ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾರ ಮಹಾದೇವರ ಜನ್ಮ ದಿನಾಚರಣೆ

Last Updated 8 ಜೂನ್ 2020, 14:58 IST
ಅಕ್ಷರ ಗಾತ್ರ

ಹಾವೇರಿ: ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಡಿಯಲ್ಲಿ ಮೈಲಾರ ಮಹಾದೇವರ 109ನೇ ಜನ್ಮ ದಿನಾಚರಣೆಯನ್ನು ಸೋಮವಾರ ಸರಳವಾಗಿ ಆಚರಿಸಲಾಯಿತು.

ಮೈಲಾರ ಮಹಾದೇವ ವೃತ್ತದಲ್ಲಿರುವ ಮಹಾದೇವಪ್ಪನವರ ಮೂರ್ತಿಗೆ ಹಾರ ಹಾಕುವ ಮೂಲಕ ಟ್ರಸ್ಟಿನ ಸದಸ್ಯ ಕಾರ್ವದರ್ಶಿ ಶಶಿಕಲಾ ವಿ. ಹುಡೇದ ಹುತಾತ್ಮರಿಗೆ ಗೌರವ ಸಲ್ಲಿಸಿದರು.

ಟ್ರ್ರಸ್ಟಿನ ಹಿರಿಯ ಸದಸ್ಯರಾದ ನಾಗೇಂದ್ರ ಕಟಕೋಳ ಚುಟುಕಾಗಿ ಮಾತನಾಡಿ, ‘ನಮಗೆ ಈ ಹಿಂದೆ ಸಿಕ್ಕಿರುವ ಸ್ವಾತಂತ್ರ್ಯವನ್ನು, ಸಮಾಜದ ಹಿತಕ್ಕಾಗಿ ಮಿತವಾಗಿ ಬಳಸಿಕೊಳ್ಳುವ ಪಾಠ ಕಲಿಸುವ ಕೊರೊನಾ ದಿನಗಳಿವು ಎಂದು ಹೇಳಿ, ಸ್ವಾತಂತ್ರ್ಯ ಹೋರಾಟಗಾರರ ಸರಳ ಮತ್ತು ಸ್ವಚ್ಛ ಬದುಕು ನಮ್ಮದಾಗಲಿ ಎಂದರು.

ಟ್ರಸ್ಟಿನ ಹಿರಿಯ ಸದಸ್ಯರಾದ ಸತೀಶ ಕುಲಕರ್ಣಿ, ಪರಮೇಶ್ವರಪ್ಪ ಮೈಲಾರ, ಮಾಜಿ ನಗರಸಭಾ ಸದಸ್ಯ ಬಸಪ್ಪ ಸವಣೂರು, ರಾಜು ಡೊಳ್ಳಿನ, ಪ್ರಕಾಶ ಮೋಟೇಬೆನ್ನೂರ, ಗುಡ್ಡಪ್ಪ ಕೊಪ್ಪದ, ಚಂದ್ರಕಾಂತ ಆಚಾರ್ಯ, ಪ್ರಕಾಶ ಬೆಣ್ಣಿ, ಮಲ್ಲಿಕಾರ್ಜುನ ನಾಗಮ್ಮನವರ, ಚನ್ನಪ್ಪಗೌಡ ಇದ್ದರು.

ಬೆಳಿಗ್ಗೆ ವೀರಸೌಧದಲ್ಲಿರುವ ಮೈಲಾರ ಮಹಾದೇವ, ತಿರಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಎರಡು ಸಮಾಧಿಗಳಿಗೆ ಪುಷ್ಪ ಸಮರ್ಪಿಸಿ ಗೌರವ ಕೂಡ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT