ಸವಣೂರು: ಸಾಲಿ ದುರ್ಗಾದೇವಿ ಜಾತ್ರಾ ಮಹೋತ್ಸವದ ಮೆರವಣಿಗೆ ಸೋಮವಾರ ನೆರವೇರಿತು.

ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಸಾಲಿ ದುರ್ಗಾ ದೇವಿಯ ಜಾತ್ರಾ ಮಹೋತ್ಸವದ ದ್ವಿತೀಯ ವರ್ಷದ ಅಂಗವಾಗಿ ಪ್ರಾಥಃಕಾಲದಿಂದಲೇ ದೇವಸ್ಥಾನ ಆವರಣದಲ್ಲಿ ಭಕ್ತಿಭಾವದ ವಾತಾವರಣ ಮನೆ ಮಾಡಿತ್ತು.

ಮುತೈದೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಶೃದ್ಧೆ ಹಾಗೂ ಭಕ್ತಿಭಾವದಿಂದ ನೆರವೇರಿತು. ದೇವಿಯ ಮುಂದೆ ಸಾಲಾಗಿ ನಿಂತ ಮುತೈದೆಯರು ತಮ್ಮ ಕುಟುಂಬದ ಕಲ್ಯಾಣ, ಸಂತಾನಸೌಭಾಗ್ಯ ಹಾಗೂ ಶಾಂತಿ–ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಪಲ್ಲಕ್ಕಿ ಮೆರವಣಿಗೆ ಹಾಗೂ ಕುಂಭ ಮೆರವಣಿಗೆಗೆ ಆರಕ್ಷಕ ನಿರೀಕ್ಷಕ ತಿಮ್ಮಣ್ಣ ಎಸ್. ಚಾಮನೂರ ಚಾಲನೆ ನೀಡಿದರು.

ಕುಂಭ ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಹೆಜ್ಜೆ ಹಾಕಿದರು.

ಭಟ್ಕಳ ಚಂಡೆ ವಾದ್ಯಗಳ ಘೋಷ ಧ್ವನಿಗಳು ಹಾಗೂ ಪಟ್ಟಣದ ಯುವಕರ ಜಾಂಜ್ ಮೇಳಗಳ ನಾದ ಮಾಧುರ್ಯಗಳಿಂದ ಆಕಾಶವನ್ನೇ ಕದಲಿಸುವಂತಾಯಿತು.

ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಶುಕ್ರವಾರ ಪೇಟೆ, ಭರಮಲಿಂಗೇಶ್ವರ ವೃತ್ತ, ಮುಖ್ಯ ಮಾರುಕಟ್ಟೆ, ಸಿಂಪಿಗಲ್ಲಿ ಹಾಗೂ ದಂಡಿನ ಪೇಟೆ ಮಾರ್ಗಗಳಿಂದ ಸಾಗಿದ ಮೆರವಣಿಗೆ ಎಲ್ಲೆಡೆ ಭಕ್ತಜನರಿಂದ ಅದ್ದೂರಿ ಸ್ವಾಗತ ನೀಡದರು.

ಮಾರ್ಗಮಧ್ಯೆ ಭಕ್ತರು ಹೂಮಾಲೆಗಳು ಅರ್ಪಿಸಿ, ಆರತಿಗಳು ಬೆಳಗಿಸಿ ದೇವಿಯ ದರ್ಶನ ಪಡೆದರು.

ಕೆ.ಇ.ಬಿ ಗಣೇಶ ದೇವಸ್ಥಾನದಿಂದ ಸಾಗಿದ ಮೆರವಣಿಗೆ ಅಂತಿಮವಾಗಿ ಡಾ. ವಿ.ಕೆ ಗೋಕಾಕ ವೃತ್ತದ ಸಮೀಪವಿರುವ ಶ್ರೀ ಸಾಲಿ ದುರ್ಗಾದೇವಿ ದೈವ ಸನ್ನಿಧಿ ಆವರಣದಲ್ಲಿ ಸಮಾಪ್ತಿಯಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-22-905904780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.