ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಭದ್ರಾಪುರದಿಂದ (ಕೋಣನಕೇರಿ) ಮುಂಡಗೋಡ ಗಡಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ವ್ಯಾಪ್ತಿಯಲ್ಲಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರಂಭವಾಗಿ ಹಲವು ವರ್ಷಗಳೇ ಆಗಿವೆ. ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಯದಿದ್ದರಿಂದ, ಕೋಣನಕೇರಿ–ಮುಂಡಗೋಡ ಪ್ರಯಾಣ ಪ್ರಯಾಸದಾಯಕವಾಗಿದೆ.

ಕೋಣನಕೇರಿಯಿಂದ ಶುರುವಾಗುವ ರಸ್ತೆಯು ಭದ್ರಾಪುರ, ಬೊಮ್ಮನಹಳ್ಳಿ ಕ್ರಾಸ್(ಅಂದಲಗಿ), ಬಸವನಕಟ್ಟೆ, ಗೌಳೇರ ದಡ್ಡಿ, ಸನವಳ್ಳಿ ಮಾರ್ಗವಾಗಿ ಮುಂಡಗೋಡ ಸೇರುತ್ತದೆ. ಉದ್ಯೋಗ, ಶಿಕ್ಷಣ, ಸರ್ಕಾರಿ ಕಚೇರಿ ಕೆಲಸ, ಕೃಷಿ ಚಟುವಟಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಉದ್ದೇಶಕ್ಕಾಗಿ ಜನರು ಈ ರಸ್ತೆ ಮೂಲಕ ಸಂಚರಿಸುತ್ತಾರೆ. ಬೆಂಗಳೂರಿನಿಂದ ಗೋವಾಕ್ಕೆ ಹೋಗುವ ಹಲವು ಬೈಕ್ ಸವಾರರು, ಪ್ರಯಾಣಿಸುತ್ತಾರೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಶಿಗ್ಗಾವಿ ಪಟ್ಟಣ ಹಾಗೂ ತಾಲ್ಲೂಕಿನ ಬಂಕಾಪುರದಿಂದ ಮುಂಡಗೋಡಕ್ಕೆ ಹೋಗುವ ವಾಹನಗಳು, ಇದೇ ರಸ್ತೆ ಅವಲಂಬಿಸಿವೆ.

ಭದ್ರಾಪುರ ಮುಗಿದು ಬಸವನಕಟ್ಟೆ ಶುರುವಾಗುತ್ತಿದ್ದಂತೆ, ಮಲೆನಾಡಿನ ಅರಣ್ಯ ಪ್ರದೇಶದ ನಡುವೆ ಈ ರಸ್ತೆ ಸಾಗುತ್ತದೆ. ಮಳೆಗಾಲದಲ್ಲಂತೂ ಈ ರಸ್ತೆ ತೀರಾ ಹದಗೆಡುತ್ತದೆ. ಇಂಥ ಸ್ಥಿತಿಯಲ್ಲಿ ವಾಹನಗಳ ಸಂಚಾರ, ಭಯಾನಕವಾಗಿರುತ್ತದೆ. ರಸ್ತೆಯ ಕೆಸರಿನಲ್ಲಿಯೂ ವಾಹನಗಳ ಚಕ್ರಗಳು ಸಿಲುಕಿಕೊಳ್ಳುತ್ತವೆ. ಆಗಾಗ ರಸ್ತೆ ನಿರ್ಮಿಸಿದರೂ, ಮಳೆಗಾಲದಲ್ಲಿ ನೀರು ನಿಂತು ಹಾಳಾಗುತ್ತಿತ್ತು. ಇದನ್ನೆಲ್ಲ ಮನಗಂಡ ಸರ್ಕಾರ, ಕೋಣನಕೇರಿಯಿಂದ ಮುಂಡಗೋಡವರೆಗೂ ಸುಸಜ್ಜಿತ ರಸ್ತೆ ನಿರ್ಮಿಸಲು ಯೋಜನೆ ರೂಪಿಸಿತ್ತು. ಕೋಣನಕೇರಿಯಿಂದ ಬಸವನ ಕಟ್ಟೆ ಹೊರವಲಯದಲ್ಲಿರುವ ಗುಡ್ಡದವರೆಗೂ ರಸ್ತೆ ನಿರ್ಮಾಣದ ಹೊಣೆಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿತ್ತು. ಬಸವನಕಟ್ಟೆ ಗುಡ್ಡದಿಂದ ಮುಂಡಗೋಡ ಗಡಿವರೆಗಿನ (ಸನವಳ್ಳಿ ಹತ್ತಿರ) ರಸ್ತೆಯ ಅಭಿವೃದ್ಧಿ ಜವಾಬ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗ ವಹಿಸಿಕೊಂಡಿದೆ.

