ಹಾವೇರಿ: ಜಿಲ್ಲೆಯ ಸವಣೂರಿನಲ್ಲಿ ನಕಲಿ ಗೊಬ್ಬರ ಮಾರಲು ಯತ್ನಿಸುತ್ತಿದ್ದ ತಂಡವನ್ನು ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದು, 180 ಚೀಲ ನಕಲಿ ಗೊಬ್ಬರವನ್ನು ಜಪ್ತಿ ಮಾಡಿದ್ದಾರೆ.

ಸವಣೂರು ನಗರದ ಟೀಚರ್ ಕಾಲೊನಿಯ ಹೊರವಲಯದಲ್ಲಿರುವ ರಸ್ತೆಯ ಮೂಲಕ ಕ್ಯಾಂಟರ್ ವಾಹನದಲ್ಲಿ ನಕಲಿ ಗೊಬ್ಬರ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಹಾಯಕ ಕೃಷಿ ನಿರ್ದೇಶಕರಾದ ಸವಿತಾ ಚಕ್ರಸಾಲಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಾಹನ ಸಮೇತ ಗೊಬ್ಬರವನ್ನು ಪತ್ತೆ ಮಾಡಿದ್ದಾರೆ.

ನಕಲಿ ಗೊಬ್ಬರದ ಬಗ್ಗೆ ಸವಿತಾ ಅವರು ಸವಣೂರು ಠಾಣೆಗೂ ದೂರು ನೀಡಿದ್ದಾರೆ. ಸಾಗಣೆ ವಾಹನದಲ್ಲಿದ್ದ ತಡಸದ ಮಂಜು ಹಾಗೂ ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದ ಪ್ರಕಾಶ ಗುರುಸಿದ್ದಪ್ಪ ಬೆನಕನಹಳ್ಳಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಆರೋಪಿಗಳು ಗುರುವಾರ ಬೆಳಿಗ್ಗೆ ಕ್ಯಾಂಟರ್ (ಕೆಎ 22 ಡಿ 6991) ವಾಹನದಲ್ಲಿ ಗೊಬ್ಬರ ಕೊಂಡೊಯ್ಯುತ್ತಿದ್ದರು. ‘ಧನಾ ಧನಾ ಕಾಶಾಧಾರ ಗೋಧಾವರಿ’ ಎಂಬ ಅಕ್ಷರ ಬರೆದ ಚೀಲಗಳು ವಾಹನದಲ್ಲಿದ್ದವು. ಕೃಷಿ ಉಪಯೋಗಕ್ಕೆ ಮಾತ್ರ ಎಂದೂ ಬರೆಯಲಾಗಿತ್ತು. ಉತ್ಪಾದಕರು ಹಾಗೂ ಮಾರ್ಕೆಟಿಂಗ್; ಕಲಬುರಗಿ ಬಿಕೆಸಿಟಿ ಎಂದು ನಮೂದಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಚೀಲದಲ್ಲಿದ್ದ ರಸಾಯನಿಕ ಅಂಶಗಳನ್ನು ಗಮನಿಸಿದಾಗ, ಅದು ನಕಲಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಜೊತೆಗೆ, ಗೊಬ್ಬರದ ಬಗ್ಗೆ ಯಾವುದೇ ದಾಖಲೆಯನ್ನೂ ನೀಡಿಲ್ಲ. ಪರವಾನಗಿಯೂ ಇರಲಿಲ್ಲ. ₹ 2.03 ಲಕ್ಷ ಮೌಲ್ಯದ್ದು ಎನ್ನಲಾದ ತಲಾ 50 ಕೆ.ಜಿ. ತೂಕದ 180 ಚೀಲಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಯಾವುದೇ ಪರವಾನಗಿ ಇಲ್ಲದೇ, ರೈತರಿಗೆ ನಕಲಿ ಗೊಬ್ಬರ ಮಾರಾಟ ಮಾಡಲು ಕೊಂಡೊಯ್ಯಲಾಗುತ್ತಿತ್ತು. ರೈತರಿಗೆ ಮೋಸ ಮಾಡುವ ಜಾಲ ಇದಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಗೊಬ್ಬರ ಎಲ್ಲಿಂದ ಬಂದಿತ್ತು ? ಎಲ್ಲಿಗೆ ಹೋಗುತ್ತಿತ್ತು ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-22-968771694

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.