು’ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-22-632355147

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.