ಹಾನಗಲ್: ನನೆಗುದಿಗೆ ಬಿದ್ದಿರುವ ನಾಲ್ಕರ್ಕ್ರಾಸ್ ಮತ್ತು ಶಿರಸಿ ರಸ್ತೆ ಕಾಮಗಾರಿ ಸ್ಥಳಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಶುಕ್ರವಾರ ಭೇಟಿ ನೀಡಿದರು. ರಸ್ತೆ ಕಾಮಗಾರಿಯಿಂದ ಮುಕ್ತಿ ಕೊಡಿಸುವಂತೆ ಈ ವೇಳೆ ಹೆದ್ದಾರಿಗೆ ಹೊಂದಿಕೊಂಡ ಗ್ರಾಮಗಳ ಜನರು ಆಗ್ರಹಿಸಿದರು.

ಸಾಗಾರಮಾಲಾ ಯೋಜನೆಯಲ್ಲಿ ಸುಧಾರಣೆ ಮಾಡುತ್ತಿರುವ ಈ ರಸ್ತೆಗೆ ಹೊಂದಿಕೊಂಡ ತಾಲ್ಲೂಕಿನ ನಾಲ್ಕರ್ಕ್ರಾಸ್, ಹನುಮನಕೊಪ್ಪ, ಬಾಳಿಹಳ್ಳಿ, ಸಮ್ಮಸಗಿ ಗ್ರಾಮಗಳ ಜನರ ಸಮಸ್ಯೆಗಳನ್ನು ಆಲಿಸಿದ ಸಂಸದ ಬೊಮ್ಮಾಯಿ, ಸ್ಥಳದಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಸುಮಾರು ನಾಲ್ಕು ವರ್ಷಗಳಿಂದ ಈ ರಸ್ತೆ ಕಾಮಗಾರಿಯ ದುಷ್ಟರಿಣಾಮಗಳನ್ನು ಅನುಭವಿಸುತಿದ್ದೇವೆ. ಕಾಮಗಾರಿ ವೇಗ ಪಡೆಯುತ್ತಿಲ್ಲ. ಇದ್ದ ರಸ್ತೆಯನ್ನು ಅಗೆದು ಹಾಕಲಾಗಿದೆ. ಗ್ರಾಮಗಳ ಭಾಗದಲ್ಲಿ ಚರಂಡಿ ಕಾಮಗಾರಿಯನ್ನು ಅರ್ದಕ್ಕೆ ನಿಲ್ಲಿಸಲಾಗಿದೆ’ ಎಂದು ಜನರು ಅಳಲು ತೋಡಿಕೊಂಡರು.

‘ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ಏಳುವ ದೂಳು ಮಕ್ಕಳು, ವೃದ್ಧರಿಗೆ ಕಾಯಿಲೆ ತರುತ್ತಿದೆ. ಅವೈಜ್ಞಾನಿಕವಾದ ಚರಂಡಿ ಕಾಮಗಾರಿ ಮಳೆಗಾಲದಲ್ಲಿ ಅವಾಂತರ ಸೃಷ್ಟಿಸುತ್ತಿದೆ’ ಎಂದು ಹನುಮನಕೊಪ್ಪ, ಬಾಳಿಹಳ್ಳಿ, ಸಮ್ಮಸಗಿ ಗ್ರಾಮಸ್ಥರು ಸಮಸ್ಯೆ ತೆರೆದಿಟ್ಟರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಸ್ಥಳದಲ್ಲಿ ಹಾಜರಿದ್ದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚನೆ ನೀಡಿದ ಸಂಸದ ಬೊಮ್ಮಾಯಿ, ಒಂದು ತಿಂಗಳ ಒಳಗಾಗಿ ರಸ್ತೆ ಸಮತಟ್ಟು ಮಾಡಿ ಸಂಚಾರಕ್ಕೆ ಯೋಗ್ಯ ಮಾಡಬೇಕು. ನಿತ್ಯ ಎರಡು ಬಾರಿ ರಸ್ತೆಗೆ ನೀರು ಹಾಕಿ ದೂಳು ಏಳದಂತೆ ಎಚ್ಚರಿಕೆ ವಹಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಹೊನ್ನಾವರ ವಿಭಾಗದ ಅಧಿಕಾರಿಗಳಾದ ಎಂ.ಶಿವಕುಮಾರ, ವಿನಾಯಕ ಸೊಂಟಗೆ, ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ರಾಘವೇಂದ್ರ ತಹಸೀಲ್ದಾರ್, ಕೃಷ್ಣ ಈಳಿಗೇರ, ಅಣ್ಣಪ್ಪ ಚಾಕಾಪೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-22-1585248170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.