ಎರಡೂ ಇಲಾಖೆಯಿಂದಲೂ ಕೆಲ ವರ್ಷಗಳ ಹಿಂದೆಯೇ ಕಾಮಗಾರಿ ಆರಂಭವಾಗಿದೆ. ಲೋಕೋಪ ಯೋಗಿ ಇಲಾಖೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯು ಅತೀ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದುವರೆಗೂ ಕಾಮಗಾರಿ ಮುಗಿದಿಲ್ಲ ವೆಂದು ಜನರು ದೂರುತ್ತಿದ್ದಾರೆ. ಬಂಕಾಪುರ–ಮುಂಡಗೋಡ ಮಾರ್ಗದಲ್ಲಿ ಬಸ್ಗಳ ವ್ಯವಸ್ಥೆ ಚೆನ್ನಾಗಿದೆ. ಬೆಂಗಳೂರು ಮಾರ್ಗದ ಬಸ್ಗಳೂ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ರಸ್ತೆ ಹೆದಗೆಟ್ಟಿರುವುದರಿಂದ, ಬಸ್ಗಳು ಆಗಾಗ ಹಾಳಾಗುತ್ತಿವೆ.

‘ಕೋಣನಕೇರಿ–ಮುಂಡಗೋಡ ಮಾರ್ಗದಲ್ಲಿ ಉದ್ಯೋಗಕ್ಕಾಗಿ ನಿತ್ಯವೂ ಓಡಾಡುತ್ತೇವೆ. ರಸ್ತೆಯ ಕೆಲ ಭಾಗ ಮಾತ್ರ ಸರಿ ಇದೆ. ಉಳಿದ ಭಾಗವೆಲ್ಲವೂ ಕಿತ್ತುಹೋಗಿದೆ. ಇದರಿಂದ ಸಂಚಾರ ತೀರಾ ಕಷ್ಟಕರವಾಗಿದೆ’ ಎಂದು ಕೋಣನಕೇರಿ ನಿವಾಸಿ ರಾಘವೇಂದ್ರ ಹೇಳಿದರು.

‘ಅಲ್ಪಸ್ವಲ್ಪ ಹಾಳಾಗಿದ್ದ ರಸ್ತೆಯನ್ನು ಕಾಮಗಾರಿ ಹೆಸರಿನಲ್ಲಿ ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ. ಇದೇ ರಸ್ತೆಯಲ್ಲಿ ಮಳೆಯಾಗಿ, ಗುಂಡಿಗಳು ಬಿದ್ದಿವೆ. ಈಗ ರಸ್ತೆಯನ್ನೂ ಮಾಡಿಲ್ಲ’ ಎಂದರು.

ಗೌಳೇರ ದಡ್ಡಿ ರಸ್ತೆ ಚಿಂತಾಜನಕ: ಮುಂಡಗೋಡ ಗಡಿಗೆ ಹೊಂದಿಕೊಂಡಿರುವ ಸನವಳ್ಳಿ ಸಮೀಪದಲ್ಲಿ ಗೌಳೇರ ದಡ್ಡಿಯಿದೆ. 20ಕ್ಕೂ ಹೆಚ್ಚು ಮನೆಗಳಿವೆ. ಅವುಗಳ ಬಳಿಯೇ ಮುಖ್ಯರಸ್ತೆ ಹಾದು ಹೋಗಿದೆ. 2 ಕಿ.ಮೀ.ವರೆಗಿನ ರಸ್ತೆ ಸ್ಥಿತಿ ಚಿಂತಾಜನಕವಾಗಿದೆ.

