ರಾಣೆಬೆನ್ನೂರು: ಇಲ್ಲಿನ ಮೃತ್ಯುಂಜಯನಗರದ ದೈವಜ್ಞ ಸಮುದಾಯ ಭವನದಲ್ಲಿ ಏ. 17 ರಂದು ಬೆಳಿಗ್ಗೆ 9.30ಕ್ಕೆ ನವ ದಶಕೋತ್ಸವ ಸಂಭ್ರಮದ ಬ್ರಹ್ಮಾಕುಮಾರೀಸ್ನಿಂದ ವಿಶ್ವ ಪರಿವರ್ತನೆಗೆ ಆಧ್ಯಾತ್ಮಿಕ ಜಾಗೃತಿ - ಸಂತ ಸಮ್ಮೇಳನ ನಡೆಯಲಿದೆ ಎಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಮಾಲತಿ ಅಕ್ಕ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಹುಬ್ಬಳ್ಳಿ ವಲಯದ ಈಶ್ವರೀಯ ವಿವಿ ನಿರ್ದೇಶಕ ಬಸವರಾಜ ರಾಜ ಋಷಿ ಸಾನ್ನಿಧ್ಯ ವಹಿಸುವರು. ರಾಜಸ್ಥಾನದ ಈಶ್ವರೀಯ ವಿ.ವಿಯ ರಾಮನಾಥಜಿ ಈಶ್ವರೀಯ ಸಂದೇಶ ಹೇಳುವರು. ಶಾಸಕ ಪ್ರಕಾಶ ಕೋಳಿವಾಡ ಕಾರ್ಯಕ್ರಮ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ದಾವಣಗೆರೆ ಈಶ್ವರೀಯ ವಿ.ವಿ ಪ್ರಧಾನ ಸಂಚಾಲಕಿ ಲೀಲಾಜಿ, ರಾಜಸ್ಥಾನ ಈಶ್ವರೀಯ ವಿವಿಯ ಸುರೇಶ ಜಿ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಮಾಲತಿ ಅಕ್ಕ, ಕೂಡ್ಲಿಗಿ ಈಶ್ವರೀಯ ವಿವಿ ಸಂಚಾಲಕಿ ಚಂದ್ರಕಲಾ, ದಾಂಡೇಲಿಯ ತುಮ್ಮಿನಕಟ್ಟಿ, ಹಲಗೇರಿ ಹಾಗೂ ಸರ್ವ ದೈ ಪರಿವಾರದವರು ಆಗಮಿಸುವರು. ತಹಶೀಲ್ದಾರ್ ಆರ್.ಎಚ್.ಭಾಗವಾನ, ಪೌರಾಯುಕ್ತ ಎಫ್.ವೈ.ಇಂಗಳಗಿ ಅತಿಥಿಗಳಾಗಿ ಆಗಮಿಸುವರು.

ಬೆಂಗಳೂರಿನ ಕೆಂಗೇರಿಯ ನಿಶ್ಚಲಾನಂದನಾಥ ಸ್ವಾಮೀಜಿ, ಐರಣಿಯ ಗಜದಂಡ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ, ದೊಡ್ಡಪೇಟೆ ವಿರಕ್ತಮಠದ ಗುರುಬಸವ ಸ್ವಾಮೀಜಿ, ಗುಡ್ಡದ ಆನ್ವೇರಿಯ ಶಿವಯೋಗಿಗಳು, ಬೆಳಗಾವಿ ಕಾರಂಜಿಮಠದ ಶಿವಯೋಗಿ ದೇವರು, ಖಂಡೇರಾಯನಹಳ್ಳಿ ಸಿದ್ದಾಶ್ರಮದ ನಾಗರಾಜಾನಂದ ಸ್ವಾಮೀಜಿ, ತುಮ್ಮಿನಕಟ್ಟಿ ಪ್ರಭುಲಿಂಗ ಸ್ವಾಮೀಜಿ, ಅಂಗಸಾಪುರದ ಆಂಜನೇಯ ಸ್ವಾಮೀಜಿ, ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಅಯ್ಯಪ್ಪಸ್ವಾಮಿ ದೇವಸ್ಥಾನದ ಮಂಜುನಾಥ ಮಣೇಗಾರ ಸ್ವಾಮೀಜಿ, ಗಂಗಾಪುರದ ಮರುಳಶಂಕರ ಸ್ವಾಮೀಜಿ, ಸೋಮಶೇಖರ ಸ್ವಾಮೀಜಿ, ನಂದಾಗಿರಿ ಗೀತಾಕುಠೀರ್ಮಾತಾಜಿ ಅನ್ನಪೂರ್ಣ ಭಾಗವಹಿಸಲಿದ್ದಾರೆ .

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-22-597534497

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.