ಸವಣೂರು (ಹಾವೇರಿ): ‘ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ಜಯಂತ್ಯುತ್ಸವ’ ಅಂಗವಾಗಿ ಪಟ್ಟಣದಲ್ಲಿ ಮಂಗಳವಾರ ಅದ್ಧೂರಿ ಮೆರವಣಿಗೆ ನಡೆಯಿತು.

ಪಟ್ಟಣದ ವಿ.ಕೃ. ಗೋಕಾಕ ವೃತ್ತದಿಂದ ಆರಂಭವಾದ ಮೆರವಣಿಗೆಗೆ ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಚಾಲನೆ ನೀಡಿದರು. ಅಂಬೇಡ್ಕರ್ ಹಾಗೂ ಜಗಜೀವನರಾಂ ಅವರ ಭಾವಚಿತ್ರಗಳು ಮೆರವಣಿಗೆಯಲ್ಲಿದ್ದವು. ರಸ್ತೆಯುದ್ದಕ್ಕೂ ಇಬ್ಬರೂ ಮಹಾನ್ ವ್ಯಕ್ತಿಗಳಿಗೆ ಜನರು ಜೈ ಘೋಷ ಕೂಗಿದರು.

ಗೋಕಾಕ ವೃತದಿಂದ ಹೊರಟ ಮೆರವಣಿಗೆಯು ಬಿ.ಆರ್. ಅಂಬೇಡ್ಕರ ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ, ಶಿಂಪಿಗಲ್ಲಿ, ಮುಖ್ಯ ಮಾರುಕಟ್ಟೆ, ಅಂಚೆ ಕಚೇರಿ ರಸ್ತೆ ಮಾರ್ಗವಾಗಿ ಸಾಗಿತು. ವಿ.ಕೃ ಗೋಕಾಕ ಭವನದಲ್ಲಿ ಸಮಾಪ್ತಿಗೊಂಡಿತು. ನಂತರ, ವೇದಿಕೆ ಕಾರ್ಯಕ್ರಮ ಜರುಗಿತು.

ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿದ ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ‘ದೇಶದ ಏಕತೆ ಮತ್ತು ಪ್ರಗತಿಯ ಮೂಲವೇ ಸಂವಿಧಾನಿಕ ಮೌಲ್ಯಗಳ ಪಾಲನೆ. ಪ್ರತಿಯೊಬ್ಬ ನಾಗರಿಕರು ತಮ್ಮ ಕರ್ತವ್ಯವನ್ನು ಅರಿತು ಸಂವಿಧಾನದ ಆಶಯಗಳನ್ನು ಕಾಪಾಡಿದಾಗ ಮಾತ್ರ ರಾಷ್ಟ್ರ ಬಲಿಷ್ಠವಾಗುತ್ತದೆ’ ಎಂದರು.

‘ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿ ಉಳಿದಿದೆ. ಇಂದಿನ ಸಮಾಜಕ್ಕೂ ದಿಕ್ಕು ನೀಡುವ ಶಕ್ತಿಯನ್ನು ಹೊಂದಿವೆ. ಸಂವಿಧಾನಿಕ ಮೌಲ್ಯಗಳ ಪಾಲನೆ, ಪ್ರಾಮಾಣಿಕತೆ, ಧೈರ್ಯ, ಸಾಮಾಜಿಕ ನ್ಯಾಯ, ಜನೋಪಕಾರ ಮತ್ತು ಶಿಕ್ಷಣದ ಮೂಲಕ ಸಮಾನತೆ ಇವುಗಳೇ ಅವರ ಜೀವನದ ಮೂಲ ತತ್ವಗಳಾಗಿವೆ’ ಎಂದರು.

‘ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಅಂಬೇಡ್ಕರ್, ಶಿಕ್ಷಣವೇ ಸಮಾನತೆ ಸಾಧಿಸುವ ಶಕ್ತಿಯಾಗಿದೆ ಎಂಬುದನ್ನು ತೋರಿಸಿದ್ದಾರೆ. ಅವರ ಶಿಕ್ಷಣ ಚಳವಳಿಗಳು ಅನೇಕ ಜನರ ಜೀವನದಲ್ಲಿ ಬೆಳಕನ್ನು ತಂದಿವೆ. ಅಂಬೇಡ್ಕರ್ ಅವರ ಮೌಲ್ಯಗಳು ಕೇವಲ ಇತಿಹಾಸದ ಭಾಗವಾಗಿರದೇ, ಇಂದಿನ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿವೆ’ ಎಂದರು.

‘ಅಂಬೇಡ್ಕರ್ ಹಾಗೂ ಜಗಜೀವನರಾಂ ಅವರ ದೂರದೃಷ್ಟಿ, ಇಂದು ನಮ್ಮ ಆಡಳಿತ ವ್ಯವಸ್ಥೆಗೆ ಮಾರ್ಗದರ್ಶಕವಾಗಿದೆ. ಅಧಿಕಾರಿಗಳು ಜನಪರ ಮನೋಭಾವದಿಂದ ಕೆಲಸ ಮಾಡಿ ರೈತರು, ಬಡವರು, ಶ್ರಮಿಕರು ಹಾಗೂ ಪರಿಶಿಷ್ಟರ ಕಲ್ಯಾಣಕ್ಕಾಗಿ ಶ್ರಮಿಸಬೇಕು’ ಎಂದು ಹೇಳಿದರು.

ತಹಶೀಲ್ದಾರ ರವಿಕುಮಾರ ಕೊರವರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ, ಮುಖಂಡರಾದ ಸುಭಾಸ ಮಜ್ಜಗಿ, ನಾಗಪ್ಪ ತಿಪ್ಪಕ್ಕನವರ, ಲಂಕಪ್ಪ ಒಡಕಮ್ಮನವರ, ಶಿವಾನಂದ ಹುಲ್ಲಮ್ಮನವರ, ರಂಗಪ್ಪ ಮೈಲಮ್ಮನವರ, ಮಾರುತಿ ಬಣಕಾರ, ಉಮೇಶ ಮೈಲಮ್ಮನವರ, ಲಕ್ಷ್ಮಣ ಕನವಳ್ಳಿ, ಅಡಿವೆಪ್ಪ ಹರಿಜನ, ಆನಂದ ವಡಕ್ಕಮ್ಮನವರ, ಪುಟ್ಟಪ್ಪ ಕ್ಯಾಡದ, ಬಸವರಾಜ ಮೈಲಮ್ಮನವರ, ನವೀನ ಬಂಡಿವಡ್ಡರ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-22-1834086376

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.