ರಾಣೆಬೆನ್ನೂರು: ತಾಲ್ಲೂಕಿನ ಕಜ್ಜರಿ ಗ್ರಾಮದಲ್ಲಿ ಅಣ್ಣತಮ್ಮಂದಿರ ನಡುವೆ ಆಸ್ತಿವಿವಾದ ಹಿನ್ನೆಲೆಯಲ್ಲಿ ಕರಬಸಪ್ಪ ನಿಂಗಪ್ಪ ಚಿನ್ನದ (35) ಎಂಬಾತನ ಮೇಲೆ ಆತನ ತಂದೆಯ ಸಹೋದರರರು, ಮಕ್ಕಳು ಮತ್ತು ಮೊಮ್ಮಕ್ಕಳು ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮೃತನ ಸಹೋದರರಾದ ಶರಣಪ್ಪ ನಿಂಗಪ್ಪ ಚಿನ್ನದ, ಕರಬಸಪ್ಪ ನಿಂಗಪ್ಪ ಚಿನ್ನದ, ಮಂಜಪ್ಪ ನಿಂಗಪ್ಪ ಚಿನ್ನದ ಅವರು ಗಾಯಗೊಂಡಿದ್ದಾರೆ. ಮೃತನ ಸಹೋದರ ಮಂಜಪ್ಪ ನಿಂಗಪ್ಪ ಚಿನ್ನದ ಈ ಬಗ್ಗೆ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆರೋಪಿತರರಾದ ಬಸವರಾಜ ಹನುಮಂತಪ್ಪ ಚಿನ್ನದ, ಶರಣಪ್ಪ ಬಸವರಾಜಪ್ಪ ಚಿನ್ನದ, ಜಗದೀಶ ಬಸವರಾಜಪ್ಪ ಚಿನ್ನದ, ಮಲ್ಲಿಕಾರ್ಜುನ ಹನುಮಂತಪ್ಪ ಚಿನ್ನದ, ವಿನಾಯಕ ಮಲ್ಲಿಕಾರ್ಜುನ ಚಿನ್ನದ, ಸಂತೋಷ ಮಲ್ಲಿಕಾರ್ಜುನ ಚಿನ್ನದ, ಸುರೇಶ ಹನುಮಂತಪ್ಪ ಚಿನ್ನದ, ಹನುಮಂತಪ್ಪ ಸುರೇಶ ಚಿನ್ನದ, ರವಿ ಸುರೇಶಪ್ಪ ಚಿನ್ನದ, ಕರಬಸಪ್ಪ ವಿರುಪಾಕ್ಷಪ್ಪ ಚಿನ್ನದ, ವಿರೇಶ ಕರಬಸಪ್ಪ ಚಿನ್ನದ, ಪುಟ್ನಂಜ ಈರೇಶ ಚಿನ್ನದ ಸೇರಿದಂತೆ ಒಟ್ಟು 12 ಜನರ ವಿರುದ್ದ ದೂರು ದಾಖಲಾಗಿದೆ.

ಹಿನ್ನೆಲೆ: ಆರೋಪಿತರು ಮೃತ ಕರಬಸಪ್ಪ ನಿಂಗಪ್ಪ ಚಿನ್ನದ ಮತ್ತು ದೂರುದಾರ ಶರಣಪ್ಪ ನಿಂಗಪ್ಪ ಚಿನ್ನದ ಅವರ ತಂದೆಯ ಸಹೋದರ ಮಕ್ಕಳು ಹಾಗೂ ಮೊಮ್ಮಕ್ಕಳು ಇದ್ದು, ಇವರ ನಡುವೆ ಸರ್ವೆ ನಂ.111 ರಲ್ಲಿ ಜಮೀನಿನ ದಾರಿಯ ಸಂಬಂಧ ಜಗಳ ಏರ್ಪಟ್ಟಿತ್ತು. ಸೋಮವಾರ ರಾತ್ರಿ ಆರೋಪಿತರು ಅಕ್ರಮ ಪ್ರವೇಶ ಮಾಡಿ, ನಮ್ಮ ಆಸ್ತಿಯನ್ನು ನಾವು ಮಾರಾಟ ಮಾಡಿಕೊಡುತ್ತೇವೆ. ಅದನ್ನು ಕೇಳಲು ನೀವು ಯಾರು ಎಂದು ಪ್ರಶ್ನಿಸಿ ಅದರಲ್ಲಿ ದಾರಿಯನ್ನು ಕೊಡಬೇಕೆಂದು ಜಗಳ ತೆಗೆದು ಅವ್ಯಾಚ್ಚ ಶಬ್ದಗಳಿಂದ ಬೈದಾಡಿ ಆಸ್ತಿಯಲ್ಲಿ ದಾರಿ ಕೊಡದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕೈಯಿಂದ ಹೊಡಿ ಬಡಿ ಮಾಡಿ ಶರಣಪ್ಪ ನಿಂಗಪ್ಪ ಚಿನ್ನದ ಈತನಿಗೆ ನೋವುಂಟು ಮಾಡಿದ್ದಾರೆ. ಅಲ್ಲದೇ ಕರಬಸಪ್ಪ ನಿಂಗಪ್ಪ ಚಿನ್ನದ ಈತನ್ನು ದೂಡಿ, ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು ನೋವಾದಾಗ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದಾಗ ಕರಬಸಪ್ಪ ಚಿನ್ನದ ಮೃತ ಹೊಂದಿದ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಮೇಲಿನ ಆರೋಪಿತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೃತನ ಸಹೋದರ ಶರಣಪ್ಪ ನಿಂಗಪ್ಪ ಚಿನ್ನದ ದೂರು ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-22-1205531142

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.