ಮುಂಡಗೋಡಕ್ಕೆ ಹೋಗುವ ಮಾರ್ಗದಲ್ಲಿ ಬಸವನಕಟ್ಟೆ ಗ್ರಾಮದ ಸರಹದ್ದು ಮುಗಿಯುತ್ತಿದ್ದಂತೆ ಅರಣ್ಯ ಪ್ರದೇಶ ಶುರುವಾಗುತ್ತದೆ. ಈ ಪ್ರದೇಶದ ರಸ್ತೆಯನ್ನು ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ. ಆದರೆ, ಇದುವರೆಗೂ ಯಾವುದೇ ಕೆಲಸ ಆರಂಭಿಸಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯವೂ ಹೈರಾಣಾಗುತ್ತಿದ್ದಾರೆ.

ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಸಹ ಹಾಳಾಗುತ್ತಿವೆ. ಕೆಲವರು, ತಮ್ಮ ಕೆಲಸಕ್ಕೆ ಹೋಗುವ ಬದಲು ವಾಹನಗಳನ್ನು ಗ್ಯಾರೇಜ್ಗೆ ಕೊಂಡೊಯ್ಯುವ ಸ್ಥಿತಿಯಿದೆ. ಹಲವು ವಾಹನಗಳ ಚಕ್ರಗಳು ಫಂಕ್ಚರ್ ಆಗುತ್ತಿವೆ. ಕೆಲ ವಾಹನಗಳು ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿವೆ. ಈ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ನಡೆಯುತ್ತಿದೆ. ರಸ್ತೆಯ ಮಧ್ಯೆದಲ್ಲಿಯೇ ಕಾಂಕ್ರಿಟ್ ಹಾಕಲಾಗುತ್ತಿದೆ. ಅಕ್ಕ–ಪಕ್ಕದ ಅರಣ್ಯದ ಪ್ರದೇಶದಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ತೀರಾ ಗುಂಡಿ ರೀತಿಯಲ್ಲಿರುವ ಈ ಜಾಗದಲ್ಲಿ, ವಾಹನಗಳು ಸಂಚರಿಸಲು ಇಕ್ಕಟ್ಟಾಗಿದೆ. ಎದುರು ವಾಹನ ಬಂದ ನಂತರವೇ, ಮತ್ತೊಂದು ಬದಿಯಿಂದ ಇನ್ನೊಂದು ರಸ್ತೆ ದಾಟುವ ಸ್ಥಿತಿಯಿದೆ.

‘ಭದ್ರಾಪುರ–ಮುಂಡಗೋಡ ಗಡಿಯವರೆಗಿನ ಮುಖ್ಯರಸ್ತೆಯ ಅಭಿವೃದ್ಧಿ ಕಾಮಗಾರಿ ಯಾವಾಗ ಮುಗಿಯುತ್ತದೆ? ಎಂಬುದನ್ನು ಕಾಯುತ್ತ ಕುಳಿತಿದ್ದೇವೆ. ಕೆಲವೇ ತಿಂಗಳಿನಲ್ಲಿ ಮಳೆಗಾಲ ಶುರುವಾಗಲಿದೆ. ಕಾಮಗಾರಿ ವಿಳಂಬವಾದರೆ, ಈಗಾಗಲೇ ಮಾಡಿರುವ ರಸ್ತೆಯು ಹಾಳಾಗುತ್ತದೆ’ ಎಂದು ಬಸವನಕಟ್ಟಿ ನಿವಾಸಿ ರವಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-22-28199552

