ಹಾವೇರಿ: ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ಬಿಡುವು ನೀಡುತ್ತಲೇ, ಉತ್ತಮ ಮಳೆಯಾಗುತ್ತಿದೆ. ಈ ಮಳೆಯು, ಅಲೆಮಾರಿ ಸುಡುಗಾಡು ಸಿದ್ಧರ ಕುಟುಂಬಗಳ ಬದುಕಿನಲ್ಲಿ ಭಯ ಹುಟ್ಟಿಸುತ್ತಿದೆ. ಹಾವೇರಿ ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿ ಸುಡುಗಾಡು ಸಿದ್ದರ ಕುಟುಂಬಗಳು ಜೋಪಡಿ ಹಾಕಿಕೊಂಡು ವಾಸವಿದ್ದು, ಪ್ರತಿ ಬಾರಿ ಜೋರಾದ ಮಳೆ–ಗಾಳಿಗೆ ಜೋಪಡಿಗಳು ಹಾರಿ ಹೋಗುತ್ತಿವೆ.

ಸರ್ಕಾರಿ ಜಾಗದಲ್ಲಿ ತಾತ್ಕಾಲಿಕ ಜೋಪಡಿ ಹಾಕಿಕೊಂಡು ವಾಸವಿದ್ದ ಸುಡುಗಾಡು ಸಿದ್ಧರ ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದ ನಗರಸಭೆ, ಅದೇ ಜಾಗದಲ್ಲಿ ಜಿ+1 ಮನೆಗಳ ನಿರ್ಮಾಣ ಕಾಮಗಾರಿ ಶುರು ಮಾಡಿದೆ. ‘ಸುಡುಗಾಡು ಸಿದ್ಧರ 33 ಕುಟುಂಬಗಳಿಗೆ ಜಿ+1 ಮಾದರಿಯ ಮನೆಗಳಲ್ಲಿಯೇ ಒಂದು ಮನೆ ನೀಡಲಾಗುವುದು’ ಎಂದು ನಗರಸಭೆ ಭರವಸೆಯನ್ನೂ ನೀಡಿದೆ.

ಮನೆಗಳ ಹಂಚಿಕೆಗೆ ಫಲಾನುಭವಿಗಳ ಪಾಲಿನ ಶುಲ್ಕ ಭರಿಸುವಂತೆಯೂ ನಗರಸಭೆ ಈ ಹಿಂದೆ ಸೂಚನೆ ನೀಡಿತ್ತು. ಕುಲ ಕಸುಬು ನಂಬಿ ಬದುಕುತ್ತಿರುವ ಸುಡುಗಾಡು ಸಿದ್ಧರಿಗೆ, ಶುಲ್ಕ ಪಾವತಿ ಕಷ್ಟವಾಗಿತ್ತು. ಇದನ್ನು ಅರಿತ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, 33 ಕುಟುಂಬಗಳ ಪರವಾಗಿ ₹33 ಲಕ್ಷವನ್ನು ನಗರಸಭೆಗೆ ನೀಡಿದೆ. ಈ ಹಣ ಪಡೆದುಕೊಂಡಿರುವ ನಗರಸಭೆ, ಇದುವರೆಗೂ ಸುಡುಗಾಡು ಸಿದ್ಧರ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರ ಮಾಡಿಲ್ಲ.

ನಗರಸಭೆಯ ನಿರ್ಲಕ್ಷ್ಯದಿಂದ ಈಗ ಕುಟುಂಬಗಳು, ಮಳೆ ಬಂದ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿವೆ. ಖಾಸಗಿಯವರ ಜಾಗದಲ್ಲಿ ಜೋಪಡಿ ನಿರ್ಮಿಸಿಕೊಂಡು ವಾಸವಿರುವ ಕುಟುಂಬಗಳು, ಮಳೆ–ಗಾಳಿ–ಗುಡುಗು–ಸಿಡಿಲು ಬಂದರೆ ಸಾವಿನ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ.

