ರಟ್ಟೀಹಳ್ಳಿ: ‘ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುವ ಪ್ರತಿ ಕಾರ್ಮಿಕರು ಪಿ.ಎಂ.ಜೆ.ಜೆ.ಬಿ.ವೈ. ಪಿ.ಎಂ.ಎಸ್. ಬಿ.ವೈ. ಭಾರತ ಸರ್ಕಾರದ ಒಂದು ವರ್ಷದ ಅವಧಿಯ ಜೀವ ವಿಮಾ ಯೋಜನೆಯಡಿ ನೊಂದಾಯಿಸಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಪ್ರದೀಪ ಗಣೇಶ್ಕರ್ ಹೇಳಿದರು.

ಅವರು ತಾಲ್ಲೂಕಿನ ಕುಂಚೂರು ಗ್ರಾಮದಲ್ಲಿ ಗುರುವಾರ ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಜೀವವಿಮಾ ಪಾಲಸಿಗಳು ಯಾವುದೇ ಕಾರಣದಿಂದಾಗಿ ಸಂಭವಿಸುವ ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುತ್ತದೆ ಎಂದರು.

ನರೇಗಾ ಯೋಜನೆಯಡಿ ತಾಲ್ಲೂಕಿನ ಕುಂಚೂರು, ಮಕರಿ, ನೇಶ್ವಿ, ಶಿರಗಂಬಿ, ಹಿರೇಮೊರಬ, ಹಿರೇಕಬ್ಬಾರ, ಕಡೂರು, ಸೇರಿದಂತೆ ಹಲವು ಗ್ರಾಮದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ನರೇಗಾ ಸಿಬ್ಬಂದಿಗೆ ಮತ್ತು ಕಾಯಕಬಂಧುಗಳಿಗೆ ಎನ್.ಎಂ.ಎಂ.ಎಸ್. ಹಾಜರಾತಿ ಕುರಿತು ತರಬೇತಿ ನೀಡಲಾಗಿದ್ದು, ಸದ್ಯ ಮುಖದ ಗುರುತಿನ ಮೇಲೆ ಹಾಜರಾತಿ ಹಾಕಲಾಗುತ್ತಿದೆ ಎಂದರು.

ನರೇಗಾ ಯೋಜನೆಯಡಿ ಅಂಗವಿಕಲರಿಗೆ ಮತ್ತು ವೃದ್ದರಿಗೆ ಕೆಲಸದ ಪ್ರಮಾಣದಲ್ಲಿ ಶೇ 50 ರಿಯಾಯತಿ ನೀಡಲಾಗುತ್ತಿದೆ. ಕೆಲಸದ ಸ್ಥಳದಲ್ಲೂ ಮೂಲ ಸೌಕರ್ಯ ಕಲ್ಪಿಸಲು ಕ್ರಮವಹಿಸಲಾಗುತ್ತಿದೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ನಿಗದಿತ ಕೆಲಸವನ್ನು ಮುಂಜಾನೆಯೇ ಮುಗಿಸುವ ಪ್ರಯತ್ನ ಮಾಡಬೇಕು. ಮತ್ತು ಪತಿಯೊಬ್ಬರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು.

ಕಾಮಗಾರಿ ಸ್ಥಳದಲ್ಲಿ ಸಾವು, ನೋವು ಸಂಭವಿಸಿದ ಸಂದರ್ಭದಲ್ಲಿ ತಕ್ಷಣಕ್ಕೆ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಗಮನಕ್ಕೆ ತರಬೇಕು ಅಂದಾಗ ಸೂಕ್ತ ಪರಿಹಾರ ಕಾರ್ಮಿಕರ ಕುಟುಂಬಕ್ಕೆ ನೀಡಲು ಸಾಧ್ಯ ಎಂದರು.

ಈ ವೇಳೆ ಗ್ರಾಮ ಪಂಚಾಯ್ತಿ ಪಿಡಿಓ ನೀಲಕಂಠಪ್ಪ. ಜಿ. ತಾಲ್ಲುಕು ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ ದಯಾನಂದ, ಮಹೇಶ, ಮೇಘರಾಜ್, ರೇಖಾ ಮತ್ತು ವನಸಿರಿ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-22-347805205

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.