ಶಿಗ್ಗಾವಿ: ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಬುಧವಾರ ದುಂಡಿಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ದೇವರುಗಳ ಪಲ್ಲಕ್ಕಿ ಮಹೋತ್ಸವ ಭಕ್ತ ಸಮೂಹದ ನಡುವೆ ಸಡಗರ, ಸಂಬ್ರಮದಿಂದ ಜರುಗಿದವು.

ದುಂಡಿಬಸವೇಶ್ವರ ದೇವಸ್ಥಾನ ದಿಂದ ಆರಂಭವಾದ ಪಲ್ಲಕ್ಕಿ ಮಹೋ ತ್ಸವ ಇಬ್ರಾಹಿಂಪು, ನಾರಾಯಣಪುರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ದುಂಡಿಬಸವೇಶ್ವರ. ಗುಲಗಂಜಿಕೊಪ್ಪದ ದುಂಡಿಬಸವೇಶ್ವರ, ಈಶ್ವರ ದೇವರ ಮತ್ತು ದ್ಯಾಮವ್ವದೇವಿ ಪಲ್ಲಕ್ಕಿ ಮಹೋತ್ಸವದ ಸ್ವಾಗತಕ್ಕಾಗಿ ಪ್ರತಿ ಬೀದಿಗಳನ್ನು ಮಾವು,ತೆಂಗು, ಬಾಳೆ ಗಿಡಗಳಿಂದ ಅಲಂಕರಿಸಲಾಗಿತು. ಬಣ್ಣದ ರಂಗೋಲಿಗಳನ್ನು ಹಾಕಿ ಶೃಂಗರಿ ಸಲಾಗಿತು. ಮಹಿಳೆಯರು, ಮಕ್ಕಳು ಆರತಿ ಮಾಡುವ ಮೂಲಕ ಹಣ್ಣು,ಕಾಯಿ,ಹೂಗಳಿಂದ ವಿಶೇಷ ಪೂಜೆ ಸಲ್ಲಿಸಿದರು. ದಿಡ ನಮಸ್ಕಾರಗಳನ್ನು ಹಾಕಿ ಹರಕೆ ತೀರಿಸಿದರು.

ದೇವಸ್ಥಾನದಲ್ಲಿ ರುದ್ರಾಭಿಷೇಕ, ತೊಟ್ಟಿಲ ಉತ್ಸವ ರೇಣುಕಾ ಯಲ್ಲಮ್ಮದೇವಿ ವಿವಾಹ ಕಾರ್ಯಕ್ರಮ, ದೀಪೋತ್ಸವ ಕಾರ್ಯಕ್ರಮ, ಮಹಾಲಕ್ಷ್ಮಿ ಪೂಜೆ ಮತ್ತು 101 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪೂರ್ಣ ಕುಂಭಮೇಳ, ಅಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದದವು.

ಮಾರನಬೀಡದ ಪುಟ್ಟರಾಜ ಗವಾಯಿಗಳ ಶಿಷ್ಯ ದಿಂಗಾಲ ಶಾಸ್ತ್ರಿ ಹಿರೇಮಠ, ಶಿವಯ್ಯ ಹಿರೇಮಠ, ರಾಮು ಚಜ್ಜಲ ಅವರಿಂದ ರೇಣುಕಾ ಯಲ್ಲಮ್ಮದೇವಿ ಮಹಾತ್ಮೆ ಕುರಿತು ಪ್ರವಚನ ನಡೆಯಿತು. ಜಾನಪದ ಕಲಾ ವಿದ ಚನ್ನಬಸಪ್ಪ ಬೈಲವಾಳ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಶಿರಹಟ್ಟಿ ಸಂಸ್ಥಾನಮಠದ ಫಕ್ಕಿರ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಂಕಾಪುರ ಅರಳೆಲೆ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಸದಾಶಿವಪೇಟೆ ಶರಣ ಬಸವೇಶ್ವರ ದಾಸೋಹಮಠದ ಶಿವದೇವ ಶರಣ ಸ್ವಾಮೀಜಿ, ಮಹಾಂತದೇಶಿಕೇಂದ್ರ ಸ್ವಾಮೀಜಿ, ಗಂಜೀಗಟ್ಟಿ ಶಿವಲಿಂಗೇಶ್ವರ ಸ್ವಾಮೀಜಿ, ಸಂಗನಬಸವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ ಅವರು ಸಮ್ಮುಖ ವಹಿಸಿದ್ದರು.

ದುಂಡಿಬಸವೇಶ್ವರ ದೇವಸ್ಥಾನದ ಸೇವಾ ಸಮಿತಿ ಎಲ್ಲ ಸದಸ್ಯರು, ಇಬ್ರಾಹಿಂಪುರ, ನಾರಾಯಣಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-22-1978223037

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.