ರಾಣೆಬೆನ್ನೂರು: ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಜನ್ ಆರಂಭವಾ ಗಿದ್ದು, ಮಾರುಕಟ್ಟೆಗೆ ವಿವಿಧ ಬಗೆಯ ಮಾವಿನ ಹಣ್ಣು ಬಂದಿದೆ. ಆದರೆ, ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಇನ್ನೊಂದೆಡೆ ಮಳೆಯಾಗಿಲ್ಲ. ಹಾಗಾಗಿ ಮಾವಿನ ಘಮ ಘಮ ವಾಸನೆ ಸವಿಯು ವವರ ಸಂಖ್ಯೆ ಕಡಿಮೆಯಾಗಿದೆ.

ಮಳೆ ಬರುವ ಮುನ್ನ ಮಾರುಕಟ್ಟೆಗೆ ಬರುವ ಮಾವಿನ ಹಣ್ಣು ಹುಳಿಯಾಗಿರುತ್ತದೆ. ಮಳೆ ಬಿದ್ದ ನಂತರ ಸಿಗುವ ಹಣ್ಣು ಜೇನು ಅಥವಾ ಸಕ್ಕರೆ ಸವಿದ ತೃಪ್ತಿ ನೀಡುತ್ತದೆ ಎಂಬ ಭಾವನೆ ಜನಮಾನಸಲ್ಲಿ ಮೂಡಿದೆ. ಆದ್ದರಿಂದ ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಮಾವಿನ ಹಣ್ಣು ಸೇವಿಸಲು ಜನರು ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ.

ಈ ವರ್ಷ ಮಾವಿನ ಹಣ್ಣಿನ ವ್ಯಾಪಾರ ಬಹಳ ಡಲ್ ಆಗಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿಗಳು.

ತಾಲ್ಲೂಕಿನ ಗ್ರಾಮಗಳಿಂದ ಒಂದಿಷ್ಟು ಪ್ರಮಾಣ ಹಣ್ಣು ಮಾರುಕಟ್ಟೆಗೆ ಬರುತ್ತಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ಬರುತ್ತವೆ.

ಇನ್ನು 15-20 ದಿನಗಳಲ್ಲಿ ಹಣ್ಣುಗಳ ದರ ಕಡಿಮೆಯಾಗಲಿದ್ದು, ಗ್ರಾಹಕರು ಹೆಚ್ಚು ಹಣ್ಣು ಖರೀದಿಸುವ ಪ್ರಮಾಣವೂ ಹೆಚ್ಚಲಿದೆ ಎಂದು 20 ವರ್ಷಗಳಿಂದ ಹಣ್ಣಿನ ವ್ಯಾಪಾರದಲ್ಲಿ ತೊಡಗಿರುವ ಮಹಿಳೆ ದುರುಗಮ್ಮ ವಿಶ್ವಾಸ ವ್ಯಕ್ತಪಡಿಸಿದರು.

ಬಿಸಿಲಿನ ತಾಪ: ಬಹುತೇಕ ತಳಿಗಳ ಮಾವಿನ ಹಣ್ಣುಗಳ ದರ ಕೆಜಿಗೆ ₹ 100 ರಿಂದ 150 ರ ಆಸುಪಾಸಿನಲ್ಲಿವೆ. ದರ ಹೆಚ್ಚು ಇದೆ ಎಂಬ ಕಾರಣಕ್ಕೆ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳ ಖರೀದಿಗೆ ಗ್ರಾಹಕರು ಮುಂದಾಗುತ್ತಿಲ್ಲ.

ವ್ಯಾಪಾರಿಗಳು ಮತ್ತು ಗ್ರಾಹಕರ ನಡುವೆ ಚೌಕಾಸಿ ನಡೆಯುವುದು ಕಂಡು ಬರುತ್ತದೆ. ಬೀದಿ ವ್ಯಾಪಾರ ಕಡಿಮೆಯಾ ಗಿದ್ದು, ಮಾಲ್ಗಳ ಸಂಸ್ಕೃತಿ ಹೆಚ್ಚಾಗಿದೆ.

ಬೆಳಿಗ್ಗೆ ಮತ್ತು ಸಂಜೆ ವ್ಯಾಪಾರ ಇರುತ್ತದೆ. ಮಧ್ಯಾಹ್ನ ಬಿಸಿಲಿನ ತಾಪಕ್ಕೆ ಜನರು ಮಾರುಕಟ್ಟೆಗೆ ಬರುವುದೇ ಕಡಿಮೆ, ದರ ಹೆಚ್ಚಾಗಿದ್ದರಿಂದ ವ್ಯಾಪಾರ ಡಲ್ ಇದೆ ಎನ್ನುತ್ತಾರೆ ಮಾವಿನ ಹಣ್ಣಿನ ವ್ಯಾಪಾರಿ ಶೋಯೋಬ್. ಹಿಂದಿನ ವರ್ಷ ₹ 80 ಕೆಜಿಗೆ ಮಾರಾಟವಾಗಿದ್ದ ಮಲಗೋವಾಕ್ಕೆ ಈ ಬಾರಿ ₹ 120- 150, ಸಿಂಧೂರ್ಕ್ಕೆ ₹ 100, ರಸಪೂರಿಗೆ ₹ 100, ಕಸಿ ಹಣ್ಣಿಗೆ ₹ 100, ಆಪೋಸ್ ₹ 120, ಬೆನ್ನಿಸಾ ₹ 80, ಒಂದೂವರೆ ಕೆಜಿ ತೋತಾಪುರಿಗೆ ₹ 100 ದರ ಇದೆ.

ಆವಕದಲ್ಲೂ ಕುಸಿತ: ಹಿಂದಿನ ಮಾವಿನ ಹಣ್ಣಿನ ಸೀಜ್ನಲ್ಲಿ ರಾಣೆಬೆನ್ನೂರು ಮಾರುಕಟ್ಟೆಯೊಂದಕ್ಕೆ ಪ್ರತಿದಿನ 8 ರಿಂದ 10 ಟನ್ ಮಾವು ಆವಕವಾಗುತ್ತಿತ್ತು.

ಆದರೆ, ಈ ಬಾರಿ ಸೀಜ್ನಲ್ಲಿ ದಿನಾಲು 6 ರಿಂದ 7 ಟನ್ ಮಾತ್ರ ಆವಕವಾಗುತ್ತಿದೆ. ಇದಕ್ಕೆ ಈಚೆಗೆ ಮಾವು ಬೆಳೆದ ಪ್ರದೇಶಗಳಲ್ಲಿ ಸುರಿದ ಆಲಿಕಲ್ಲು ಸಹಿತ ಮಳೆಯ ಅಬ್ಬರಕ್ಕೆ ಹೀಚುಗಾಗಿ ಉದುರಿ ಇಳುವರಿ ಕುಂಠಿತವಾಗಿರುವುದು ಕಾರಣ ವಾಗಿದೆ ಎನ್ನುತ್ತಾರೆ ಮಾವಿನ ಹಣ್ಣಿನ ಸಗಟು ವ್ಯಾಪಾರಿಗಳು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-22-1331394342

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.