ರಾಣೆಬೆನ್ನೂರು: ತಾಲ್ಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮದ ಭರಮಪ್ಪ ಅಡಿವೆಪ್ಪ ನಂದಿಗಾವಿ ಅವರ ನಿವಾಸದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆಗೆ ಮಾರಾಟ ಮಾಡಲು ಅನಧಿಕೃತವಾಗಿ ದಾಸ್ತಾನು ಮಾಡಿದ್ದ 1,800 ಕೆ.ಜಿ ಕಳಪೆ ಮೆಕ್ಕೆಜೋಳದ ಬೀಜಗಳನ್ನು ಗುರುವಾರ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ನೇತೃತ್ವದ ತಂಡ ದಾಳಿ ನಡೆಸಿ ಪತ್ತೆ ಹಚ್ಚಿದೆ.

50 ಕೆ.ಜಿ ತೂಕದ 36 ಚೀಲಗಳಲ್ಲಿ ಬಿತ್ತನೆ ಬೀಜ ಅನಧಿಕೃತವಾಗಿ ದಾಸ್ತಾನು ಮಾಡಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಂಡು ಬೀಜಗಳನ್ನು ಜಪ್ತು ಮಾಡಿದ್ದಾರೆ. ದಾಳಿಯಲ್ಲಿ ಕೃಷಿ ಅಧಿಕಾರಿ ಬಸವರಾಜ ಎಫ್. ಮರಗಣ್ಣನವರ ಹಾಗೂ ಅರವಿಂದ ಎಂ. ಹಾಜರಿದ್ದರು.

‘ತಾಲ್ಲೂಕಿನಲ್ಲಿ ಈಚೆಗೆ ಕಳಪೆ ಬಿತ್ತನೆ ಬೀಜಗಳ ಮಾರಾಟದ ಹಾವಳಿ ಹೆಚ್ಚಾಗಿದೆ. ರೈತರು ಮೋಸ ಹೋಗದೇ ಗುಣಮಟ್ಟದ ನಿಜ ಚೀಟಿ ಹೊಂದಿರುವ ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟ ಕೇಂದ್ರಗಳಲ್ಲಿಯೇ ಖರೀದಿಸಿ ಲಾಟ್ ನಂಬರ್ನೊಂದಿಗೆ ಬಿಲ್ ಹಾಕಿಸಿಕೊಂಡು ಬಳಕೆ ಮಾಡಬೇಕು’ ಎಂದು ಅಧಿಕಾರಿಗಳು ರೈತರಿಗೆ ಸೂಚಿಸಿದ್ದಾರೆ. ಈ ರೀತಿ ಅನಧಿಕೃತ ದಾಸ್ತಾನು ಮಾಡಿದ ಕಳಪೆ ಬೀಜದ ದಾಸ್ತಾನು ಕಂಡುಬಂದಲ್ಲಿ ಕೂಡಲೇ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-22-46714814

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.