ಹಾವೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿದ್ದ ಲಾರಿ ಅಡ್ಡಗಟ್ಟಿ ಹಣದ ಚೀಲವನ್ನು ದರೋಡೆ ಮಾಡಿದ್ದ ಪ್ರಕರಣ ಭೇದಿಸಿರುವ ಜಿಲ್ಲಾ ಪೊಲೀಸರು, 9 ಆರೋಪಿಗಳನ್ನು ಬಂಧಿಸಿ ₹ 40 ಲಕ್ಷ ಜಪ್ತಿ ಮಾಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಎಸ್.ಪಿ. ಯಶೋದಾ ವಂಟಗೋಡಿ, ‘ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಬಳಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಕ್ಲೀನರ್ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ’ ಎಂದರು.

‘ಧಾರವಾಡದ ಅನ್ವರ್ ಮತ್ತೇಸಾಬನವರ, ಹಿರೇಕಂಬಿಯ ಹಜರತ್ಅಲಿ ಮಕ್ತುಮಸಾಬ ಲಗಳಿ, ಅಮೀರ್ಖಾನ್ ಅಬ್ದುಲ್ಖಾನ್ ಪಠಾಣ, ಕಿತ್ತೂರಿನ ಇಬ್ರಾಹಿಂ ರಿಯಾಜ್ ಅಹ್ಮದ್ ಬೀಡಿ, ಹುಬ್ಬಳ್ಳಿ ಯಲ್ಲಾಪುರ ಓಣಿಯ ಆಷ್ಪಕ್ ಬಾಬುಲಾಲ ಚನ್ನಾಪುರ, ಹಳೇ ಹುಬ್ಬಳ್ಳಿ ಸದರಸೋಫಾದ ಸದ್ದಾಂ ಮಹ್ಮದ್ರಫೀಕ್ ಹಕೀಂ, ರಫೀಕ್ ಗೂಡುಸಾಬ ಎಲಿಗಾರ, ಆಸ್ಪಕ್ ಮಹಬೂಬಸಾಬ ಮಕಾಂದಾರ, ಜಿಷಾನ್ ಮಹಬೂಬಸಾಬ ಕಂಚಗಾರ ಬಂಧಿತರು. ಅವರಿಂದ ₹ 40 ಲಕ್ಷ ನಗದು, ಮಹೀಂದ್ರಾ ಥಾರ್, ಸ್ವಿಫ್ಟ್ ಕಾರು ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

ದೂರು ನೀಡಲು ನಿರಾಕರಿಸಿದ್ದ ಚಾಲಕ: ‘ಚಾಲಕ ಕೋಡಿವಾಡದ ಶರಣಪ್ಪ ಮಾಗಡಿ ಹಾಗೂ ಕ್ಲೀನರ್ ಅನ್ವರ್, ಲಾರಿಯಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ಕಡೆ ಹೊರಟಿದ್ದರು. ಮಾ. 28ರಂದು ನಸುಕಿನಲ್ಲಿ ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಬಳಿ ಕಾರಿನಲ್ಲಿ ಬಂದಿದ್ದ ಆರೋಪಿಗಳು, ಲಾರಿ ಅಡ್ಡಗಟ್ಟಿ ಗಾಜು ಒಡೆದು ಟೂಲ್ ಬಾಕ್ಸ್ನಲ್ಲಿದ್ದ ಹಣದ ಬ್ಯಾಗ್ ದರೋಡೆ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದರೋಡೆ ಬಗ್ಗೆ ಯಾರೊಬ್ಬರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಅದೇ ದಿನ ಮೋಟೆಬೆನ್ನೂರು ಬಳಿ ಅಪಘಾತವಾಗಿತ್ತು. ಅದನ್ನು ಪರಿಶೀಲಿಸಿ ಪೊಲೀಸರು ಠಾಣೆಯತ್ತ ವಾಪಸು ಹೊರಟಿದ್ದಾಗ, ಲಾರಿ ಗಾಜು ಒಡೆದಿರುವುದನ್ನು ಕಂಡು ಚಾಲಕನನ್ನು ಪ್ರಶ್ನಿಸಿದ್ದರು. ನನ್ನನ್ನು ಬೆದರಿಸಿ ಮೊಬೈಲ್ ಕಿತ್ತುಕೊಂಡು ಹೋಗಿರುವುದಾಗಿ ಚಾಲಕ ಹೇಳಿದ್ದರು. ದೂರು ನೀಡಲು ನಿರಾಕರಿಸಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗಲೇ, ಹಣದ ಬ್ಯಾಗ್ ದರೋಡೆ ಆಗಿರುವ ಸಂಗತಿ ಬಾಯ್ಬಿಟ್ಟಿದ್ದರು’ ಎಂದು ಮೂಲಗಳು ಹೇಳಿವೆ.

ದಾವಣಗೆರೆ ಚುನಾವಣೆಗೆ ಸಾಗಿಸುತ್ತಿದ್ದ ಶಂಕೆ: ದಾವಣಗೆರೆಯ ಚುನಾವಣೆಗಾಗಿ ವ್ಯಕ್ತಿಯೊಬ್ಬರಿಗೆ ಹವಾಲಾ ಮೂಲಕ ಹಣ ಸಾಗಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ. ಲಾರಿಯಲ್ಲಿ ₹ 1 ಕೋಟಿಗೂ ಹೆಚ್ಚು ಹಣವಿತ್ತೆಂಬ ಮಾಹಿತಿ ಹರಿದಾಡುತ್ತಿದೆ.

‘ಲಾರಿ ಟೂಲ್ಬಾಕ್ಸ್ನಲ್ಲಿದ್ದ ಹಣದ ಚೀಲ ನೋಡಿದ್ದ ಕ್ಲೀನರ್, ಇತರೆ ಆರೋಪಿಗಳಿಗೆ ಹೇಳಿ ದರೋಡೆ ಮಾಡಿಸಿದ್ದ. ಅದಕ್ಕಾಗಿ ಸ್ನೇಹಿತರ ವಾಹನಗಳನ್ನು ಬಳಸಲಾಗಿತ್ತು’ ಎಂಬ ಮಾಹಿತಿ ಲಭ್ಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-43-766122074

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.