ಶುಕ್ರವಾರ ಹಾಗೂ ಶನಿವಾರ ಸುರಿದ ಭಾರಿ ಮಳೆಯಿಂದ, ಹಲವು ಜೋಪಡಿಗಳಿಗೆ ನೀರು ನುಗ್ಗಿತ್ತು. ಕೆಲ ಜೋಪಡಿಗಳ ಚಾವಣಿಯು ಹಾರಿ ಹೋಗಿತ್ತು. ಮಹಿಳೆಯರು ಸ್ನಾನ ಮಾಡಲು ತಾತ್ಕಾಲಿಕವಾಗಿ ನಿರ್ಮಿಸಿದ್ದ ಕಟ್ಟಿಗೆ–ಸೀರೆಯ ವ್ಯವಸ್ಥೆಯೂ ಕಿತ್ತು ಹೋಗಿದೆ. ಮಹಿಳೆಯರ ಮರ್ಯಾದೆಗೆ ಧಕ್ಕೆ ಬರುವ ವಾತಾವರಣ ಸ್ಥಳದಲ್ಲಿ ನಿರ್ಮಾಣವಾಗಿದೆ.

‘ಕುಲ ಕಸುಬು ನಂಬಿ ಅಲೆಮಾರಿ ಜೀವನ ನಡೆಸುತ್ತಿದ್ದ ನಮ್ಮ ಹಿರಿಯರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಾವೇರಿಯಲ್ಲಿ ಶಾಶ್ವತವಾಗಿ ನೆಲೆಸಲು ಇಚ್ಛಿಸಿ ಉಳಿದುಕೊಂಡಿದ್ದರು. ಹೊಸ ಮನೆ ನೀಡುವುದಾಗಿ ಹೇಳಿದ್ದ ಸರ್ಕಾರ, ನಮ್ಮನ್ನು ಒಕ್ಕಲೆಬ್ಬಿಸಿತ್ತು. ಈಗ ಬಯಲು ಪ್ರದೇಶದಲ್ಲಿ ಜೋಪಡಿ ಕಟ್ಟಿಕೊಂಡು ವಾಸವಾಗಿದ್ದೇವೆ. ನಮಗೆ ಇದುವರೆಗೂ ಮನೆಗಳನ್ನು ನೀಡಿಲ್ಲ’ ಎಂದು ಸುಡುಗಾಡು ಸಿದ್ಧ ಮಂಜುನಾಥ ಬಾದಗಿ ಅವರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಸೇರಿ 200ಕ್ಕೂ ಹೆಚ್ಚು ಮಂದಿ ಜೋಪಡಿಯಲ್ಲಿದ್ದೇವೆ. ಜೋರು ಮಳೆ ಬಂದಾಗ ಜೋಪಡಿಗೆ ನೀರು ನುಗ್ಗುತ್ತದೆ. ತಗಡುಗಳು ಹಾರಿ ಬೀಳುತ್ತವೆ. ಮಳೆ ನಿಂತ ಮರುದಿನವೇ ಪುನಃ ಜೋಪಡಿ ಕಟ್ಟಬೇಕು. ಪುನಃ ಅದೇ ಜೋಪಡಿಯಲ್ಲಿ ಬದುಕು ಮುಂದುವರಿಸಬೇಕು. ಯಾವುದಾದರೂ ಸಮುದಾಯ ಭವನದಲ್ಲಿ ಹೋಗಿ ವಾಸವಿರುವಂತೆ ಅಧಿಕಾರಿಗಳು–ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ, 200 ಮಂದಿ ಇರುವ ಸಮುದಾಯ ಎಲ್ಲಿದೆ. ಸಾಮಗ್ರಿಗಳನ್ನು ಎಲ್ಲಿ ಇರಿಸಬೇಕು’ ಎಂದು ಪ್ರಶ್ನಿಸಿದರು.

