ಹಾವೇರಿ: ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ನಿಂಗಪ್ಪ ಚನ್ನಬಸಪ್ಪ ಕರಿಗಾರ (39) ಎಂಬುವವರನ್ನು ಸೋಮವಾರ ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪಿ ಶಿವಪ್ಪ ನಿಂಗಪ್ಪ ಪಟ್ಟೇದವರ (36) ಎಂಬುವವರನ್ನು ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮೃತ ನಿಂಗಪ್ಪ ಹಾಗೂ ಆರೋಪಿ ಶಿವಪ್ಪ, ಅಕ್ಕ–ಪಕ್ಕದ ಮನೆಯವರು. ಆಸ್ಪತ್ರೆ ಖರ್ಚಿನ ₹2,000 ಹಣದ ವಿಚಾರಕ್ಕಾಗಿ ಗಲಾಟೆ ನಡೆದು, ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೊಲೆ ಸಂಬಂಧ ನಿಂಗಪ್ಪ ಅವರ ಪತ್ನಿ ದೂರು ನೀಡಿದ್ದಾರೆ. ಕೃತ್ಯದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದರು.

ತಗಡು ವಿಚಾರಕ್ಕೆ ವೈಷಮ್ಯ: ‘ಆರೋಪಿ ಶಿವಪ್ಪ, ತನ್ನ ಮನೆಯ ಮೇಲೆ ತಗಡು ಹಾಕಿಸಿದ್ದ. ಅದೇ ತಗಡುಗಳು, ಮೃತ ನಿಂಗಪ್ಪ ಅವರ ಮನೆಯ ಮೇಲೆ ಬಂದಿದ್ದವು. ಮಳೆಯಾದ ಸಂದರ್ಭದಲ್ಲಿ ನಿಂಗಪ್ಪರ ಮನೆಯ ಗೋಡೆಯ ಮೇಲೆ ನೀರು ಬೀಳುತ್ತಿತ್ತು. ಅದರಿಂದ ಗೋಡೆ ಶಿಥಿಲಗೊಂಡಿತ್ತು. ತಗಡು ತೆಗೆಯುವಂತೆ ನಿಂಗಪ್ಪ ಕೋರಿದ್ದ. ಆದರೆ, ಆರೋಪಿ ಮಾತು ಕೇಳಿರಲಿಲ್ಲ. ಹಿರಿಯರಿಂದ ಹೇಳಿಸಿದರೂ ಬದಲಾಗಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ತಗಡು ವಿಚಾರವಾಗಿ ತಿಂಗಳ ಹಿಂದೆಯಷ್ಟೇ ನಿಂಗಪ್ಪ ಮೇಲೆ ಆರೋಪಿ ಶಿವಪ್ಪ ಹಲ್ಲೆ ಮಾಡಿದ್ದ. ಇದರಿಂದ ಗಾಯಗೊಂಡಿದ್ದ ನಿಂಗಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗ್ರಾಮದಲ್ಲಿಯೇ ಸಂಧಾನ ಮಾಡಿಸಿದ್ದ ಹಿರಿಯರು, ಗಾಯಾಳು ನಿಂಗಪ್ಪರಿಗೆ ಆಸ್ಪತ್ರೆ ಖರ್ಚಿಗಾಗಿ ₹ 2,000 ನೀಡುವಂತೆ ಆರೋಪಿಗೆ ತಾಕೀತು ಮಾಡಿದ್ದರು. ಅಷ್ಟಾದರೂ ಆರೋಪಿ ಹಣ ಕೊಟ್ಟಿರಲಿಲ್ಲ. ಅದಕ್ಕಾಗಿ ಪೀಡಿಸಲಾರಂಭಿಸಿದ್ದ’ ಎಂದು ತಿಳಿಸಿದರು.

‘ಸೋಮವಾರ ಬೆಳಿಗ್ಗೆ ಗ್ರಾಮದ ಬಸವೇಶ್ವರ ದೇವಸ್ಥಾನದ ಎದುರಿಗಿರುವ ಸಂಕೀರ್ಣದ ಬಳಿ ಆರೋಪಿ ನಿಂತಿದ್ದ. ಆತನನ್ನು ಮಾತನಾಡಿಸಿದ್ದ ನಿಂಗಪ್ಪ, ‘ಆಸ್ಪತ್ರೆ ಖರ್ಚಿನ ₹ 2,000 ಹಣವನ್ನು ಯಾವಾಗ ಕೊಡುತ್ತೀಯಾ’ ಎಂದು ಪ್ರಶ್ನಿಸಿದ್ದ. ಅಷ್ಟಕ್ಕೆ ಸಿಟ್ಟಾಗಿ ಜಗಳ ತೆಗೆದಿದ್ದ ಆರೋಪಿ, ಹಲ್ಲೆ ಮಾಡಿದ್ದ. ನಿಂಗಪ್ಪ ಅವರ ತಲೆಗೆ ಕಲ್ಲಿನಿಂದ ಹೊಡೆದು ಕೊಂದಿದ್ದ. ನಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು. ಕೃತ್ಯದ ಬಳಿಕ ಆರೋಪಿ ಸ್ಥಳದಲ್ಲೇ ನಿಂತುಕೊಂಡಿದ್ದ. ಆತನ ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.