ರಾಣೆಬೆನ್ನೂರು: ತಾಲ್ಲೂಕು ಮತ್ತು ನಗರಾದಾದ್ಯಂತ ಸೋಮವಾರ ಸಂಜೆ ಗುಡುಗು ಸಮೇತ ಒಂದು ಗಂಟೆಗೂ ಅಧಿಕ ಕಾಲ ಆಲಿಕಲ್ಲು ಮಳೆ ಸುರಿಯಿತು.

ಭಾರಿ ಗಾಳಿ, ಮಳೆಗೆ ಮನೆಯ ಸೀಟುಗಳು ಹಾರಿ ಹೋಗಿವೆ. ಅಲ್ಲಲ್ಲಿ ಗಿಡಮರಗಳು ಬಿದ್ದಿವೆ. ಚರಂಡಿ ನೀರು ಹರಿದು ರಸ್ತೆಗಳು ಜಲಾವೃತಗೊಂಡಿವೆ. ಗುತ್ತಲ ರಸ್ತೆಯ ವೈದ್ಯ ಡಾ.ಶಿವಾನಂದ ಹಿತ್ತಲಮನಿ ಅವರ ಆಸ್ಪತ್ರೆಯೊಳಗೆ ನೀರು ನುಗ್ಗಿತು.

ನಗರದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟಿದ್ದರಿಂದ ಹಳೇ ಪಿ.ಬಿ.ರಸ್ತೆ, ತರಕಾರಿ ಮಾರುಕಟ್ಟೆ, ಕುರುಬಗೇರಿಯಿಂದ ಮಳೆ ನೀರು ಇದೇ ರಸ್ತೆ ಮೂಲಕ ಹರಿಯುತ್ತಿದೆ. ಎಂ.ಜಿ.ರಸ್ತೆಯಲ್ಲಿ ಚರಂಡಿ ಕಾಮಗಾರಿ ನಡೆದಿದ್ದು, ಎಂ.ಜಿ.ರಸ್ತೆ ಮತ್ತು ಟಾಂಗಾಕೂಟದಲ್ಲಿ ಮಳೆ ನೀರು ತುಂಬಿಕೊಂಡು ವ್ಯಾಪಾರ ವಹಿವಾಟಿಗೆ ಅನಾನುಕೂಲವಾಗಿತ್ತು.

ವಾಗೀಶನಗರದ ಚೌಡೇಶ್ವರಿನಗರದ ಎದುರಿನ ಡಿವೈಡರ್ ರಸ್ತೆಯ ಬಳಿ ರಾಜಕಾಲುವೆ ತುಂಬಿ ಹರಿದು ಜಲಾವೃತಗೊಂಡು ಕೆಲ ಕಾಲ ರಸ್ತೆ ಬಂದಾಗಿತ್ತು. ಎಡ ಬದಿ ಡಿವೈಡರ್ ರಸ್ತೆಯಲ್ಲಿ ಕಾರು ನೀರಿನಲ್ಲಿ ಹರಿದಿದ್ದರಿಂದ ವಾಹನ ಸವಾರರಿಗೆ ಅನಾನುಕೂಲವಾಗಿತ್ತು. ಪ್ರತಿ ಬಾರಿ ದೊಡ್ಡ ಮಳೆ ಬಂದಾಗ ಕಾಲುವೆ ಮೇಲೆ ನೀರು ಹರಿಯುತ್ತದೆ ಎಂದು ಆರೇಮಲ್ಲಾಪುರದ ನಾಗರಾಜ ಮಾಕನೂರು ತಿಳಿಸಿದರು.

‘ತಾಲ್ಲೂಕಿನ ಚಳಗೇರಿ ಗ್ರಾಮದ ಸಿಇಎಸ್ ಪ್ರೌಢಶಾಲೆಯ ಆವರಣದಲ್ಲಿ ಪೆಡ್ಲೈಟ್ ವಿದ್ಯುತ್ ಕಂಬಗಳು, ಕ್ರೀಡಾಂಗಣದ ವಿವಿಧ ಕೋರ್ಟ್ಗಳ ಕಬ್ಬಿಣದ ಪೈಪುಗಳು ಮತ್ತು ಗಿಡಮರಗಳು ಬಿದ್ದು ಶಾಲೆಯ 2 ಕೊಠಡಿಗಳ ಹೆಂಚು ಜಖಂಗೊಂಡಿವೆ. ರಾಷ್ಟ್ರೀಯ ಹೆದ್ದಾರಿ ಬದಿಗೆ ಇರುವ ಹೋಟೆಲ್ಗಳ ಚಾವಣಿ ಸೀಟುಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಕೆಲ ಗಿಡ, ಮರಗಳು ಬಿದ್ದಿವೆ. ಯಾವುದೇ ಪ್ರಾಣಾಪಾಯವಾದ ವರದಿಯಾಗಿಲ್ಲ. ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ’ ಎಂದು ತಹಶೀಲ್ದಾರ್ ಆರ್.ಎಚ್.ಭಾಗವಾನ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-22-823310882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.