ಹಾವೇರಿ: ‘ಆನ್ಲೈನ್ ಮೂಲಕ ನಡೆಯುವ ಔಷಧ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು’ ಎಂದು ಆಗ್ರಹಿಸಿ ದೇಶದಾದ್ಯಂತ ಬಂದ್ಗೆ ಕರೆ ನೀಡಲಾಗಿದೆ. ಅದನ್ನು ಬೆಂಬಲಿಸಿ, ಹಾವೇರಿ ಜಿಲ್ಲೆಯಲ್ಲಿಯೂ ಮೇ 19ರ ರಾತ್ರಿ 12 ಗಂಟೆಯಿಂದ ಮೇ 21ರ ನಸುಕಿನವರೆಗೂ ಔಷಧಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಫಾರ್ಮಾಸಿಸ್ಟ್ಗಳು ತೀರ್ಮಾನಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 700 ಫಾರ್ಮಾಸಿಸ್ಟ್ಗಳು, ಔಷಧ ಅಂಗಡಿ ನಡೆಸಲು ಪರವಾನಗಿ ಪಡೆದುಕೊಂಡಿದ್ದಾರೆ. ಇದರಲ್ಲಿ ಸುಮಾರು 600 ಮಳಿಗೆಗಳು ಸದ್ಯ ಕಾರ್ಯನಿರ್ವಹಿಸುತ್ತಿದೆ. ಮೇ 19ರ ರಾತ್ರಿ 12 ಗಂಟೆಯಿಂದ ಮೇ 21ರ ನಸುಕಿನವರೆಗೂ ಈ 600 ಮಳಿಗೆಗಳು ಸಂಪೂರ್ಣವಾಗಿ ಬಂದ್ ಆಗಲಿವೆ.

ಸರ್ಕಾರಿ ಆಸ್ಪತ್ರೆಯ ಮಳಿಗೆಗಳು, ಪ್ರಧಾನಮಂತ್ರಿ ಜನೌಷಧ ಮಳಿಗೆಗಳು ಮಾತ್ರ ಅಂದು ಕಾರ್ಯನಿರ್ವಹಿಸಲಿವೆ. ಉಳಿದಂತೆ, ಖಾಸಗಿ ಫಾರ್ಮಾಸಿಸ್ಟ್ಗಳು ನಡೆಸುವ ಎಲ್ಲ ಔಷಧ ಮಳಿಗೆಗಳು ಬಂದ್ ಇರಲಿವೆ.

ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಬ್ಯಾಡಗಿ, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲಿರುವ ಬಹುತೇಕ ಔಷಧ ಅಂಗಡಿಗಳನ್ನು ಮುಚ್ಚಿ, ಫಾರ್ಮಾಸಿಸ್ಟ್ಗಳು ಒಂದು ದಿನ ಪ್ರತಿಭಟನೆ ನಡೆಸಲಿದ್ದಾರೆ.

ಅಗತ್ಯ ಸೇವೆಗಳ ವ್ಯಾಪ್ತಿಯಲ್ಲಿರುವ ಔಷಧ ಅಂಗಡಿಗಳನ್ನು ದಿಢೀರ್ ಬಂದ್ ಮಾಡಿದರೆ, ರೋಗಿಗಳಿಗೆ ತೊಂದರೆ ಆಗಲಿದೆ. ತುರ್ತು ಸಂದರ್ಭಗಳಲ್ಲಿ ಔಷಧಿ ಸಿಗದೇ ಜನರ ಪ್ರಾಣಕ್ಕೂ ಕುತ್ತು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಔಷಧ ಅಂಗಡಿ ಬಂದ್ ಮಾಡುವುದರಿಂದ, ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಸಾಕಷ್ಟು ತೊಂದರೆ ಅನುಭವಿಸಲಿದ್ದಾರೆ.

ಸ್ಪಂದನೆ ಸಿಗದಿದ್ದಕ್ಕೆ ಬಂದ್; ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಂದ್ ಬಗ್ಗೆ ಮಾಹಿತಿ ನೀಡಿದ ಹಾವೇರಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸತ್ಯನಾರಾಯಣ ಕೇಲಗಾರ, ‘ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಸ್ಪಂದನೆ ಸಿಗದಿದ್ದರಿಂದ, ರಾಷ್ಟ್ರೀಯ ಸಂಘಟನೆಯ ಕರೆ ಮೇರೆಗೆ ಹಾವೇರಿ ಜಿಲ್ಲೆಯಲ್ಲಿಯೂ ಔಷಧ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದರು.

