ಶಿಗ್ಗಾವಿ: ತಾಲ್ಲೂಕಿನ ಅಂದಲಗಿ ಗ್ರಾಮದಲ್ಲಿ ಪಶುವೈದ್ಯರ ನಿರ್ಲಕ್ಷತೆಯಿಂದ ಮತ್ತು ಕರ್ತವ್ಯಲೋಪದಿಂದ ಬಡ ರೈತನ ಜಾನುವಾರ ಸಾವು ಸಂಭವಿಸಿದ್ದು, ತಪ್ಪಿತಸ್ಥರಾದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕನ್ನಡ ಜಾಗೃತ ವೇದಿಕೆ ತಾಲ್ಲೂಕು ಪದಾಧಿಕಾರಿಗಳು ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವರ ಮತ್ತು ತಾಲ್ಲೂಕ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ರಾಜೇಂದ್ರ ಅರಳೇಶ್ವರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಅಂದಲಗಿ ಗ್ರಾಮದ ಕೃಷ್ಣಪ್ಪ ವಡ್ಡರ ಎಂಬ ಬಡ ರೈತನಿಗೆ ಸೇರಿದ ಜಾನುವಾರು ಕೆಲ ದಿನಗಳಿಂದ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆಂದು ಪಶು ಆಸ್ಪತ್ರೆಯ ಗುತ್ತಿಗೆ ಆದಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗೆ ಚಿಕಿತ್ಸೆಗೆ ಸೂಚಿಸಿ, ಹೆಚ್ಚಿನ ಚಿಕಿತ್ಸೆಗೆ ಮೇಲಾಧಿಕಾರಿ ವೈದ್ಯರಿಗೆ ತಿಳಿಸಿ ಎಂದು ತಿಳಿಸಿದ್ದರು. ಆದರೂ ನಿರ್ಲಕ್ಷ್ಯ ವಹಿಸಿ ಅನ್ಯ ಕೆಲಸದಲ್ಲಿದ್ದೇನೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಅದರಿಂದಾಗಿ ಜಾನುವಾರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ಅದು ಸಾವು ಕಂಡಿದೆ. ಹೀಗಾಗಿ ಪಶು ಆಸ್ಪತ್ರೆಯ ವೈದ್ಯನ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿದರು. ಜೊತೆಗೆ ನಿರ್ಲಕ್ಷ್ಯ ವಹಿಸುವ ಇಂತಹ ಘಟನೆಗಳು ಆಗಾಗ ಕಂಡು ಬರುತ್ತಿದ್ದು, ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಕನ್ನಡ ಜಾಗೃತ ವೇದಿಕೆ ಹಾವೇರಿ ಜಿಲ್ಲಾ ಗೌರವಾಧ್ಯಕ್ಷ ಸುರೇಶ ಗೌಂಡಿ, ಕಾರ್ಯಧ್ಯಕ್ಷ ಜಗದೀಶ ಮಾನೇಗಾರ, ಅಧ್ಯಕ್ಷ ಹರೀಶಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಶಿವಾನಂದ ದೊಡಮನಿ, ಸಂತೋಷ್ ವಡ್ಡರ, ರಾಘವೇಂದ್ರ ಎಸ್. ಹನುಮಂತ ಎಸ್ ಕೆ. ಅಣ್ಣಪ್ಪ ಕೆಳಗೇರಿ. ಮನೋಜ ಗೌಡರ. ಜಗದೀಶ ಜವಳಿ. ಬಸವರಾಜ ವಿರಕ್ತಮಠ. ಗೂಳಪ್ಪ ಮೂಲಿಮನಿ ಹಾಗೂ ಸಂಘಟನೆ ಎಲ್ಲ ಪದಾಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-22-467158280

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.