ಭದ್ರಾಪುರ ಗ್ರಾಮದಲ್ಲಿ ರಸ್ತೆಯ ಒಂದು ಬದಿಯ ಕಾಂಕ್ರೀಟ್ ಮುಗಿದಿದೆ. ಇನ್ನೊಂದು ಬದಿಯ ಕೆಲಸ ಆರಂಭವಾಗಲಿದ್ದು, ಇನ್ನೊಂದು ತಿಂಗಳಿನಲ್ಲಿ ಕೆಲಸವನ್ನು ಸಂಪೂರ್ಣವಾಗಿ ಮುಗಿಸಲಾಗುವುದು ಡಿ
.ಬಿ. ಬಸವರಾಜ್, ಎಇಇ, ಶಿಗ್ಗಾವಿ, ಲೋಕೋಪಯೋಗಿ ಇಲಾಖೆ

ಸಿಆರ್ಎಫ್ ಅನುದಾನದ ರಸ್ತೆ

‘ಬಸವನಕಟ್ಟೆ ಹೊರವಲಯದ ಗುಡ್ಡದಿಂದ ಮುಂಡಗೋಡ ಗಡಿವರೆಗಿನ ರಸ್ತೆಯನ್ನು ಸಿಆರ್ಎಫ್ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಅನುದಾನ ಲಭ್ಯತೆ ಕೊರತೆಯಿಂದ ಕಾಮಗಾರಿ ಮುಂದೆ ಸಾಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಲೋಕೋಪಯೋಗಿ ಇಲಾಖೆಯ ಕೆಲಸ ಪ್ರಗತಿಯಲ್ಲಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕೆಲಸ ತುಂಬಾ ಬಾಕಿಯಿದೆ. ಕೆಲ ಕಡೆಗಳಲ್ಲಿ ಅರಣ್ಯ ಇಲಾಖೆಯ ಅನುಮತಿ ಬೇಕಿದೆ. ಕಾಮಗಾರಿ ಮುಗಿಯಲು ನಿಗದಿತ ಕಾಲ ಮಿತಿಗಿಂತಲೂ ಹೆಚ್ಚಿನ ಸಮಯ ಬೇಕಾಗುತ್ತದೆ’ ಎಂದರು.

‘ಭದ್ರಾಪುರದಲ್ಲಿ ನಿತ್ಯವೂ ದೂಳು’

ಭದ್ರಾಪುರ ಗ್ರಾಮದಿಂದ ಬೊಮನಹಳ್ಳಿ ಕ್ರಾಸ್ ಸಮೀಪದವರೆಗಿನ ರಸ್ತೆಯನ್ನು ನಿಧಾನಗತಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಅಕ್ಕ–ಪಕ್ಕದ ಮನೆಗಳಿಗೂ ಇತ್ಯವೂ ದೂಳು ಬರುತ್ತಿದೆ.

‘ರಸ್ತೆ ಅಗೆದು ಹಲವು ವರ್ಷವಾಗಿದೆ. ಆರಂಭದಲ್ಲಿ ಅಕ್ಕ–ಪಕ್ಕದ ಮನೆಗೆಲ್ಲ ಮಣ್ಣಿನ ದೂಳು ಬರುತ್ತಿತ್ತು. ನಂತರ, ಕಡಿ ಹಾಕಿದ್ದಾರೆ. ಇಂಥ ಸಂದರ್ಭದಲ್ಲಿಯೂ ಬಿಳಿ ದೂಳು ಮನೆಗಳಿಗೆ ನುಗ್ಗುತ್ತಿದೆ. ವಾಹನಗಳ ಸಂಚಾರದ ಸಮಯದಲ್ಲಿ ಎಲ್ಲ ದೂಳು ಮನೆಯೊಳಗೆ ಆವರಿಸುತ್ತಿದ್ದು, ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಲ್ಭಣಿಸುತ್ತಿವೆ’ ಎಂದು ಭದ್ರಾಪುರ ನಿವಾಸಿ ಲಕ್ಷ್ಮಮ್ಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.