ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಹುಲಿಕಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೊಠಡಿಯಲ್ಲಿದ್ದ ಎಲ್ಪಿಜಿ ಸಿಲಿಂಡರ್ ಕಳ್ಳತನವಾಗಿದ್ದು, ಈ ಸಂಬಂಧ ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶಾಲೆಯ ಶಿಕ್ಷಕ ಪ್ರಶಾಂತ ವಡಕನಗೌಡ ಮರಿಗೌಡ್ರ ಅವರು ಸಿಲಿಂಡರ್ ಕಳ್ಳತನ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಂಕಾಪುರ– ಹುನಗುಂದ ರಸ್ತೆಗೆ ಹೊಂದಿಕೊಂಡು ಶಾಲೆಯಿದೆ. ಅಡುಗೆ ಕೊಠಡಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ₹ 2,400 ಮೌಲ್ಯದ ಎಚ್.ಪಿ. ಕಂಪನಿಯ ಸಿಲಿಂಡರ್ ಕದ್ದೊಯ್ದಿದ್ದಾರೆ’ ಎಂದರು.

ಬ್ಯಾಡಗಿ: ತಾಲ್ಲೂಕಿನ ಹೊಸ ಶಿಡೇನೂರ ಗ್ರಾಮದ ಮನೆಯಲ್ಲಿ ಬುಧವಾರ ಅಭಿಷೇಕ ಅಶೋಕ ತೆವರಿ (22) ಹೊಸ ಪ್ಯಾನ್ ಜೋಡಿಸಲು ಮುಂದಾದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ಯುಪಿಎಸ್ ಅಳವಡಿಸಿದ್ದರಿಂದಅದನ್ನು ಗಮನಿಸದೆ ಪ್ಯಾನ್ ಜೋಡಿಸಲು ಮುಂದಾದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-22-1093383222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.