ಹುಬ್ಬಳ್ಳಿ: ‘ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿನ ರಾಷ್ಟ್ರೀಯ ಶಿಕ್ಷಣ ಸಮಿತಿಯ ಜಾಗವನ್ನು ನಿಯಮಾವಳಿ ಪ್ರಕಾರ ಮತ್ತೊಮ್ಮೆ ಹರಾಜು ಹಾಕಲಾಗುವುದು’ ಎಂದು ಸಮಿತಿಯ ಕಾರ್ಯದರ್ಶಿ ವೀರಣ್ಣ ಚಕ್ಕಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸರಿತ್ತಿಯಲ್ಲಿನ ಸಮಿತಿಯ ಒಟ್ಟು 12 ನಿವೇಶನಗಳನ್ನು ಸಮಿತಿಯ ಏಳು ಜನ ಮತ್ತು ಇತರ ಇಬ್ಬರು ಖರೀದಿಸಿದ್ದರು. ಅವರು ಸಹ ಹರಾಜು ಮಾಡಲು ಒಪ್ಪಿದ್ದಾರೆ’ ಎಂದರು.

‘ಸಮಿತಿಯಿಂದ ಪದವಿ ಕಾಲೇಜು ಕಟ್ಟಡ ನಿರ್ಮಿಸಲು ಹುಬ್ಬಳ್ಳಿಯಲ್ಲಿನ ಸಮಿತಿಯ ಜಾಗವವನ್ನು ಮಾರಾಟ ಮಾಡಲು ಉದ್ದೇಶಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ಹೊಸರಿತ್ತಿಯ ಜಾಗ ಮಾರಾಟ ಮಾಡಿ, ಆ ಹಣದಲ್ಲಿ ಕಟ್ಟಡ ನಿರ್ಮಿಸಲಾಗಿದೆ’ ಎಂದು ಹೇಳಿದರು.

‘ಸಂಸ್ಥೆಯ ಆಸ್ತಿ ಮಾರಾಟ ಸಂಬಂಧ ದರ ನಿಗದಿ ಸಮಿತಿ ರಚಿಸಲಾಗಿತ್ತು. ಸಮಿತಿಯವರು ಚದರ ಅಡಿಗೆ ₹3 ಸಾವಿರ ದರ ನಿಗದಿಪಡಿಸಿದ್ದರು. ಆದರೆ ಜಾಗದ ದರ ಹೆಚ್ಚು ಇದ್ದು, ಸಂಸ್ಥೆಯ ಸದಸ್ಯರೇ ಕಡಿಮೆ ದರಕ್ಕೆ ಖರೀದಿಸಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಜಾಗದ ಮಾರಾಟ ವಿಷಯದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಮಿತಿ ಅಧ್ಯಕ್ಷ ರಾಜೇಂದ್ರಪ್ರಸಾದ ಹಳ್ಳಿಕೇರಿ, ಉಪ ಕಾರ್ಯದರ್ಶಿ ಗಿರೀಶ ಅಂಕಲಕೋಟಿ, ಪ್ರಭಣ್ಣ ಗೌರಿಮನಿ, ಸೋಮನಾಥ ಮಹಾಜನಶೆಟ್ರು, ರಮೇಶ ಏಕಬೋಟೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-24-947795702

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.