ಹಾವೇರಿ: ಜಿಲ್ಲೆಯ ಸವಣೂರು ತಾಲ್ಲೂಕಿನ ಜಲ್ಲಾಪೂರದ ಬಸವಣ್ಣ ದೇವರ ಜಾತ್ರಾ ಮಹೋತ್ಸವವನ್ನು ಮಾರ್ಚ್ 26ರಿಂದ ಆಚರಿಸಲು ಭಕ್ತರು ತಯಾರಿ ನಡೆಸುತ್ತಿದ್ದಾರೆ.

ಮಾರ್ಚ್ 26ರಂದು ಸಂಜೆ ಭಕ್ತರ ಸಮ್ಮುಖದಲ್ಲಿ ಹೂವಿನ ತೇರು ಜರುಗಲಿದೆ. ಮಾ. 27ರಂದು ಬೆಳಿಗ್ಗೆ ಬಸವಣ್ಣ ದೇವರಿಗೆ ವಿಶೇಷ ಅಭಿಷೇಕದ ಪೂಜೆ ನಡೆಯಲಿದೆ. ಅಂದು ಸಂಜೆ ವಾದ್ಯ–ವೈಭವದೊಂದಿಗೆ ಬಸವೇಶ್ವರರ ಮಹಾ ರಥೋತ್ಸವ ಜರುಗಲಿದೆ.

ಅಂದು ರಾತ್ರಿ 10.30 ಗಂಟೆಗೆ ಬಸವೇಶ್ವರ ನವ ತರುಣ ನಾಟ್ಯ ಸಂಘದಿಂದ ‘ಸರ್ಕಾರಕ್ಕೇನು ಗೊತ್ತು ಅನ್ನದಾತನ ತಾಕತ್ತು’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮಾ. 28ರಂದು ಸಂಜೆ ಕಡುಬಿನ ಕಾಳಗ ಹಾಗೂ ಬಯಲು ಜಂಗಿ ಕುಸ್ತಿಗಳು ನಡೆಯಲಿವೆ. ಕಡುಬಿನ ಕಾಳಗದಲ್ಲಿ ಭಕ್ತರು, ಪಾದಕಟ್ಟೆಗೆ ತೆಂಗಿನ ಕಾಯಿಗಳನ್ನು ಒಡೆಯಲಿದ್ದಾರೆ ಎಂದು ಜಾತ್ರಾ ಸಮಿತಿಯ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-22-367438955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.