ಹಾವೇರಿ: ನಗರದ ಹಲವು ಖಾಲಿ ನಿವೇಶನಗಳು, ತ್ಯಾಜ್ಯ ಬಿಸಾಕುವ ತಾಣಗಳಾಗಿವೆ. ವಿಪರೀತ ಕಸ ಬೆಳೆದು, ವಿಷಜಂತುಗಳು ವಾಸಿಸುವ ಸ್ಥಳಗಳಾಗಿವೆ. ಮಾಲೀಕರ ನಿರ್ಲಕ್ಷ್ಯದಿಂದ ಖಾಲಿ ನಿವೇಶನಗಳಲ್ಲಿ ಅಶುಚಿತ್ವ ಎದ್ದು ಕಾಣುತ್ತಿದ್ದು, ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನಗರಸಭೆ, ‘ಭೋಜಾ’ ಪ್ರಯೋಗಿಸಲು ಸಿದ್ಧತೆ ನಡೆಸಿದೆ.

ನಿರ್ವಹಣೆ ಇಲ್ಲದೇ ಕಸ ಬೆಳೆದಿರುವ ಖಾಲಿ ನಿವೇಶನಗಳನ್ನು ಗುರುತಿಸಿರುವ ನಗರಸಭೆಯು, ಅಂಥ ನಿವೇಶನಗಳನ್ನು ಸ್ವಚ್ಛಗೊಳಿಸಿ ಅದಕ್ಕೆ ತಗುಲಿರುವ ಹಣವನ್ನು ಮಾಲೀಕರಿಂದ ವಸೂಲಿ ಮಾಡಲು ಮುಂದಾಗಿದೆ. ಸ್ವಚ್ಛತಾ ಶುಲ್ಕ ನೀಡದಿದ್ದರೆ, ಅಂಥ ಆಸ್ತಿಯ ಉತಾರದಲ್ಲಿ ಭೋಜಾ ಸೇರಿಸಲು ಸಜ್ಜಾಗಿದೆ.

ಜಿಲ್ಲಾ ಕೇಂದ್ರವಾಗಿರುವ ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ನಿವೇಶನ ಅಭಿವೃದ್ಧಿಪಡಿಸಲಾಗಿದೆ. ಹಳೇ ಹಾವೇರಿ ಭಾಗದಲ್ಲಿ ಮನೆಗಳಿದ್ದು, ಅಲ್ಲಿ ಖಾಲಿ ನಿವೇಶನಗಳ ಸಂಖ್ಯೆ ಸ್ವಲ್ಪ ಕಡಿಮೆಯಿದೆ. ಆದರೆ, ಹಾವೇರಿಯ ಹೊರವಲಯದಲ್ಲಿ ಸಾಕಷ್ಟು ನಿವೇಶನಗಳು ಅಭಿವೃದ್ಧಿಯಾಗಿವೆ. ಅಂಥ ಸ್ಥಳಗಳಲ್ಲಿ ಖಾಲಿ ನಿವೇಶನಗಳ ಸಂಖ್ಯೆ ಹೆಚ್ಚಿದ್ದು, ಈಗ ಅದೇ ಮಾಲೀಕರಿಗೆ ದಂಡ ಹಾಕಲು ನಗರಸಭೆ ಮುಂದಾಗಿದೆ.

ಹುಬ್ಬಳ್ಳಿ ರಸ್ತೆ, ಹಾನಗಲ್ ರಸ್ತೆ, ಗುತ್ತಲ ರಸ್ತೆ, ರಾಣೆಬೆನ್ನೂರು ರಸ್ತೆ, ಕಾಗಿನೆಲೆ ರಸ್ತೆ, ದೇವಿಹೊಸೂರು ರಸ್ತೆ, ದೇವಗಿರಿ ರಸ್ತೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದೇ ನಿವೇಶನಗಳಲ್ಲಿರುವ ತಮ್ಮ ಜಾಗದಲ್ಲಿ ಕೆಲವರು, ಮನೆ ಕಟ್ಟಿಕೊಂಡು ವಾಸವಿದ್ದಾರೆ. ಆದರೆ, ಬಹುತೇಕರು ಮನೆ ನಿರ್ಮಾಣ ಮಾಡದೇ ನಿವೇಶನವನ್ನು ಖಾಲಿ ಬಿಟ್ಟಿದ್ದಾರೆ. ಇದೇ ನಿವೇಶನಗಳಲ್ಲಿ ಕಸ ಬೆಳೆದು, ಕಾಡಿನಂತೆ ಭಾಸವಾಗುತ್ತಿದೆ.

