ಹಾವೇರಿ: ಜಿಲ್ಲೆಯ ವಾಣಿಜ್ಯ ನಗರ ಖ್ಯಾತಿಯ ರಾಣೆಬೆನ್ನೂರು, ಆರ್ಥಿಕವಾಗಿ ಅತೀ ವೇಗದಲ್ಲಿ ಬೆಳೆಯುತ್ತಿದೆ. ರಾಣೆಬೆನ್ನೂರು ನಗರ ಹಾಗೂ ತಾಲ್ಲೂಕು ಪ್ರದೇಶದ ಜನಸಂಖ್ಯೆಯೂ ಉತ್ತಮವಾಗಿದ್ದು, ವ್ಯಾಪ್ತಿಯೂ ಹೆಚ್ಚಿದೆ. ಇದೇ ಕಾರಣಕ್ಕೆ, ಹೊಸದಾಗಿ ‘ರಾಣೆಬೆನ್ನೂರು ಉಪವಿಭಾಗ’ ರಚಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಸದ್ಯ ಎರಡು ಉಪವಿಭಾಗಗಳನ್ನು (ಸವಣೂರು ಹಾಗೂ ಹಾವೇರಿ) ರಚಿಸಲಾಗಿದೆ. ಸವಣೂರು ಉಪವಿಭಾಗದ ವ್ಯಾಪ್ತಿಗೆ ಸವಣೂರು, ಶಿಗ್ಗಾವಿ, ಹಾನಗಲ್ ತಾಲ್ಲೂಕುಗಳನ್ನು ಸೇರಿಸಲಾಗಿದೆ. ಹಾವೇರಿ ಉಪವಿಭಾಗದ ವ್ಯಾಪ್ತಿಗೆ ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕುಗಳನ್ನು ಸೇರ್ಪಡೆ ಮಾಡಲಾಗಿದೆ.

ಆಯಾ ತಾಲ್ಲೂಕಿನ ಜನರು, ತಮ್ಮೂರಿನಿಂದ ದೂರದಲ್ಲಿರುವ ಉಪ ವಿಭಾಗಾಧಿಕಾರಿ ಕಚೇರಿಗಳ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಸವಣೂರು ಉಪವಿಭಾಗದ ವ್ಯಾಪ್ತಿಯಲ್ಲಿರುವ ಮೂರು ತಾಲ್ಲೂಕುಗಳು ಕೊಂಚ ಹತ್ತಿರದಲ್ಲಿವೆ. ಆದರೆ, ಹಾವೇರಿ ಉಪವಿಭಾಗದ ವ್ಯಾಪ್ತಿಗೆ ಐದು ತಾಲ್ಲೂಕುಗಳನ್ನು ಸೇರಿಸಲಾಗಿದೆ. ಈ ತಾಲ್ಲೂಕುಗಳ ಜನರು, ಉಪವಿಭಾಗಾಧಿಕಾರಿ ಕಚೇರಿ ಕೆಲಸಕ್ಕೆ ಹೋಗಿಬರಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಆಸ್ತಿ ವ್ಯಾಜ್ಯದ ವಿಚಾರಣೆ, ದಾಖಲೆಗಳ ತಿದ್ದುಪಡಿ, ಕಚೇರಿ ಕೆಲಸ, ಸಾರ್ವಜನಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಜನರು ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋಗಿ ಬರುತ್ತಿದ್ದಾರೆ. ವಾಣಿಜ್ಯ ನಗರವಾಗಿ ಬೆಳೆದಿರುವ ರಾಣೆಬೆನ್ನೂರಿನ ಜನರು, ಉಪ ವಿಭಾಗದ ಕೆಲಸಗಳಿಗಾಗಿ ಹಾವೇರಿಗೆ ಹೋಗಿ ಬರಬೇಕು. ಈ ತೊಂದರೆಗೆ ಪರಿಹಾರವಾಗಿಯೇ ರಾಣೆಬೆನ್ನೂರಿನ ಜನರು, ಉಪ ವಿಭಾಗಕ್ಕಾಗಿ ಆಗ್ರಹಿಸುತ್ತಿದ್ದಾರೆ. ಜೊತೆಗೆ, ಹಾವೇರಿ ಉಪ ವಿಭಾಗಾಧಿಕಾರಿಗೂ ಕೆಲಸದ ಒತ್ತಡ ಹೆಚ್ಚಿದೆ.

‘ಸವಣೂರು ಉಪವಿಭಾಗದಲ್ಲಿ ಕೇವಲ ಮೂರು ತಾಲ್ಲೂಕುಗಳಿವೆ. ಹಾವೇರಿ ಉಪವಿಭಾಗದಲ್ಲಿ ಐದು ತಾಲ್ಲೂಕುಗಳಿವೆ. ಹಾವೇರಿ ಉಪವಿಭಾಗವನ್ನು ವಿಭಜಿಸಿ, ಹೊಸದಾಗಿ ರಾಣೆಬೆನ್ನೂರು ಉಪವಿಭಾಗ ಮಾಡಲು ಅವಕಾಶವಿದೆ. ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು’ ಎಂದು ಜನರು ಒತ್ತಾಯಿಸುತ್ತಿದ್ದಾರೆ.

‘ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕಿಂತಲೂ, ರಾಣೆಬೆನ್ನೂರು ನಗರ ಅತೀ ವೇಗದಲ್ಲಿ ಬೆಳೆಯುತ್ತಿದೆ. ಜಿಲ್ಲಾ ಕೇಂದ್ರವಾಗುವ ಅರ್ಹತೆ ಇದ್ದರೂ, ಅಂದಿನ ಬೆಳವಣಿಗೆಯಿಂದಾಗಿ ಅವಕಾಶ ಕೈತಪ್ಪಿದೆ. ಈಗ ಉಪವಿಭಾಗವನ್ನಾದರೂ ಸರ್ಕಾರ ಮಾಡಬೇಕು’ ಎಂದು ಆಗ್ರಹಿಸುತ್ತಿದ್ದಾರೆ.