ಸೌಕರ್ಯ ಇಲ್ಲದಿದ್ದರೂ ಮನೆಯಾದರೂ ನೀಡಿ: ‘ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿ ಜಿ+1 ಮನೆಗಳನ್ನು ನಿರ್ಮಿಸಲಾಗಿದೆ. 33 ಕುಟುಂಬಕ್ಕೆ ಅಗತ್ಯವಿರುವ ಮನೆಗಳು ಶೇ 100ರಷ್ಟು ಸಿದ್ಧವಾಗಿವೆ. ಆದರೆ, ಅವುಗಳನ್ನು ನಮಗೆ ಕೊಡುತ್ತಿಲ್ಲ. ಶೌಚಾಲಯ, ನೀರು ಹಾಗೂ ರಸ್ತೆ ಇಲ್ಲವೆಂದು ಸಬೂಬು ಹೇಳುತ್ತಿದ್ದಾರೆ. ನಮಗೆ ಯಾವುದೇ ಸೌಲಭ್ಯ ಬೇಡ. ಮನೆ ಕೊಟ್ಟರೆ ಸಾಕು. ಜೋಪಡಿಯಲ್ಲಿರುವ ನಾವು, ಮನೆಯಲ್ಲಾದರೂ ನೆಮ್ಮದಿಯಿಂದ ನಿದ್ದೆ ಮಾಡಬಹುದು. ಮಳೆ ಬಂದಾಗ, ಬೆಚ್ಚಿ ಬೀಳುವುದು ತಪ್ಪುತ್ತದೆ’ ಎಂದು ಮಂಜುನಾಥ ಬಾದಗಿ ಹೇಳಿದರು.

‘ಜೋಪಡಿಯಲ್ಲಿದ್ದರೆ, ವಿಷಜಂತುಗಳು ಒಳಗಡೆ ಬರುತ್ತವೆ. ಮಕ್ಕಳು ಹಾಗೂ ವೃದ್ಧರಿಗೆ ಯಾವಾಗ ? ಏನಾಗುತ್ತದೆ ? ಎಂಬ ಭಯವಿದೆ. ಜೋಪಡಿ ಜೀವನದಲ್ಲಿಯೇ ಹಲವು ಪ್ರಾಣ ಕಳೆದುಕೊಂಡಿದ್ದಾರೆ. ನಮಗಲ್ಲದಿದ್ದರೂ ನಮ್ಮ ಮಕ್ಕಳ ಭವಿಷ್ಯಕ್ಕಾದರೂ ನಮಗೆ ಮನೆಗಳು ಬೇಕು. ಅದನ್ನು ಪಡೆಯಲು ನಾವು ಪ್ರಾಣ ನೀಡಲು ಸಹ ಸಿದ್ಧರಿದ್ದೇವೆ’ ಎಂದು ಕಣ್ಣೀರಿಟ್ಟರು.

‘ಕಾಮಗಾರಿ ಆರಂಭಿಸಿಯೇ ಹಲವು ವರ್ಷವಾಗಿದೆ. ಮನೆಗಳ ನಿರ್ಮಾಣ ಯಾವಾಗ ಮುಗಿಯುತ್ತದೆಯೋ ಗೊತ್ತಿಲ್ಲ. ನಾಲ್ಕು ಗೋಡೆ ಕಟ್ಟಿರುವ ಸ್ಥಳ ನೀಡಿದರೂ ನಾವು ಇರಲು ಸಿದ್ಧ. ಅಕಾಲಿಕ ಮಳೆಯಲ್ಲಿಯೇ ನಮ್ಮ ಜೀವನ, ಮೂರಾಬಟ್ಟೆಯಾಗಿದೆ. ಮಳೆಗಾಲ ಶುರುವಾದರಂತೂ ನಿತ್ಯವೂ ಯಾತನೆ ತಪ್ಪಿದಲ್ಲ. ಮಳೆಗಾಲಕ್ಕೂ ಮುನ್ನವೇ ನಮಗೆ ಮನೆ ಬೇಕೇ ಬೇಕು’ ಎಂದು ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-22-76006773

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.