ಶಿಗ್ಗಾವಿ: ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಪಾತ್ರ ಮುಖ್ಯವಾಗಿದೆ. ಅದ ಕ್ಕಾಗಿ ಸಾರ್ವಜನಿಕರ ಸೇವೆಗಾಗಿ ಪ್ರತಿ ಠಾಣೆಗೊಂದು ವಾಹನ ಅವಶ್ಯವಾಗಿದೆ ಎಂದು ಹಾವೇರಿ ಪೊಲೀಸ್ ವರಿಷ್ಠಾ ಧಿಕಾರಿ ಯಶೋಧಾ ವಂಟಗೋಡಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗುಜರಾತ ಅಂಬುಜಾ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಎರಡು ಸುಸಜ್ಜಿತ ಮಹಿಂದ್ರಾ ಬೊಲೆರೊ ವಾಹನಗಳನ್ನು ತಾಲ್ಲೂಕಿನ ತಡಸ ಮತ್ತು ಹುಲಗೂರ ಠಾಣೆಗಳಿಗೆ ಶನಿವಾರ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಪೊಲೀಸ್ ಇಲಾಖೆಗೆ ವಾಹನಗಳು ಅವಶ್ಯ, ಇದನ್ನರಿತು ಎರಡು ವಾಹನ ಗಳನ್ನು ಒದಗಿಸಿದ ಅಂಬುಜಾ ಕಂಪನಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಮತ್ತು ಈ ಹಿಂದೆ ಅವರು ಕಾಗದ ಮುಕ್ತ ಸೇವೆ ನೀಡಲು ಸಹಕರಿಸಿ ಹತ್ತು ಕಂಪ್ಯೂಟರ್ಗಳನ್ನು ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಶಿಗ್ಗಾವಿ ಠಾಣೆಗೂ ನೂತನ ವಾಹನ ನೀಡಲಾಗುವದು’ ಎಂದರು.

ಶಾಸಕ ಯಾಸೀರ ಅಹ್ಮದಖಾನ್ ಪಠಾಣ ನೂತನ ವಾಹನಗಳನ್ನು ಹಸ್ತಾಂತರಿಸಿ ಮಾತನಾಡಿ, ಪೊಲೀಸರಿಗೆ ನೈತಿಕ ಬೆಂಬಲ ನೀಡಬೇಕು, ನೆಮ್ಮದಿ ಯಿಂದ ನಾವು ನಿದ್ರಿಸಲು ಪೊಲೀಸರು ಕಾರಣ, ಅವರು ಪ್ರಾಮಾಣಿಕ ಸೇವೆ ನೀಡುತ್ತಿದ್ದಾರೆ, ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರಿಗೆ ಬೆಂಬಲ ನೀಡಬೇಕು ಎಂದರು.

ಅಂಬುಜಾ ಕಂಪನಿ ವ್ಯವಸ್ಥಾಪಕ ರಾಜೇಂದ್ರ ಹೊಸಮಠ ಮಾತನಾಡಿ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಪೊಲೀಸರು ಶ್ರೇಷ್ಠ್ರ, ಅಂಬುಜಾ ಕಂಪನಿಯಲ್ಲಿ ಸ್ಥಳಿಯರಿಗೆ ಆದ್ಯತೆ ನೀಡಿ ಉದ್ಯೋಗ ಒದಗಿಸುತ್ತೇವೆ ಎಂದರು.

ಡಿವೈಎಸ್ ಪಿ ಗುರುಶಾಂತಪ್ಪ ಕೆ ವಿ, ಪಿಎಸ್ಐ ವಿ ಎಸ್ ಹಿರೇಮಠ, ಪಿಎಸ್ಐ ಪಿ.ಎಫ್ ನಿರೊಳ್ಳಿ, ಎಂ.ಎಸ್ ದೊಡ್ಡಮನಿ ಸೇರಿದಂತೆ ಗ್ಯಾರಂಟಿ ತಾಲ್ಲೂಕು ಸಮಿತಿ ಅಧ್ಯಕ್ಷ ಎಸ್ ಎಫ್ ಮಣಕಟ್ಟಿ, ತಾಲ್ಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಮಹಿಳಾ ಅಧ್ಯಕ್ಷೆ ಮಲ್ಲಮ್ಮ ಸೋಮನಕಟ್ಟಿ, ಮುಖಂಡರಾದ ಗೌಸಖಾನ ಮುನಶಿ, ಮಾಲತೇಶ ಸಾಲಿ, ಅಣ್ಣಪ್ಪ ಲಮಾಣಿ, ಗುರುನಗೌಡ ಪಾಟೀಲ, ವಸಂತಾ ಬಾಗೂರ, ಚಂದ್ರು ಕೊಡ್ಲಿವಾಡ, ಫಯಾಜ್ ಸವಣೂರ, ಬಾಬರ ಬಾವೊಜಿ, ಶಂಭು ಆಜೂರ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-22-2049909872

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.