ಹಾವೇರಿ: ಬೇಸಿಗೆ ಆರಂಭದ ದಿನದಿಂದಲೂ ಜಿಲ್ಲೆಯಾದ್ಯಂತ ಬಿಸಿಲು ಹೆಚ್ಚಾಗಿದ್ದು, ಸೆಕೆಯು ವಿಪರೀತವಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಸಿಲು ಇರುವುದರಿಂದ, ಮನೆಯಿಂದ ಹೊರಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಮನುಷ್ಯರ ರೀತಿಯಲ್ಲಿಯೇ ಪ್ರಾಣಿಗಳು ಸಹ ಬಿಸಿಲಿನ ಸೆಕೆಯಿಂದ ತತ್ತರಿಸಿ ಹೋಗಿವೆ. ಇದೇ ಕಾರಣಕ್ಕೆ ಪೊಲೀಸ್ ಇಲಾಖೆ, ತನ್ನ ಶ್ವಾನಗಳನ್ನು ತಂಪಾಗಿರಿಸಲು ಏರ್ ಕೂಲರ್ ವ್ಯವಸ್ಥೆ ಮಾಡಿದೆ.

ನಗರದ ಎಂ.ಜಿ. ರಸ್ತೆಗೆ ಹೊಂದಿಕೊಂಡಿರುವ ನಗರಸಭೆಯ ಕಟ್ಟಡದ ಎದುರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಟ್ಟಡವಿದೆ. ಇದೇ ಕಟ್ಟಡದ ಕೊಠಡಿಗಳಲ್ಲಿ ಶ್ವಾನಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಪ್ರತಿ ವರ್ಷವೂ ಬೇಸಿಗೆಯಲ್ಲಿ ಶ್ವಾನಗಳಿಗೆ ಫ್ಯಾನ್ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಇದನ್ನರಿದ ಪೊಲೀಸರು, ಏರ್ ಕೂಲರ್ ಅಳವಡಿಸಿದ್ದಾರೆ.

ಜಿಲ್ಲೆಯ ಶ್ವಾನ ದಳದಲ್ಲಿ ಸದ್ಯ ನಾಲ್ಕು ಶ್ವಾನಗಳಿವೆ. ಒಂದೊಂದು ಶ್ವಾನವನ್ನು ಒಂದೊಂದು ಕೊಠಡಿಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಈಗ ಪ್ರತಿಯೊಂದು ಕೊಠಡಿಯಲ್ಲಿಯೂ ಪ್ರತ್ಯೇಕವಾಗಿಯೇ ಏರ್ ಕೂಲರ್ಗಳನ್ನು ಇರಿಸಲಾಗಿದೆ.

ಶ್ವಾನಗಳ ಕೊಠಡಿಯಲ್ಲಿ ಅಳವಡಿಸಿರುವ ಏರ್ ಕೂಲರ್ಗಳನ್ನು ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಹಾಗೂ ಹೆಚ್ಚುವರಿ ಎಸ್.ಪಿ. ಎಲ್.ವೈ. ಶಿರಕೋಳ ಅವರು ಬುಧವಾರ ವೀಕ್ಷಿಸಿದರು. ಏರ್ ಕೂಲರ್ ಕೊಠಡಿಯಲ್ಲಿರುವ ಶ್ವಾನಗಳ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆದುಕೊಂಡರು.

ತರಬೇತಿ ಪಡೆದ ಶ್ವಾನಗಳನ್ನು, ಅಪರಾಧ ಕೃತ್ಯ ಹಾಗೂ ಸ್ಫೋಟಕಗಳ ಸುಳಿವು ಪತ್ತೆಗಾಗಿ ಬಳಸಲಾಗುತ್ತಿದೆ. ಪ್ರತಿ ಶ್ವಾನಕ್ಕೆ ಅದರದ್ದೇ ಆದ ಆಹಾರ ನೀಡಲಾಗುತ್ತಿದ್ದು, ಅದಕ್ಕಾಗಿ ದಿನಕ್ಕೆ ₹ 400 ಖರ್ಚು ಮಾಡಲಾಗುತ್ತಿದೆ. ಪ್ರತಿ ಶ್ವಾನದ ನಿರ್ವಹಣೆಗಾಗಿ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲಿಯಾದರೂ ಕೃತ್ಯ ನಡೆದರೆ, ಸಿಬ್ಬಂದಿಯೇ ಶ್ವಾನಗಳನ್ನು ಕೊಂಡೊಯ್ಯುತ್ತಿದ್ದಾರೆ.

