ಹಾವೇರಿ: ಜಿಲ್ಲೆಯ ಶಿಗ್ಗಾವಿಯಲ್ಲಿ ನೂತನವಾಗಿ ನಿರ್ಮಿಸಲಾದ 250 ಹಾಸಿಗೆಯ ತಾಲ್ಲೂಕು ಆಸ್ಪತ್ರೆಯ ಕಟ್ಟಡವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸೋಮವಾರ ಉದ್ಘಾಟಿಸಿದರು.

ಶಿಗ್ಗಾವಿ ಪಟ್ಟಣಕ್ಕೆ ಹೊಂದಿಕೊಂಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಈ ಮಾರ್ಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಸುತ್ತಮುತ್ತಲಿನ ಗ್ರಾಮಗಳ ಜನರು ಆರೋಗ್ಯ ಚಿಕಿತ್ಸೆಗಾಗಿ ಶಿಗ್ಗಾವಿಗೆ ಬಂದು ಹೋಗುತ್ತಿದ್ದಾರೆ. ಸದ್ಯದ ತಾಲ್ಲೂಕು ಆಸ್ಪತ್ರೆ ಕಿರಿದಾಗಿದ್ದು, ಚಿಕಿತ್ಸೆಗೆ ಅಡ್ಡಿ ಉಂಟಾಗುತ್ತಿದೆ. ಇದೇ ಕಾರಣಕ್ಕೆ ಇದೀಗ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಿಸಲಾಗಿದೆ.

‘ಕೇವಲ ಗೋಡೆಗಳನ್ನು ನಿರ್ಮಿಸಿ, ವೈದ್ಯಕೀಯ ಉಪಕರಣ ಹಾಗೂ ವೈದ್ಯರು, ಸಿಬ್ಬಂದಿ ನೇಮಕವಿಲ್ಲದೇ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗುತ್ತಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಆರೋಪಿಸಿದ್ದರು. ಏಪ್ರಿಲ್ 17ರಂದು ನಿಗದಿಪಡಿಸಿದ್ದ ಉದ್ಘಾಟನಾ ಕಾರ್ಯಕ್ರಮವು ದಿಢೀರ್ ರದ್ದಾಗಿತ್ತು. ಆರೋಗ್ಯ ಸಚಿವರು ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದಾರೆ ಎಂಬುದನ್ನು ಅರಿತ ಜಿಲ್ಲಾಡಳಿತ ಹಾಗೂ ಗುತ್ತಿಗೆದಾರರು, ಸೋಮವಾರ (ಏ. 27) ಉದ್ಘಾಟನೆ ನಿಗದಿಪಡಿಸಿದ್ದರು.

ಸೋಮವಾರ ಸಂಜೆ ಶಿಗ್ಗಾವಿಗೆ ಬಂದ ದಿನೇಶ್ ಗುಂಡೂರಾವ್ ಹಾಗೂ ಪ್ರಲ್ಹಾದ ಜೋಶಿ, ರಿಬ್ಬನ್ ಕತ್ತರಿಸುವ ಮೂಲಕ ಕಟ್ಟಡ ಉದ್ಘಾಟಿಸಿದರು. ಕಟ್ಟಡದ ಒಳಭಾಗದಲ್ಲಿ ಸುತ್ತಾಡಿ ವೀಕ್ಷಿಸಿದರು.

ಉಪಕರಣ ಇಲ್ಲದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಪ್ರಶ್ನಿಸಿದ ಪ್ರಲ್ಹಾದ್ ಜೋಶಿ, ‘ಕೇವಲ ಕಟ್ಟಡ ಮಾತ್ರ ಉದ್ಘಾಟನೆ ಮಾಡುತ್ತಿರುವ ಬಗ್ಗೆ ಜನರು ಆರೋಪಿಸುತ್ತಿದ್ದಾರೆ. ಉಪಕರಣ, ವೈದ್ಯರು–ಸಿಬ್ಬಂದಿ ನೇಮಕ ಯಾವಾಗ ಮಾಡುತ್ತೀರಾ? ಈ ಆಸ್ಪತ್ರೆಯ ಸೇವೆ ಜನರಿಗೆ ಯಾವಾಗ ಲಭ್ಯವಾಗುತ್ತದೆ’ ಎಂದರು.

ಅದಕ್ಕೆ ಉತ್ತರಿಸಿದ ದಿನೇಶ, ‘ಈಗ ಕಟ್ಟಡ ಮಾತ್ರ ಉದ್ಘಾಟಿಸಲಾಗಿದೆ. ಉಪಕರಣಗಳ ಖರೀದಿಗಾಗಿ ಈಗಾಗಲೇ ₹ 14 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಮುಗಿಯಲು 90 ದಿನ ಬೇಕು. ಬಳಿಕ, ಉಪಕರಣಗಳ ಅಳವಡಿಕೆ ಪೂರ್ಣಗೊಳ್ಳಲಿದೆ. ಬಳಿಕವೇ ಆರೋಗ್ಯ ಸೇವೆಗಳು ದೊರೆಯಲಿವೆ’ ಎಂದು ಹೇಳಿದರು.

ಎಲ್ಲರ ಕೊಡುಗೆ: ಸುದ್ದಿಗಾರರ ಜೊತೆ ಮಾತನಾಡಿದ ಪ್ರಲ್ಹಾದ್ ಜೋಶಿ, ‘ಸ್ಥಳೀಯ ಜನರಿಗೆ ದೊಡ್ಡ ಆಸ್ಪತ್ರೆಯ ಅಗತ್ಯವಿತ್ತು. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಆಸಕ್ತಿಯಿಂದ ಕಟ್ಟಡ ಮಂಜೂರಾಗಿತ್ತು. ಈಗ ಕಟ್ಟಡ ಆಗಿರುವುದು ಸಂತೋಷದ ಸಂಗತಿ. ಎಲ್ಲರ ಕೊಡುಗೆಯೂ ಇದರಲ್ಲಿದೆ. ಉಪಕರಣ ಇಲ್ಲದ ಬಗ್ಗೆ ಆರೋಗ್ಯ ಸಚಿವರನ್ನು ಕೇಳಿದ್ದೇನೆ. ₹14 ಕೋಟಿ ಮೊತ್ತದ ಟೆಂಡರ್ ಕರೆದಿರುವುದಾಗಿ ಹೇಳಿದ್ದಾರೆ’ ಎಂದರು.

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಉಪಕರಣಗಳ ಜೋಡಣೆ ಆಗುತ್ತಿದ್ದಂತೆ, ಸದ್ಯದ ಆಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಹಳೇ ಆಸ್ಪತ್ರೆಯ ಕಟ್ಟಡವನ್ನೂ ನವೀಕರಣ ಮಾಡಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಮಾಡಲಾಗುವುದು’ ಎಂದು ಹೇಳಿದರು.

ಶಾಸಕ ಯಾಸೀರ ಅಹ್ಮದ್ ಖಾನ್, ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಯಾನಂದ, ಹಾವೇರಿ ಜಿಲ್ಲಾಸ್ಪತ್ರೆಯ ಶಶ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರು, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಲಕಾಜಯ್ಯ ಎಂ. ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-22-438587178

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.