ಹಾವೇರಿ: ಜಿಲ್ಲೆಯ ಹಲವು ಕಡೆಗಳಲ್ಲಿ ಚಿನ್ನ ಹಾಗೂ ಇತರೆ ನೈಸರ್ಗಿಕ ಖನಿಜ ಸಂಪತ್ತು ಇರುವ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆಹಾಕಿರುವ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆ (ಜಿಎಸ್ಐ), ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಏರ್ಕ್ರಾಫ್ಟ್ ಉಪಕರಣದ ಮೂಲಕ ಶೋಧ ಕಾರ್ಯ ಶುರು ಮಾಡಿದೆ.

ವಿಶೇಷ ಅಭಿಯಾನದ ಅಂಗವಾಗಿ ಕೇರಳ ರಾಜ್ಯದ ಕೆಲ ಪ್ರದೇಶಗಳಿಂದ ಹುಡುಕಾಟ ಆರಂಭಿಸಿರುವ ಜಿಎಸ್ಐ ಅಧಿಕಾರಿಗಳು, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆ ಮುಗಿಸಿ ಈಗ ಹಾವೇರಿ ಜಿಲ್ಲೆಗೆ ಪ್ರವೇಶಿಸಿದ್ದಾರೆ.

ಜಿಲ್ಲೆಯ ಹಾನಗಲ್, ಹಿರೇಕೆರೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಶನಿವಾರ, ಭಾನುವಾರ ಏರ್ಕ್ರಾಫ್ಟ್ ಹಾರಾಟ ನಡೆಸಿದೆ. ಇದನ್ನು ನೋಡಿದ ಸ್ಥಳೀಯರು, ಆತಂಕ ಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೊಂದು ಸಮೀಕ್ಷೆಯ ಹಾರಾಟ. ಆತಂಕಪಡದಂತೆ ಜನರಿಗೆ ತಿಳಿಸಿದ್ದಾರೆ.

ಸ್ಯಾಟ್ಲೈಟ್ ಸಮೀಕ್ಷೆ: ಭೂಮಿಯ ಒಡಲಾಳದಲ್ಲಿರುವ ಖನಿಜಗಳನ್ನು ಪ್ರಾಥಮಿಕವಾಗಿ ಪತ್ತೆ ಮಾಡಲು ಸ್ಯಾಟ್ಲೈಟ್ ವ್ಯವಸ್ಥೆಯಿದೆ. ಅದೇ ಸ್ಯಾಟ್ಲೆಟ್ ನೀಡುವ ಪ್ರಾಥಮಿಕ ಮಾಹಿತಿ ಆಧರಿಸಿ, ಆಯ್ಧ ಜಾಗಗಳಲ್ಲಿ ಇದೀಗ ಸಮೀಕ್ಷೆ ಶುರುವಾಗಿದೆ.

ರಾಣೆಬೆನ್ನೂರು ತಾಲ್ಲೂಕಿನ ಕಾಕೋಳದ ಗುಡ್ಡ ಹಾಗೂ ಹಾನಗಲ್ ತಾಲ್ಲೂಕಿನ ಮಾರಂಬೀಡ ಗುಡ್ಡದ ಬಳಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಈ ಹಿಂದೆ ಸುದ್ದಿಗಳು ಹರಿದಾಡಿದ್ದವು. ಕೆಲ ಸಂಶೋಧಕರು, ಗುಡ್ಡಗಳಲ್ಲಿ ಸಂಶೋಧನೆಯನ್ನೂ ನಡೆಸಿದ್ದರು. ಆದರೆ, ಎಷ್ಟು ಪ್ರಮಾಣದಲ್ಲಿ ಚಿನ್ನವಿದೆ ಎಂಬುದು ಗೊತ್ತಾಗಿರಲಿಲ್ಲ. ಈಗ ಸಮೀಕ್ಷೆ ನಡೆಯುತ್ತಿರುವುದರಿಂದ, ಚಿನ್ನದ ನಿಕ್ಷೇಪದ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವ ನಿರೀಕ್ಷೆಯಿದೆ.

ಆತಂಕಪಡದಂತೆ ಎಸ್.ಪಿ. ಕೋರಿಕೆ: ‘ಜಿಲ್ಲೆಯಲ್ಲಿ ಲಭ್ಯವಿರುವ ಖನಿಜ ಸಂಪತ್ತುಗಳ ಶೋಧನೆಗಾಗಿ ಹಲವು ಕಡೆಗಳಲ್ಲಿ ಏರ್ಕ್ರಾಫ್ಟ್ ಹಾರಾಟ ನಡೆಸುತ್ತಿದೆ’ ಎಂದು ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ತಿಳಿಸಿದ್ದಾರೆ.

‘ಜನರು ಆತಂಕಪಡುವ ಅವಶ್ಯಕತೆಯಿಲ್ಲ’ ಎಂದಿದ್ದಾರೆ.

‘ಜಿಎಸ್ಐ ಅಧಿಕಾರಿಗಳು ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು ಹಾಗೂ ಹಾವೇರಿ ತಾಲೂಕಿನ ಹಲವು ಕಡೆಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದಾರೆ. ಈ ವಿಮಾನವು ಭೂಮಿಯ ಕೆಳಭಾಗದಲ್ಲಿ ಹಾರಾಟ ನಡೆಸುತ್ತದೆ. ಈ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-22-1626125452

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.