ರಟ್ಟೀಹಳ್ಳಿ: ರಾಜಕಾರಣದೊಂದಿಗೆ ಧರ್ಮಪಾಲನೆ ಯು.ಬಿ.ಬಣಕಾರ ಅವರ ಶ್ರೇಷ್ಠ ಗುಣ. ಯಾರು ಮೇಲು, ಕೀಳು, ಎಂಬ ಯಾವುದೇ ಜಾತಿಭೇದವಿಲ್ಲದ ಮೇರು ವ್ಯಕ್ತಿತ್ವದ ರಾಜಕಾರಣಿ ಎಂದು ಮರುಳಸಿದ್ದೇಶ್ವರ ಮಹಾಸಂಸ್ಥಾನ ಮಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಶಾಸಕ ಯು.ಬಿ.ಬಣಕಾರ ಅಭಿಮಾನಿ ಬಳಗದಿಂದ ಕಾರ್ಮಿಕ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಯು.ಬಿ. ಬಣಕಾರ ಅವರ 67ನೇ ಜನ್ಮದಿನದ ಅಂಗವಾಗಿ ಅಪೂರ್ವ ಸಾರ್ಥಕ ಸಂಭ್ರಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶಾಸಕ ಯು.ಬಿ.ಬಣಕಾರ ಮಾತನಾಡಿ, ತಾಲ್ಲೂಕಿನ ಜನರ ಪ್ರೀತಿ,ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುವೆ. ತಮ್ಮೆಲ್ಲರ ಪ್ರೀತಿಗೆ ಯಾವುದೇ ಧಕ್ಕೆ ಬರದಂತೆ ನಾನು ಸೇವೆಸಲ್ಲಿಸುತ್ತೇನೆ ಎಂದರು.

ಪಟ್ಟಣದ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ, ನಾಗವಂದ ಹೊರಗಿನಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಸಕರ ಜನ್ಮಮದಿನದ ಅಂಗವಾಗಿ ಪಟ್ಟಣದ ತುಂಬ ಅವರ ಬೃಹತ್ ಕಟೌಟ್ಗಳು, ಅವರು ಕೈಗೊಂಡ ಅಭಿವೃದ್ದಿ ಕಾರ್ಯಗಳ ಚಿತ್ರಣಗಳು ರಾರಾಜಿಸಿದವು. ಇದೇ ಸಂದರ್ಭದಲ್ಲಿ ಯು.ಬಿ.ಬಣಕಾರ ಅಭಿಮಾನಿ ಬಳದಿಂದ ಲಯನ್ಸ್ ಕ್ಲಬ್ ರಟ್ಟೀಹಳ್ಳಿ ಮತ್ತು ರಾಣೇಬೆನ್ನೂರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಯು.ಬಿ.ಬಣಕಾರ ಅಭಿಮಾನಿಗಳ ಬಳಗದ ಸದಸ್ಯರು 71 ಯುನಿಟ್ ನಷ್ಟು ರಕ್ತದಾನ ಮಾಡಿದರು. ಚಿತ್ರನಟಿ ಮಾಲಾಶ್ರೀ ಹಾಗೂ ಅರಾಧನಾ ಪಾಲ್ಗೊಂಡು ಶಾಸಕ ಯು.ಬಿ. ಬಣಕಾರ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.

ಅಭಿಮಾನಿಗಳು ಯು.ಬಿ. ಬಣಕಾರ ಹಾಗೂ ಅವರ ಧರ್ಮಪತ್ನಿ ಅನ್ನಪೂರ್ಣ ಬಣಕಾರ ಅವರಿಗೆ ಬೃಹತ್ ಸೇಬುಹಣ್ಣಿನ ಹಾರ ಹಾಕಿ ಸಂಭ್ರಮಿಸಿದರು. ಅಪೂರ್ವ ಸಾರ್ಥಕ ಸಂಭ್ರಮಕ್ಕೆ ಆಗಮಿಸಿದ ಜನಸ್ತೋಮಕ್ಕೆ ಅಭಿಮಾನಿ ಬಳಗದಿಂದ ಬೇಸಿಗೆ ಧಗೆ ತೀರಿಸಿಕೊಳ್ಳಲು ಕಲ್ಲಂಗಡಿ ಹಣ್ಣುಗಳನ್ನು ನೀಡಲಾಯಿತು. ಹಾಗೂ ಆಗಮಿಸಿದ ಎಲ್ಲರಿಗೂ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಂಭ್ರಮದಲ್ಲಿ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಪಾಲ್ಗೊಂಡು ಶಾಸಕರಿಗೆ ಶುಭಾಶಯ ಕೋರಿದರು. ಸಂಭ್ರಮಾಚರಣೆಯಲ್ಲಿ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಹಾಲಿ ಪಟ್ಟಣ ಪಂಚಾಯಿತಿ ಸದಸ್ಯ ಪಿ.ಡಿ. ಬಸನಗೌಡ್ರ, ರಟ್ಟೀಹಳ್ಳಿ ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ, ಸಾಹಿತಿ ನಿಂಗಪ್ಪ ಚಳಗೇರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಸಂತ ದ್ಯಾವಕ್ಕಳವರ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹೇಶ ಗುಬ್ಬಿ, ಮುಖಂಡರಾದ ವೀರನಗೌಡ ಪ್ಯಾಟೀಗೌಡ್ರ, ದ್ಯಾವನಗೌಡ ಬಸನಗೌಡ್ರ, ಯು.ಬಿ.ಬಣಕಾರ ಅಭಿಮಾನಿ ಬಳಗದ ಕಾರ್ಯದರ್ಶಿ ಸಿದ್ದನಗೌಡ ನರೇಗೌಡ್ರ, ತಾಲ್ಲೂಕು ಎಸ್.ಸಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಕಡೂರ, ತಾಲ್ಲೂಕು ಎಸ್.ಸಿ. ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಜಗದೀಶ ದೊಡ್ಡಮನಿ, ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯ ಬಸವರಾಜ ಚಲವಾದಿ, ತಾಲ್ಲೂಕು ಯುವ ಕಾಂಗ್ರೇಸ್ ಅಧ್ಯಕ್ಷ ಪ್ರೀತಮ್ ಪಾಟೀಲ, ಪಂಚ ಗ್ಯಾರಂಟಿ ಸಮಿತಿ ಸದಸ್ಯ ಮಂಜು ಅಸ್ವಾಲಿ, ಪಂಚ ಗ್ಯಾರಂಟಿ ಸಮಿತಿ ಸದಸ್ಯ ಕಿರಣ ವಾಲ್ಮೀಕಿ, ಮರಾಠಾ ಸಮಾಜದ ಮಾಜಿ ಅಧ್ಯಕ್ಷ ಮನೋಜ ಗೋಣೆಪ್ಪನವರ, , ಕಾಂಗ್ರೇಸ್ ಯುವ ಮುಖಂಡ ವೀರನಗೌಡ ಪಾಟೀಲ, ಪರಮೇಶಪ್ಪ ಕಟ್ಟೇಕಾರ, ಹನುಮಂತಗೌಢ ಭರಮಣ್ಣನವರ, ಸೇರಿದಂತೆ ಹಲವು ಪ್ರಮುಖ ಮುಖಂಡರು ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-22-173447749

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.