ಶ್ವಾನಗಳ ಆರೋಗ್ಯ ಕಾಪಾಡಲು ಕ್ರಮ: ‘ಬೇಸಿಗೆ ಕಾಲದಲ್ಲಿ ವಿಪರೀತ ಸೆಕೆಯನ್ನು ಮನುಷ್ಯರೇ ತಡೆದುಕೊಳ್ಳುತ್ತಿಲ್ಲ. ಸೆಕೆ ಇದ್ದರೆ ಮನುಷ್ಯರಿಗೆ ಬೆವರು ಬರುತ್ತದೆ. ಆದರೆ, ಶ್ವಾನಗಳಿಗೆ ಬೆವರು ಬರುವುದಿಲ್ಲ. ಸೆಕೆ ಇದ್ದರೆ, ಅವುಗಳ ಆರೋಗ್ಯವೂ ಕ್ರಮೇಣ ಹಾಳಾಗುತ್ತದೆ. ಇದನ್ನು ಅರಿತು ಈಗ, ಶ್ವಾನಗಳಿಗೆ ಏರ್ ಕೂಲರ್ ಅಳವಡಿಸಲಾಗಿದೆ’ ಎಂದು ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಹೇಳಿದರು.

ಶ್ವಾನದಳಕ್ಕೆ ಬುಧವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಈ ಬಾರಿ ಸೆಕೆ ಹೆಚ್ಚಿದೆ. ಹೀಗಾಗಿ, ಇದೇ ಮೊದಲ ಬಾರಿಗೆ ಜಿಲ್ಲೆಯ ಶ್ವಾನಗಳಿಗೆ ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಏರ್ ಕೂಲರ್ ಅಳವಡಿಕೆಗೆ ಮುನ್ನ ಶ್ವಾನಗಳು, ಹೆಚ್ಚು ಕ್ರಿಯಾಶೀಲವಾಗಿರಲಿಲ್ಲ. ಕೂಲರ್ ಅಳವಡಿಕೆ ನಂತರ, ಶ್ವಾನಗಳು ಕ್ರಿಯಾಶೀಲದಿಂದ ಕೆಲಸ ಮಾಡುತ್ತಿವೆ. ಅವುಗಳ ಆರೋಗ್ಯವೂ ಸುಧಾರಿಸುತ್ತಿರುವುದು ಕಂಡುಬರುತ್ತಿದೆ’ ಎಂದು ತಿಳಿಸಿದರು.

‘ಪೊಲೀಸ್ ಇಲಾಖೆಯಿಂದಲೇ ನಾಲ್ಕು ಶ್ವಾನಗಳಿಗೆ, ನಾಲ್ಕು ಪ್ರತ್ಯೇಕ ಏರ್ ಕೂಲರ್ ಅಳವಡಿಸಲಾಗಿದೆ. ಸಿಬ್ಬಂದಿಯೇ ಅವುಗಳ ನಿರ್ವಹಣೆ ಮಾಡಲಿದ್ದಾರೆ’ ಎಂದರು.

ಹೆಚ್ಚುವರಿ ಎಸ್.ಪಿ. ಎಲ್.ವೈ. ಶಿರಕೋಳ, ‘ಪೊಲೀಸ್ ಕೆಲಸಕ್ಕೆ ಶ್ವಾನಗಳ ಕೊಡುಗೆ ಅಪಾರ. ಅಪರಾಧ ಪತ್ತೆ ಮಾಡುವಲ್ಲಿ ಶ್ವಾನಗಳು ಹೆಚ್ಚು ಸಹಕಾರಿಯಾಗುತ್ತವೆ. ಈಗ ಅವುಗಳ ಆರೋಗ್ಯ ಕಾಪಾಡಲು ಏರ್ ಕೂಲರ್ ಅಳವಡಿಸಲಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಈಗಾಗಲೇ ಶ್ವಾನಗಳಿಗೆ ಏರ್ ಕೂಲರ್ ವ್ಯವಸ್ಥೆ ಮಾಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಜಿಲ್ಲಾ ಪೊಲೀಸ್ ಇಲಾಖೆ: ಶ್ವಾನಗಳ ವಿವರ

ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಪಾರು (ಡಾಬರ್ಮೆನ್), ಆರ್ಯ (ಬೆಲ್ಜಿಯನ್ ಮಾಲಿನಾಯ್ಸ್), ಕೈರಾ (ಲ್ಯಾಬ್ರಡಾರ್ ರಿಟ್ರೈವರ್) ಹಾಗೂ ಸನ್ಸ್ (ಲ್ಯಾಬ್ರಡಾರ್ ರಿಟ್ರೈವರ್) ಹೆಸರಿನ ನಾಲ್ಕು ಹೆಣ್ಣು ಶ್ವಾನಗಳಿವೆ. ಎರಡು ಶ್ವಾನಗಳನ್ನು ಅಪರಾಧ ಕೃತ್ಯಗಳ ಸುಳಿವು ಪತ್ತೆಗೆ ಬಳಸಲಾಗುತ್ತಿದೆ. ಬಾಕಿ ಎರಡು ಶ್ವಾನಗಳನ್ನು, ಬಾಂಬ್ ಹಾಗೂ ಇತರೆ ಸ್ಫೋಟಕಗಳ ಸುಳಿವು ಪತ್ತೆಗಾಗಿ ಬಳಸಿಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.