ನಗರದ ಹಲವು ಕಡೆಗಳಲ್ಲಿರುವ ಕೆಲ ನಿವಾಸಿಗಳು, ಖಾಲಿ ನಿವೇಶನಗಳಲ್ಲಿಯೇ ಕಸ ಎಸೆಯುತ್ತಿದ್ದಾರೆ. ಹಸಿ ಹಾಗೂ ಒಣ ತ್ಯಾಜ್ಯ ಚೆಲ್ಲುತ್ತಿದ್ದಾರೆ. ಇದರಿಂದಾಗಿ, ಖಾಲಿ ನಿವೇಶನಗಳಲ್ಲಿ ದುರ್ವಾಸನೆ ಬರುತ್ತಿದೆ. ಅಕ್ಕ–ಪಕ್ಕದ ನಿವಾಸಿಗಳು, ದುರ್ವಾಸನೆಯಿಂದ ಬೇಸತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಮನಗಂಡಿರುವ ನಗರಸಭೆ, ಈಗ ಖಾಲಿ ನಿವೇಶನ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದೆ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ: ಜಿಲ್ಲಾ ಕೇಂದ್ರದಲ್ಲಿರುವ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ ನಗರದ ಸೌಂದರ್ಯವನ್ನು ಹೆಚ್ಚಿಸುವ ಬಗ್ಗೆ ನಗರಸಭೆಯು ಹಲವು ಕ್ರಮಗಳನ್ನು ಕೈಗೊಂಡಿದೆ. ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ಜರುಗಿತು. ಈ ಸಭೆ ಮೂಲಕ, ಖಾಲಿ ನಿವೇಶನಗಳ ಸ್ವಚ್ಛತಾ ಶುಲ್ಕಗಳನ್ನು ನಿಗದಿಪಡಿಸಲಾಗಿದೆ.

‘ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿರುವ ನಿವೇಶನ ಹಾಗೂ ಜಾಗಗಳನ್ನು ಮಾಲೀಕರು ಸ್ವಚ್ಛವಾಗಿಟ್ಟುಕೊಳ್ಳಬೇಕು. ಗಲೀಜಾಗಿದ್ದರೆ, ನಗರಸಭೆಯಿಂದಲೇ ಸ್ವಚ್ಛಗೊಳಿಸಿ, ಸ್ವಚ್ಛತಾ ಶುಲ್ಕವನ್ನು ಆಸ್ತಿ ಮಾಲೀಕರಿಂದ ಸಂಗ್ರಹಿಸಲಾಗುವುದು. ಅದನ್ನು ಕೊಡದಿದ್ದರೆ, ಆಸ್ತಿ ಮೇಲೆ ಭೋಜಾ ಕೂರಿಸಲಾಗುವುದು. ಇ–ಸ್ವತ್ತು ಹಾಗೂ ಇತರೆ ದಾಖಲೆ ಪಡೆಯಬೇಕಾದರೆ, ಹಣ ಪಾವತಿಸಿ ಭೋಜಾ ತೆಗೆಸಬೇಕಾಗುತ್ತದೆ’ ಎಂದು ನಗರಸಭೆಯ ಪೌರಾಯುಕ್ತ ಕಾಂತರಾಜು ತಿಳಿಸಿದರು.

‘ಜಾಗದ ಅಳತೆಗೆ ತಕ್ಕಂತೆ, ಸ್ವಚ್ಛತಾ ಶುಲ್ಕವನ್ನು ನಿಗದಿಪಡಿಸಲಾಗಿದೆ. ನವೀಕರಿಸಿದ ಶುಲ್ಕಗಳು ಹಾಗೂ ದಂಡಗಳು, 2026ರ ಏಪ್ರಿಲ್ನಿಂದಲೇ ಜಾರಿಗೊಳಿಸಲಾಗಿದೆ. ಈ ವಿಷಯವನ್ನು ಏನಾದರೂ ಗೊಂದಲಗಳಿದ್ದರೆ, ಸಾರ್ವಜನಿಕರು ನಗರಸಭೆಯ ಆರೋಗ್ಯ ಶಾಖೆಯನ್ನು ಸಂಪರ್ಕಿಸಬಹುದು’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-22-2013972518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.