ಹಾವೇರಿ: ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಜೆಮುಲು ರೇವು ಚವ್ಹಾಣ ಅವರಿಗೆ ಹಣಕ್ಕಾಗಿ ಪೀಡಿಸಿ ಬೆದರಿಕೆಯೊಡ್ಡಿದ್ದ ಆರೋಪದಡಿ ಬಸವರಾಜ ಎ.ಕೆ. ಎಂಬುವವರ ವಿರುದ್ಧ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಪಿಡಿಒ ಜೆಮುಲು ಅವರು ದೂರು ನೀಡಿದ್ದಾರೆ. ರಾಣೆಬೆನ್ನೂರಿನ ನಿವಾಸಿ ಎನ್ನಲಾದ ಬಸವರಾಜ ಎ.ಕೆ. ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತಾನೊಬ್ಬ ಪತ್ರಕರ್ತನೆಂದು ಹೇಳಿ ಹಾವೇರಿಯ ಜೆ.ಪಿ. ರಸ್ತೆಯಲ್ಲಿರುವ ಶಿವಬಸವ ಫೋಟೊ ಸ್ಟುಡಿಯೊ ಮಾಲೀಕರನ್ನು ಪರಿಚಯಿಸಿಕೊಂಡಿದ್ದ ಆರೋಪಿ ಬಸವರಾಜ, ಸ್ಟುಡಿಯೊ ವಿಳಾಸ ಬಳಸಿಕೊಂಡು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸುತ್ತಿದ್ದ. ಕೋಳೂರು ಗ್ರಾ.ಪಂ.ಗೂ ಅರ್ಜಿ ಸಲ್ಲಿಸಿದ್ದ. ಮಾಹಿತಿ ನೀಡಿದ್ದರೂ ಪಿಡಿಒ ಅವರನ್ನು ಹಣಕ್ಕಾಗಿ ಪೀಡಿಸುತ್ತಿದ್ದನೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ದೂರಿನ ವಿವರ: ‘ಆರೋಪಿ ಬಸವರಾಜ, ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ. ಮಾಹಿತಿ ನೀಡಿದರೂ ಮೇಲ್ಮನವಿ ಸಲ್ಲಿಸಿದ್ದ. 2025ರ ನವೆಂಬರ್ 11ರಂದು ನಡೆದಿದ್ದ ಮೇಲ್ಮನವಿ ಅರ್ಜಿ ವಿಚಾರಣೆಗೆ ಆತ ಹಾಜರಾಗಿದ್ದ. ಅಂದು ವಿಚಾರಣೆ ಮುಗಿದ ನಂತರ, ಕರ್ಜಗಿ ರೈಲ್ವೆ ನಿಲ್ದಾಣ ಬಳಿ ನನ್ನನ್ನು ಅಡ್ಡಗಟ್ಟಿದ್ದ. ₹ 30 ಸಾವಿರ ನೀಡುವಂತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ, ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿ ಮಾನಹಾನಿ ಮಾಡುವುದಾಗಿ ಬೆದರಿಕೆಯೊಡ್ಡಿದ್ದ’ ಎಂದು ಪಿಡಿಒ ಜೆಮುಲು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಹಣ ನೀಡಲು ಆಗುವುದಿಲ್ಲವೆಂದು ಹೇಳಿದ್ದಕ್ಕೆ, ಇಲ್ಲಸಲ್ಲದ ಆರೋಪ ಮಾಡಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟಿಸುವಂತೆ ಮಾಡಿ ಮಾನಹಾನಿ ಮಾಡಿದ್ದ. ಮೇ 21ರಂದು ನಾನು ಕೆಲಸ ನಿಮಿತ್ತ ಹಾವೇರಿ ತಾಲ್ಲೂಕು ಪಂಚಾಯಿತಿಗೆ ಹೊರಟಿದ್ದೆ. ಎಂ.ಜಿ.ರಸ್ತೆಯ ವೀರಭದ್ರ ದೇವಸ್ಥಾನದ ಬಳಿ ನನ್ನನ್ನು ಅಡ್ಡಗಟ್ಟಿದ್ದ ಆರೋಪಿ, ₹ 30 ಸಾವಿರ ನೀಡುವಂತೆ ಪುನಃ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ, ಪ್ರಕರಣ ದಾಖಲಿಸಿ ಕಥೆ ಮುಗಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-22-190791126

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.