‘ಸರ್ಕಾರ ರೂಪಿಸಿರುವ ನಿಯಮಗಳ ಅನ್ವಯ ಪರವಾನಗಿ ಪಡೆದು, ಇಲಾಖೆಯ ನಿಯಂತ್ರಣಕ್ಕೆ ಒಳಪಟ್ಟು ಔಷಧ ಅಂಗಡಿಗಳನ್ನು ನಡೆಸುತ್ತಿದ್ದೇವೆ. ರೋಗಿಗಳು ಹಾಗೂ ಜನರ ಆರೋಗ್ಯದ ಕಾಳಜಿ ಮಾಡುತ್ತಿದ್ದೇವೆ. ಅಪಾಯಕಾರಿ ಔಷಧಗಳನ್ನು ಅತಿಯಾಗಿ ತೆಗೆದುಕೊಳ್ಳುವ ಜನರಿಗೂ ತಿಳಿವಳಿಕೆ ಮೂಡಿಸುತ್ತಿದ್ದೇವೆ. ನಿಷೇಧಿತ ಔಷಧಗಳ ಮಾರಾಟವನ್ನೇ ಬಂದ್ ಮಾಡಿದ್ದೇವೆ. ಆದರೆ, ಇಷ್ಟೆಲ್ಲ ನಿಯಮಗಳನ್ನು ಆನ್ಲೈನ್ ಔಷಧ ಮಾರಾಟಗಾರರು ಪಾಲಿಸುತ್ತಿಲ್ಲ. ನಿಷೇಧಿತ ಡ್ರಗ್ಸ್ಗಳನ್ನು ಹಾಗೂ ಅನಿಯಮಿತ ಔಷಧಗಳನ್ನು ಬೇಕಾಬಿಟ್ಟಿಯಾಗಿ ಕೊಡುತ್ತಿದ್ದಾರೆ. ಅವರ ಮಾರಾಟಕ್ಕೆ ನಿಯಂತ್ರಣವೇ ಇಲ್ಲದಂತಾಗಿದೆ. ಇದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಇದೇ ಕಾರಣಕ್ಕೆ ಆನ್ಲೈನ್ ಮಾರಾಟ ಬಂದ್ ಮಾಡುವಂತೆ ಒತ್ತಾಯಿಸಿ ಹೋರಾಟ ಆರಂಭಿಸಿದ್ದೇವೆ’ ಎಂದು ಕೇಲಗಾರ ತಿಳಿಸಿದರು.

‘ಕೋವಿಡ್ ಸಂದರ್ಭದಲ್ಲಿ ಕೋರಿಯರ್ ಮೂಲಕ ಔಷಧ ಮಾರಾಟಕ್ಕಾಗಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಅದೊಂದೇ ಅವಕಾಶ ಬಳಸಿಕೊಂಡು ದೊಡ್ಡ ಕಂಪನಿಗಳು ಸಹ ಔಷಧ ಮಾರುತ್ತಿವೆ. ನಿಗದಿಗಿಂತಲೂ ಹೆಚ್ಚಿನ ರಿಯಾಯಿತಿ ನೀಡಿ, ಗ್ರಾಹಕರ ದಿಕ್ಕು ತಪ್ಪಿಸುತ್ತಿವೆ. ಅವರು ಮಾರುತ್ತಿರುವುದು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಪರಿಶೀಲಿಸಲು ಸಹ ಯಾರೂ ಇಲ್ಲವಾಗಿದೆ. ಇಂಥ ಮಾರಾಟವನ್ನು ನಿಷೇಧಿಸಲು ಕೇಂದ್ರ ಸರ್ಕಾರ ಕಾಯ್ದೆಯನ್ನು ರೂಪಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಕಾರ್ಯದರ್ಶಿ ರಾಜೇಂದ್ರ ಇರಕಲ, ಉಪಾಧ್ಯಕ್ಷ ಶರದ ಕುದರಿ, ಖಜಾಂಚಿ ರಾಜೇಶ್ ಲೊಡಾಯಿ, ಸಿದ್ದಣ್ಣ ಮೆಣಸಿನಹಾಳ, ಸುಬ್ರಮಣ್ಯ, ನೀಲಕಂಠ ನಾಡಿಗೇರ ಪತ್ರಿಕಾಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-22-1849966973

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.