‘ರಾಣೆಬೆನ್ನೂರು ಉಪವಿಭಾಗವಾದರೆ, ನಗರದಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿ ಆರಂಭವಾಗುತ್ತದೆ. ಯಾವುದೇ ಕೆಲಸವಿದ್ದರೂ ಹಾವೇರಿಗೆ ಹೋಗಿ ಬರುವುದು ತಪ್ಪುತ್ತದೆ. ಆಸ್ತಿ ವ್ಯಾಜ್ಯದ ವಿಚಾರಣೆಗೂ ಹಾಜರಾಗಲು ಅನುಕೂಲವಾಗುತ್ತದೆ’ ಎಂದು ಜನರು ಹೇಳುತ್ತಿದ್ದಾರೆ.

ಶಾಸಕ ಪ್ರಯತ್ನ, ಸಹಮತ ನೀಡದ ಆರ್ಥಿಕ ಇಲಾಖೆ: ರಾಣೆಬೆನ್ನೂರನ್ನು ಉಪ ವಿಭಾಗವನ್ನಾಗಿ ಮಾಡಲು ಶಾಸಕ ಪ್ರಕಾಶ ಕೋಳಿವಾಡ ಅವರು ಈಗಾಗಲೇ ಪ್ರಯತ್ನ ಆರಂಭಿಸಿದ್ದಾರೆ. ಉಪವಿಭಾಗ ತೆರೆಯಲು ಸಾಧ್ಯವಿಲ್ಲವೆಂದು ಹೇಳುತ್ತಿರುವ ರಾಜ್ಯ ಸರ್ಕಾರ, ಆರ್ಥಿಕ ಇಲಾಖೆ ಸಹಮತ ನೀಡುತ್ತಿಲ್ಲವೆಂದು ಉತ್ತರಿಸುತ್ತಿದೆ.

ವಿಧಾನಸಭೆ ಅಧಿವೇಶನದಲ್ಲಿ ಇತ್ತೀಚೆಗೆ ವಿಷಯ ಪ್ರಸ್ತಾಪಿಸಿರುವ ಶಾಸಕ ಪ್ರಕಾಶ ಕೋಳಿವಾಡ, ‘ರಾಣೆಬೆನ್ನೂರಿನಲ್ಲಿ ಉಪವಿಭಾಗಾಧಿಕಾರಿ ಕಚೇರಿ ತೆರೆಯುವ ಉದ್ದೇಶ ಸರ್ಕಾರಕ್ಕೆ ಇದೆಯಾ? ಇದ್ದರೆ, ಯಾವ ಕಾಲಮಿತಿಯಲ್ಲಿ ಘೋಷಣೆ ಮಾಡುತ್ತೀರಾ’ ಎಂದು ಪ್ರಶ್ನಿಸಿದ್ದರು.

ಅದಕ್ಕೆ ಉತ್ತರಿಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ರಾಜ್ಯದಲ್ಲಿ ಸದ್ಯ 53 ಕಂದಾಯ ಉಪವಿಭಾಗಗಳಿವೆ. ರಾಣೆಬೆನ್ನೂರು ತಾಲ್ಲೂಕು ಒಳಗೊಂಡಂತೆ ರಾಜ್ಯದಲ್ಲಿ ನೂತನ ಉಪವಿಭಾಗಗಳನ್ನು ರಚಿಸುವ ಕುರಿತು ಸರ್ಕಾರವು ಯಾವುದೇ ತಾತ್ವಿಕ ನಿರ್ಣಯ ಕೈಗೊಂಡಿಲ್ಲ. ಜೊತೆಗೆ, ಹೊಸ ಉಪವಿಭಾಗಗಳನ್ನು ತೆರೆಯುವ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆಯು ಸಹಮತಿ ನೀಡುತ್ತಿಲ್ಲ’ ಎಂದಿದ್ದಾರೆ.

ಸಚಿವರ ಹೇಳಿಕೆಯು ಸ್ಥಳೀಯ ಜನರ ಬೇಸರಕ್ಕೆ ಕಾರಣವಾಗಿದೆ. ‘ಉಪವಿಭಾಗ’ ರಚನೆಗಾಗಿ ಹೋರಾಟ ಮುಂದುವರಿಸುವುದಾಗಿ ಜನರು ತಿಳಿಸಿದ್ದಾರೆ.

ಕೇಂದ್ರದತ್ತ ಸಚಿವರ ಬೊಟ್ಟು

‘ರಾಣೆಬೆನ್ನೂರು ಉಪವಿಭಾಗ ರಚಿಸಲು ರಾಜ್ಯ ಸರ್ಕಾರವು ತಾತ್ವಿಕ ನಿರ್ಣಯ ಕೈಗೊಂಡಿಲ್ಲ’ ಎಂದಿರುವ ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ದಾರೆ.

‘2026ನೇ ಸಾಲಿನಲ್ಲಿ ಜನಗಣತಿ ನಡೆಸಲು ಕೇಂದ್ರ ಸರ್ಕಾರವು ಉದ್ದೇಶಿಸಿದೆ. ಆಡಳಿತಾತ್ಮಕ ಗಡಿಗಳನ್ನು ಬದಲಾವಣೆ ಮಾಡದಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ಉಪವಿಭಾಗದ ರಚನೆ ಬಗ್ಗೆ ನಿರ್ಣಯ ಕೈಗೊಂಡಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.