ಹಾವೇರಿ: ಕರ್ಕಶ ಶಬ್ದದ ಸೈಲೆನ್ಸರ್ ಪತ್ತೆಗಾಗಿ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, 40 ಸೈಲೆನ್ಸರ್ಗಳನ್ನು ಜಪ್ತಿ ಮಾಡಿದ್ದಾರೆ. ಈ ಸೈಲೆನ್ಸರ್ಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಬುಧವಾರ ನಾಶಪಡಿಸಿದರು.

ಜಿಲ್ಲಾ ಪೊಲೀಸ್ ಕಚೇರಿ ಎದುರು ರಸ್ತೆ ಮೇಲೆಯೇ ಸೈಲೆನ್ಸರ್ಗಳನ್ನು ಇರಿಸಲಾಗಿತ್ತು. ಜೆಸಿಬಿ ಯಂತ್ರವು ಒಂದೊಂದೇ ಸೈಲೆನ್ಸರ್ಗಳನ್ನು ಒಡೆದು ನಾಶಪಡಿಸಿತು.

ನಾಶಪಡಿಸುವ ಪ್ರಕ್ರಿಯೆ ವೇಳೆ ಸ್ಥಳದಲ್ಲಿದ್ದ ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ, ‘ಸಾರ್ವಜನಿಕರ ನೆಮ್ಮದಿ ಹಾಗೂ ಸುಗಮ ಸಂಚಾರ ಗಮನದಲ್ಲಿಟ್ಟುಕೊಂಡು, ಶಬ್ದ ಮಾಲಿನ್ಯ ಉಂಟು ಮಾಡುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅದು ಮುಂದುವರಿಯಲಿದೆ’ ಎಂದು ಹೇಳಿದರು.

‘ದ್ವಿಚಕ್ರ ವಾಹನಗಳಿಗೆ ಕೆಲವರು, ಕರ್ಕಶ ಶಬ್ದದ ಸೈಲೆನ್ಸರ್ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಶಾಲೆ–ಕಾಲೇಜು, ಆಸ್ಪತ್ರೆ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅತಿಯಾದ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದಾರೆ. ಇಂಥ ವಾಹನ ಸವಾರರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ’ ಎಂದರು.‘ವಾಹನ ಸವಾರರು, ಕಂಪನಿಯ ಸೈಲೆನ್ಸರ್ಗಳನ್ನು ಮುಂದುವರಿಸಬೇಕು. ಅಸಲಿ ಸೈಲೆನ್ಸರ್ ಬದಲು ಮಾಡಿ, ಬೇರೆ ಸೈಲೆನ್ಸರ್ ಅಳವಡಿಸಿದರೆ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

ಹೆಚ್ಚುವರಿ ಎಸ್.ಪಿ. ಲಕ್ಷ್ಮಣ ಶಿರಕೋಳ, ಡಿವೈಎಸ್ಪಿ ಗಿರಿಮಲ್ಲಪ್ಪ, ಸಂಚಾರ ಠಾಣೆ ಪಿಎಸ್ಐ ಶೈಲಶ್ರೀ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-22-2047203206

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.