ಹಾವೇರಿ: ಜಿಲ್ಲೆಯಲ್ಲಿ ಸುರಿದ ಪೂರ್ವ ಮುಂಗಾರಿನ ಅಕಾಲಿಕ ಮಳೆಯಿಂದಾಗಿ ಹೆಚ್ಚು ಹಾನಿಯಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ವರದಿ ಸಿದ್ಧಪಡಿಸಿದೆ. ಜಿಲ್ಲೆಯಾದ್ಯಂತ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಲ್ಲೂ ಅವಘಡಗಳು ಸಂಭವಿಸಿದ್ದು, ಇದರಿಂದಾಗಿ ಹೆಸ್ಕಾಂಗೆ ₹ 11.69 ಕೋಟಿ ಹಾನಿ ಉಂಟಾಗಿದೆ.

ಜಿಲ್ಲೆಯಾದ್ಯಂತ ಅಳವಡಿಸಿರುವ ವಿದ್ಯುತ್ ಕಂಬಗಳ ಪೈಕಿ 1,652 ಕಂಬಗಳು ನೆಲಕ್ಕುರುಳಿದ್ದು, ಇದರಿಂದಾಗಿ ₹165.20 ಲಕ್ಷ ಹಾನಿಯಾಗಿದೆ. ₹4 ಲಕ್ಷ ಮೌಲ್ಯದ 4 ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು, ₹1,000 ಲಕ್ಷ ಮೌಲ್ಯದ 8 ವಿದ್ಯುತ್ ಹೈ ಟೆನ್ಶನ್ ಟವರ್ಗಳು, ₹43 ಸಾವಿರ ಮೌಲ್ಯದ 0.85 ಕಿ.ಮೀ. ಉದ್ದದಷ್ಟು ವಿದ್ಯುತ್ ತಂತಿಯೂ ಕಳಚಿ ಬಿದ್ದು ಹಾನಿಯಾಗಿದೆ.

ನಾಲ್ಕು ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿದೆ. ಬ್ಯಾಡಗಿ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಅಂಗನವಾಡಿ ಕಾಂಪೌಂಡ್ ಸಹ ಉರುಳಿಬಿದ್ದಿದೆ.

ಮಳೆಯ ಜೊತೆಯಲ್ಲಿ ಗುಡುಗು–ಸಿಡಿಲಿನ ಅಬ್ಬರವೂ ಜೋರಾಗಿತ್ತು. ಗಾಳಿಯೂ ಜೋರಾಗಿ ಬೀಸಿತ್ತು. ಇದರಿಂದಾಗಿ, ಕೃಷಿ ಬೆಳೆಯ ಜೊತೆಯಲ್ಲಿ ಅಂದಾಜು 1,117.63 ಲಕ್ಷದಷ್ಟು ಮೂಲ ಸೌಕರ್ಯವೂ ಹಾನಿಯಾದ ಮಾಹಿತಿ ವರದಿಯಲ್ಲಿದೆ.

‘2026–27ನೇ ಸಾಲಿನ ಪೂರ್ವ ಮುಂಗಾರಿನ ಮಳೆಯೊಂದಿಗೆ ಜೋರು ಗಾಳಿ ಬೀಸಿತ್ತು. ಇದರಿಂದಲೇ ಹೆಚ್ಚು ಅವಘಡಗಳು ಸಂಭವಿಸಿವೆ. ಬ್ಯಾಡಗಿಯಲ್ಲಿ 279, ಹಾನಗಲ್ನಲ್ಲಿ 83, ಹಾವೇರಿಯಲ್ಲಿ 238, ಹಿರೇಕೆರೂರಿನಲ್ಲಿ 198, ರಾಣೆಬೆನ್ನೂರಿನಲ್ಲಿ 607, ಶಿಗ್ಗಾವಿಯಲ್ಲಿ 50, ಸವಣೂರಿನಲ್ಲಿ 40 ಹಾಗೂ ರಟ್ಟೀಹಳ್ಳಿಯಲ್ಲಿ 157 ವಿದ್ಯುತ್ ಕಂಬಗಳು ಉರುಳಿಬಿದ್ದಿವೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ಮನೆ ಹಾನಿ, 111 ಅರ್ಜಿ ತಿರಸ್ಕೃತ: ಅಕಾಲಿಕ ಮಳೆಯಿಂದಾಗಿ ಮೇ 30ರವರೆಗೆ 167 ಮನೆಗಳು ಹಾನಿಯಾದ ಬಗ್ಗೆ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಆಯಾ ತಾಲ್ಲೂಕಿನ ತಹಶೀಲ್ದಾರ್ ನೇತೃತ್ವದ ತಂಡಗಳು ಪರಿಶೀಲನೆ ನಡೆಸುತ್ತಿವೆ. ಈ ಬಗ್ಗೆ 44 ಮನೆಗಳ ಅರ್ಜಿಗಳನ್ನು ಮಾತ್ರ ಅಂಗೀಕರಿಸಲಾಗಿದ್ದು, 111 ಮನೆಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 12 ಅರ್ಜಿಗಳ ಪರಿಶೀಲನೆ ಬಾಕಿಯಿದೆ.

‘ಬ್ಯಾಡಗಿ ತಾಲ್ಲೂಕಿನಲ್ಲಿ 7, ಹಾನಗಲ್ನಲ್ಲಿ 2, ಸವಣೂರಿನಲ್ಲಿ 5, ರಾಣೆಬೆನ್ನೂರಿನಲ್ಲಿ 18, ರಟ್ಟೀಹಳ್ಳಿಯಲ್ಲಿ 12 ಮನೆಗಳಿಗೆ ಹಾನಿಯಾಗಿದೆ. ಇವುಗಳ ಅರ್ಜಿಗಳನ್ನು ಅಂಗೀಕರಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-22-280636795

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.